/newsfirstlive-kannada/media/media_files/2025/11/15/chirag-paswan-1-2025-11-15-09-16-05.jpg)
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್​ಡಿಎ ಡಬಲ್ ಸೆಂಚುರಿ ಬಾರಿಸಿದೆ. ಸಿಎಂ ನಿತೀಶ್ ಕುಮಾರ್​ ದರ್ಬಾರ್ ಮುಂದುವರಿದಿದೆ. ಮತ್ತೊಂದೆಡೆ ಬಿಹಾರದಲ್ಲಿ ಮತ್ತೊಂದು ಯುವಶಕ್ತಿಯ ಉದಯ ಆಗಿದ್ದು ಭವಿಷ್ಯದ ಭರವಸೆಯ ನಾಯಕನಾಗಿ ಚಿರಾಗ್ ಪಾಸ್ವಾನ್ ಹೊರಹೊಮ್ಮಿದ್ದಾರೆ.
ಇದು ನಿತೀಶ್ ಕುಮಾರ್ ಮಿಲಿಜುಲಿ ಸರ್ಕಾರದ ಸುಶಾಸನಕ್ಕೆ ಸಂದ ಅಭೂತಪೂರ್ವ ಗೆಲುವು. ಭರ್ತಿ ಎರಡು ದಶಕಗಳಿಂದ ಬಿಹಾರದಲ್ಲಿ ನಿತೀಶ್ ಕುಮಾರ್ ಕೇಂದ್ರಿತ ಕುದುರೆ ಸವಾರಿ ಮಾಡ್ತಿದೆ. ಈ ಬಾರಿ ಪಲ್ಟುರಾಮ್ ಖೇಲ್ ಖತಂ ಎಂದವರೇ ಹೇಳಹೆಸರಿಲ್ಲದಂತೆ ಚಿತ್ ಆಗಿದ್ದಾರೆ. ಜನಪ್ರಿಯ, ಜನಾನುರಾಗಿ ನಿತೀಶ್ ಕುಮಾರ್​ ಕೊರಳಿಗೆ ಬಿ‘ಹಾರ’ ಸಮರ್ಪಿತ ಆಗಿದೆ.
ಇದನ್ನೂ ಓದಿ: ರಾಘೋಪುರ ಕ್ಷೇತ್ರದಲ್ಲಿ ತಿಣುಕಾಡಿ ಗೆದ್ದ ತೇಜಸ್ವಿ ಯಾದವ್ : 11 ಸಾವಿರಕ್ಕೆ ಕುಸಿದ ಗೆಲುವಿನ ಅಂತರ
/filters:format(webp)/newsfirstlive-kannada/media/media_files/2025/11/15/chirag-paswan-2-2025-11-15-09-18-34.jpg)
ಬಿಹಾರದಲ್ಲಿ ನಿ-ಮೋ ಜಾದೂ..
ಬಿಹಾರ ಮಾತ್ರ ಅಲ್ಲ.. ಇಡೀ ಭಾರತದ ಅತ್ಯಂತ ಭರವಸೆಯ ನಾಯಕರ ಪಟ್ಟಿಯಲ್ಲಿ ನಿತೀಶ್ ಕುಮಾರ್ ಸೇರಿ ಹೋಗಿದ್ದಾರೆ. ಬಿಹಾರ ಅಸೆಂಬ್ಲಿ ಜಿದ್ದಾಜಿದ್ದಿನ ಕಣದಲ್ಲಿ ಎನ್​ಡಿಎ ಎದುರು ಎಂಜಿಬಿ ಹೀನಾಯ ಸೋಲನ್ನಪ್ಪಿದೆ. ನಿತೀಶ್ ಕುಮಾರ್​ ನಾಟೌಟ್ ಆಗ್ತಾರೆ ಎಂದಿದ್ದ ಎಕ್ಸಿಟ್ ಪೋಲ್ ಭವಿಷ್ಯ ನಿಜವಾಗಿದೆ.. ಮೋದಿ-ನಿತೀಶ್ ಜೋಡಿ ಕಮಾಲ್ ಮಾಡಿದೆ.. 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಬಿಹಾರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಿದೆ.. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ಸ್ಥಾನ ಗಳಿಸಿರುವ ಜೆಡಿಯು ಕ್ಯಾಪ್ಟನ್ ನಿತೀಶ್ ಕುಮಾರ್ 2005ರಿಂದ ಬಿಹಾರದ ಸಿಎಂ ಕುರ್ಚಿಯಲ್ಲಿ ವಿರಾಜಮಾನವಾಗಿದ್ದಾರೆ.
ಇದನ್ನೂ ಓದಿ: ಬಿಹಾರ ಆಯ್ತು.. ಬಿಜೆಪಿ ಮುಂದಿನ ಟಾರ್ಗೆಟ್​ ಘೋಷಿಸಿದ ಮೋದಿ..!
/filters:format(webp)/newsfirstlive-kannada/media/media_files/2025/11/15/chirag-paswan-2025-11-15-09-18-51.jpg)
ಈ ಬಾರಿಯೂ ಬಿಜೆಪಿ, ಎಲ್​ಜೆಪಿ ಮೈತ್ರಿಯೊಂದಿಗೆ ಸಿಎಂ ಸ್ಥಾನದಲ್ಲಿ ಮುಂದುವರಿಯೋದು ಪಕ್ಕಾ ಆಗಿದೆ.. ಇವತ್ತು ಎನ್​ಡಿಎಗೆ ಬಹುಮತ ಬರ್ತಿದ್ದಂತೆ 10ನೇ ಬಾರಿಗೆ ನಿತೀಶ್ ಕುಮಾರ್ ಸಿಎಂ, ಮತ್ತೆ ಸಿಎಂ ಗದ್ದುಗೆಗೆ ಏರೋದು ಪಕ್ಕಾ ಆಗಿದೆ. ಟೈಗರ್ ಝಿಂದಾ ಹೈ ಅಂತ ಕಾರ್ಯಕರ್ತರು ಪೋಸ್ಟರ್ ಹಾಕಿದ್ದು ಇನ್ನಷ್ಟೇ ಎರಡೂ ಕಡೆಯ ನಾಯಕರು ಕೂತು ಚರ್ಚಿಸಿ, ಸಿಎಂ ಅಭ್ಯರ್ಥಿಯನ್ನು ಘೋಷಿಸುವುದು ಬಾಕಿ ಇದೆ.
ಭವಿಷ್ಯದ ನಾಯಕನಾಗಿ ಚಿಗೊರೊಡೆದ ಚಿರಾಗ್​!
ಬಿಹಾರದಲ್ಲಿ ಮೋದಿ-ನಿತೀಶ್ ಮೋಡಿ ನಡುವೆ ಯುವ ನಾಯಕ ಚಿರಾಗ್ ಪಾಸ್ವಾನ್ ಕೂಡ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ್ದಾರೆ. 29 ಕ್ಷೇತ್ರಗಳ ಪೈಕಿ 22ರಲ್ಲಿ ಜಯಗಳಿಸುವ ಮೂಲಕ ಅಭೂತಪೂರ್ವ ಮೈಲಿಗಲ್ಲನ್ನೇರಿದ್ದಾರೆ. ಚಿರಾಗ್ ಪಕ್ಷ ಶೇ.69ರಷ್ಟು ವೋಟ್ ಪರ್ಸೆಂಟೇಜ್ ಪಡೆದಿದೆ. ಚುನಾವಣೆಗೂ ಮುನ್ನ ಸೀಟ್ ಶೇರಿಂಗ್​​ ವೇಳೆ ಭಾರಿ ಚೌಕಾಶಿ ಮಾಡಿ 29 ಕ್ಷೇತ್ರಗಳನ್ನ ಪಡೆದಿದ್ದ ಚಿರಾಗ್ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ಕೇಂದ್ರದಲ್ಲಿ ಮಂತ್ರಿಯಾಗಿರುವ ಚಿರಾಗ್ ಈ ಗೆಲುವಿನ ಮೂಲಕ ಬಿಹಾರದ ಭವಿಷ್ಯದ ನಾಯಕನಾಗಿ ಹೊರಹೊಮ್ಮಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ 5ರಲ್ಲಿ 5 ಸ್ಥಾನಗಳನ್ನೂ ಜಯಿಸಿದ್ದ ಚಿರಾಗ್ ಪಕ್ಷ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಗೆದ್ದಿತ್ತು. ಈ ಧಮಾಕ ಮಾಡಿದೆ.
ಒಟ್ಟಾರೆ, ಸಿಎಂ ನಿತೀಶ್ ಕುಮಾರ್ ವರ್ಚಸ್ಸು, ಬುದ್ಧಿವಂತಿಕೆ ಜೊತೆಗೆ ಬಿಜೆಪಿಯ ಮೈತ್ರಿ ಮಸೂರ ಗೆಲುವಿನ ನಗಾರಿ ಬಾರಿಸಿದೆ.. ಪ್ರತಿಷ್ಠಾಕಣದಲ್ಲಿ ಸ್ವತಃ ಪ್ರಧಾನಿ ಮೋದಿ ಕೂಡ ಅಗ್ನಿಪರೀಕ್ಷೆ ಗೆದ್ದಂತಾಗಿದೆ. ಕಳೆದ 20 ವರ್ಷಗಳಿಂದ ಬಿಹಾರದಲ್ಲಿ ಕೇಳಿ ಬರ್ತಿದ್ದ ‘ಜಹಾಂ ನಿತೀಶ್ ವಹಾಂ ಜೀತ್ ಸುನಿಶ್ಚಿತ್’ ಎಂಬ ಮಾತು ಮತ್ತೊಮ್ಮೆ ರುಜುವಾತಾಗಿದೆ..
ಇದನ್ನೂ ಓದಿ: ಬೂಮ್ ಬೂಮ್ ಬುಮ್ರಾ ದಾಳಿಗೆ ದಕ್ಷಿಣ ಆಫ್ರಿಕಾ ವಿಲವಿಲ.. ಆಸರೆಯಾದ KL ರಾಹುಲ್, ಸುಂದರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us