/newsfirstlive-kannada/media/media_files/2025/11/15/narendra-modi-1-2025-11-15-08-37-48.jpg)
ಅಭೂತಪೂರ್ವ ಗೆಲುವಿನ ಮೂಲಕ ಬುದ್ಧನ ನಾಡನ್ನು ಕಮಲ ನೇತೃತ್ವದ ಎನ್​ಡಿಎ ತನ್ನ ಪದರದೊಳಗೆ ಹಾಕ್ಕೊಂಡಿದೆ. ಈ ಬಾರಿ ನಿತೀಶ್, ಮೋದಿ ಜೋಡಿ ಮೋಡಿ ಮಾಡಿದೆ. ಇದೇ ಹೊತ್ತಲ್ಲಿ ಪ್ರಧಾನಿ ಮೋದಿ ಪಶ್ಚಿಮ ಬಂಗಾಳದತ್ತ ದಂಡಯಾತ್ರೆ ಕೈಗೊಂಡಿದ್ದಾರೆ.
ಬುದ್ಧನ ನಾಡು ಬಿಹಾರದಲ್ಲಿ ಜಗಜಟ್ಟಿಗಳ ಮತ ಕದನದ ತೀರ್ಪು ಹೊರಬಿದ್ದಿದೆ. ನಿಮೋ ಆಟಕ್ಕೆ ಮಹಾಘಟಬಂಧನ ಛಿದ್ರವಾಗಿದೆ. ಗ್ಯಾರಂಟಿ ಎಂಬ ಉಚಿತಗಳ ಅಲೆಯಲ್ಲಿ ಕುರ್ಚಿ ಖಚಿತದ ಕನಸು ಕಂಡಿದ್ದ ಕಾಂಗ್ರೆಸ್​-ಆರ್​ಜೆಡಿ ಧೂಳೀಪಟವಾಗಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್​ಡಿಎ ಪ್ರಚಂಡ ಜಯ ಸಾಧಿಸಿದ ಬೆನ್ನಲ್ಲೇ ಕಮಲ ಪಾಳಯ ಮುಂದಿನ ಟಾರ್ಗೇಟ್​ ಬೆನ್ನಟ್ಟಿದೆ.
ಇದನ್ನೂ ಓದಿ: ರಾಘೋಪುರ ಕ್ಷೇತ್ರದಲ್ಲಿ ತಿಣುಕಾಡಿ ಗೆದ್ದ ತೇಜಸ್ವಿ ಯಾದವ್ : 11 ಸಾವಿರಕ್ಕೆ ಕುಸಿದ ಗೆಲುವಿನ ಅಂತರ
/filters:format(webp)/newsfirstlive-kannada/media/media_files/2025/11/14/rahul-gandhi-1-2025-11-14-16-10-34.jpg)
ದೀದಿ ನಾಡಿನತ್ತ ಕೇಸರಿ ಕಣ್ಣು
ಲೊಕಸಭಾ ಚುನಾವಣೆ ಬಳಿಕ ಮಹಾರಾಷ್ಟ್ರ, ಹರ್ಯಾಣ, ದೆಹಲಿ ನಂತರ ಬಿಹಾರದಲ್ಲೂ ಅರಳಿರುವ ಕಮಲದ ಮುಂದಿನ ಟಾರ್ಗೆಟ್​​ ಪಶ್ಚಿಮ ಬಂಗಾಳ.. ಇದನ್ನು ಖುದ್ದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ ದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಮೋದಿ, 25 ವರ್ಷಗಳ ನಂತರ ದೆಹಲಿ ಗೆದ್ದಿದ್ದೇವೆ. ಈಗ ಬಿಹಾರದಲ್ಲೂ ದೊಡ್ಡ ಸಂಖ್ಯೆ ಮೂಲಕ ವಿಜಯಶಾಲಿಯಾಗಿದ್ದೇವೆ. ಈ ನಮ್ಮದೇನಿದ್ರೂ ಮುಂದಿನ ಟಾರ್ಗೆಟ್​​ ಪಶ್ಚಿಮ ಬಂಗಾಳ ಎಂದಿದ್ದಾರೆ.
ಗಂಗಾ ನದಿ ಬಿಹಾರದ ಮೂಲಕ ಬಂಗಾಳಕ್ಕೆ ಹರಿಯುತ್ತದೆ. ಬಿಹಾರದಲ್ಲಿನ ಗೆಲುವು, ನದಿಯಂತೆ ಬಂಗಾಳದಲ್ಲಿ ಬಿಜೆಪಿಯ ಗೆಲುವಿಗೆ ದಾರಿ ಮಾಡಿಕೊಟ್ಟಿದೆ. ಬಂಗಾಳದ ಜನರ ಜೊತೆ ಬಿಜೆಪಿ ಸೇರಿ, ಪಶ್ಚಿಮ ಬಂಗಾಳ ರಾಜ್ಯದಿಂದ ಜಂಗಲ್ ರಾಜ್ ಅನ್ನು ಬೇರುಸಹಿತ ಕಿತ್ತುಹಾಕುವುದು ಖಂಡಿತ
ನರೇಂದ್ರ ಮೋದಿ, ಪ್ರಧಾನ ಮಂತ್ರಿ
ಇದೇ ವೇಳೆ ಎನ್‌ಡಿಎ ಗೆಲುವಿಗೆ ಮಹಿಳೆಯರು ಪ್ಲಸ್​ ಯುವಕರು ಎಂಬ M+Y ಸೂತ್ರ ಕಾರಣ ಅಂತಾನೂ ಮೋದಿ ಗೆಲುವಿನ ರಹಸ್ಯ ಬಿಟ್ಟಿಟ್ರು. ಆರ್‌ಜೆಡಿಯ ಕಟ್ಟಾ ಸರ್ಕಾರ್ ಎಂದಿಗೂ ಮರಳಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ:ಉಚಿತ ಕೊಡುಗೆಯಿಂದ ಬಿಹಾರದಲ್ಲಿ ಎನ್‌ಡಿಎಗೆ ಗೆಲುವು: VIP ಪಕ್ಷದ ಮುಖ್ಯಸ್ಥ ಮುಖೇಶ್ ಸಾಹ್ನಿ
/filters:format(webp)/newsfirstlive-kannada/media/media_files/2025/11/14/modi-nitish-kumar-2025-11-14-14-24-21.jpg)
ಮತ್ತೆ ಕಾಂಗ್ರೆಸ್ ನಾಯಕರು ಎಲ್ಲವನ್ನೂ ಇವಿಎಮ್​ನತ್ತ ಎತ್ತಾಕಿದ್ದಾರೆ. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿದ ಬೆನ್ನಲ್ಲೇ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿಹಾರ ಚುನಾವಣೆ ಆರಂಭದಿಂದಲೂ ನ್ಯಾಯಯುತವಾಗಿ ನಡೆದಿಲ್ಲ ಎಂದು ಆರೋಪಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಫಲಿತಾಂಶ ಆಶ್ಚರ್ಯಕರವಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.
ಒಟ್ಟಾರೆ ಗೆಲುವಿನ ತಂತ್ರ ಹೆಣೆದು, ಸಮಾಜದ ಕಟ್ಟಕಡೆಗಿನವರ ಸಮಸ್ಯೆಗಳನ್ನ ಅರಿತು ಶ್ರಮ ಹಾಕೋದು ಬಿಟ್ಟು ಹೀಗೆ ಮತಚೋರಿ ಅಂತ ಕುರ್ಚಿಯ ಕನಸು ಕಂಡ್ರೆ ಮುಂದೆ ಹಸ್ತ ಬಿಡಿ ರೇಖೆಗಳೂ ದೇಶದಿಂದ ಮಾತವಾಗೋದ್ರಲ್ಲಿ ಅಚ್ಚರಿಯಿಲ್ಲ. ಇತ್ತ ದ್ವಿಶತಕದ ಗಡಿ ದಾಟೋ ಮೂಲಕ ಎನ್​ಡಿಎ ಬಿಹಾರವನ್ನು ಕೊರಳಿಗೆ ಹಾಕ್ಕೊಂಡಿದೆ. ಮುಂದಿನ ವರ್ಷ ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದ್ದು ಸದ್ಯದ ಬಿಹಾರ ಗೆಲುವು ಕೇಸರಿ ಪಡೆಯ ಹುಮ್ಮಸ್ಸು ಹೆಚ್ಚಿಸಿದೆ.
ಇದನ್ನೂ ಓದಿ:ರವಿಂದ್ರ ಕಲಾ ಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ.. ತಿಮ್ಮಕ್ಕನ ಅಂತ್ಯಕ್ರಿಯೆ ಎಲ್ಲಿ ನಡೆಯುತ್ತೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us