/newsfirstlive-kannada/media/post_attachments/wp-content/uploads/2025/06/SALUMARAD_TIMMAKKA_NEW.jpg)
ಶತಾಯುಷಿ.. 114 ವರ್ಷದ ಸುರ್ದೀಘ ಜೀವನ.. ಮರಗಳ ಮಾತೆ.. ವೃಕ್ಷಮಾತೆ ಅಂತಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆದಿದ್ದ ಸಾಲುಮರದ ತಿಮ್ಮಕ್ಕ ಇನ್ನು ನೆನಪು ಮಾತ್ರ.. ಆಕೆಯ ಅಂತ್ಯಕ್ರಿಯೆಯ ಗೊಂದಲಕ್ಕೆ ಕೊನೆಗೂ ತೆರೆ ಎಳೆಯಲಾಗಿದೆ. ಹಾಗಿದ್ರೆ ತಿಮ್ಮಕ್ಕನ ಅಂತ್ಯಕ್ರಿಯೆ ಎಲ್ಲಿ ನಡೆಯುತ್ತೆ ಅನ್ನೋ ಡಿಟೇಲ್ಸ್​ ಇಲ್ಲಿದೆ.
ಮರಗಳಲ್ಲಿ ಮಕ್ಕಳನ್ನ ನೋಡಿದ ಮಮತೆಯ ತಾಯಿ ಇನ್ನಿಲ್ಲ!
ಇಡೀ ರಾಜ್ಯದ ಮನ ಕಣ್ಣೀರಲ್ಲಿದೆ.. ಮರಗಳ ಮೌನ ತಾಯಿಯನ್ನ ಕಳೆದುಕೊಂಡು ಅನಾಥವಾದ ಮಾತನ್ನ ಮತ್ತೆ ಮತ್ತೆ ಹೇಳ್ತಿದೆ. ಅವಳ 114 ವರ್ಷಗಳ ವಿಸ್ಮಯ ಹೆಜ್ಜೆ.. ತಾನೆಟ್ಟ ಮರಗಳ ಗಾಳಿಯಲ್ಲಿ ಗೆಜ್ಜೆ ನಾದದಂತಿತ್ತು. ಹಾಗೆ ನಡೆಯುತ್ತಿದ್ದ ತಿಮ್ಮಕ್ಕ ಜೀವನದ ನಡೆಗಿಯನ್ನ ನಿಲ್ಲಿಸಿದ್ದಾರೆ. ಅನಾರೋಗ್ಯದ ಸಮಸ್ಯೆಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದ ವನಮಾತೆ.. ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
ಇದನ್ನೂ ಓದಿ: ರಾಘೋಪುರ ಕ್ಷೇತ್ರದಲ್ಲಿ ತಿಣುಕಾಡಿ ಗೆದ್ದ ತೇಜಸ್ವಿ ಯಾದವ್ : 11 ಸಾವಿರಕ್ಕೆ ಕುಸಿದ ಗೆಲುವಿನ ಅಂತರ
/filters:format(webp)/newsfirstlive-kannada/media/media_files/2025/11/14/saalumarada-timmakka-2025-11-14-16-00-26.jpg)
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆದಿದ್ದ ಸಾಲುಮರದ ತಿಮ್ಮಕ್ಕರವರ ಅಂತಿಮ ದರ್ಶನವನ್ನ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಪಡೆದುಕೊಂಡಿದ್ದಾರೆ. ಇವತ್ತು ಮಧ್ಯಾಹ್ನ 12 ಗಂಟೆಗೆ ಜ್ಞಾನಭಾರತಿ ಬಳಿ ಕಲಾ ಗ್ರಾಮದ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಅಂತ ಸಾಕು ಮೊಮ್ಮಗ ಉಮೇಶ್​ ತಿಳಿಸಿದ್ದಾರೆ. ಆ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲಾಗಿದೆ.
ಶತಾಯುಷಿ ಸಾಲುಮರದ ತಿಮ್ಮಕ್ಕ ಅವರ ಅಂತಿಮ ದರ್ಶನಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನಲ್ಲಿರುವ ಹುಲಿಕಲ್ ಗ್ರಾಮದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಹಾಸನದ ಬೇಲೂರಿನಲ್ಲಿ 1 ಗಂಟೆ ಕಾಲ ಅಂತಿಮ ದರ್ಶನಕ್ಕೆ ಇಡಲಾಯ್ತು. ಬೇಲೂರಿನ ಮೂಲಕ ಬೆಂಗಳೂರಿಗೆ ಬೆಳಗ್ಗೆ 8 ಗಂಟೆ ವೇಳೆಗೆ ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರಕ್ಕೆ ಕರೆತರಲಾಗಿದೆ.
ಇದನ್ನೂ ಓದಿ:ಮೊದಲ ಟೆಸ್ಟ್ ಮೊದಲ ದಿನವೇ 159 ರನ್‌ಗೆ ದಕ್ಷಿಣ ಆಫ್ರಿಕಾ ಆಲೌಟ್ : ಜಸಪ್ರೀತ್ ಬುಮ್ರಾ 5 ವಿಕೆಟ್ ಸಾಧನೆ
/filters:format(webp)/newsfirstlive-kannada/media/media_files/2025/11/14/salumarda-timmakka-2-2025-11-14-12-30-12.jpg)
ಇವತ್ತು ಬೆಳಗ್ಗೆ 8 ಗಂಟೆಯಿಂದಲೇ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಮದ್ಯಾಹ್ನ ಜ್ಞಾನಭಾರತಿ ಕ್ಯಾಂಪಸ್​ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈ ವೇಳೆ ಸಿಎಂ, ಡಿಸಿಎಂ ಭಾಗಿಯಾಗಲಿದ್ದಾರೆ.
ತಿಮ್ಮಕ್ಕನವರು ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಅಪ್ರತಿಮ ಪರಿಸರವಾದಿ. ಒಟ್ಟಾರೆ, ವೃಕ್ಷಮಾತೆಯನ್ನು ಕಳೆದುಕೊಂಡು ಪರಿಸರ ಲೋಕ ಅನಾಥವಾಗಿದೆ. ಸಾಲು ಮರದ ತಿಮ್ಮಕ್ಕರಿಗೆ ಯಾವುದೇ ನಿರೀಕ್ಷೆ ಇಲ್ಲದಿದ್ರೂ ಸಿಕ್ಕ ಪ್ರಶಸ್ತಿ ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಮರಗಳನ್ನ ಮಕ್ಕಳಂತೆ ಸಾಕಿದ ಈ ಮಾಹಾತಾಯಿಗೆ ಕೋಟಿ ನಮನ.
ಇದನ್ನೂ ಓದಿ:ಬರೀ ಕಿರಿಕಿರಿ.. ನಿಮ್ಮ ಸ್ನೇಹ ಭಾವನೆ ಶತ್ರುತ್ವಕ್ಕೆ ಕಾರಣ ಆಗಬಹುದು ಎಚ್ಚರ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us