/newsfirstlive-kannada/media/media_files/2025/11/15/ipl-trade-list-1-2025-11-15-14-27-04.jpg)
ಐಪಿಎಲ್ 19ನೇ ಸೀಸನ್‌ನ ಹರಾಜು (IPL auction) ಡಿಸೆಂಬರ್‌ನಲ್ಲಿ ನಡೆಯಲಿದೆ. ಅದಕ್ಕೂ ಮೊದಲು ತಂಡಗಳು ತಮ್ಮ ಆಟಗಾರರನ್ನು ಉಳಿಸಿಕೊಳ್ಳಲಿರುವ ಲಿಸ್ಟ್ ಇಂದು ಸಂಜೆ ಬಿಡುಗಡೆ ಆಗಲಿದೆ. ಯಾವ ತಂಡಗಳು ಯಾವ ಆಟಗಾರರನ್ನು ಬಿಡುಗಡೆ ಮಾಡಲಿವೆ, ಯಾರನ್ನು ಉಳಿಸಿಕೊಳ್ಳಲಿದೆ ಅನ್ನೋದು ತಿಳಿಯಲಿದೆ. ಟ್ರೇಡ್ ಡೀಲ್ (Trade deal) ಮೂಲಕ ಕೆಲವು ಫ್ರಾಂಚೈಸಿಗಳು ತಂಡದಲ್ಲಿ ಬದಲಾವಣೆ ಮಾಡಿಕೊಂಡಿವೆ. ಅದನ್ನು ಬಿಸಿಸಿಐ ಇದೀಗ ಅಧಿಕೃತಗೊಳಿಸಿದೆ.
ರವೀಂದ್ರ ಜಡೇಜಾ
ಆಲ್‌ರೌಂಡರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಜಿ ನಾಯಕ ರವೀಂದ್ರ ಜಡೇಜಾ (Ravindra Jadeja) ಮುಂಬರುವ IPL ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡವನ್ನು ಪ್ರತಿನಿಧಿಸಲಿದ್ದಾರೆ. ಜಡೇಜಾ CSK ಪರ 12 ಋತುಗಳನ್ನ ಆಡಿದ್ದರು. ಅವರನ್ನು ರಾಜಸ್ಥಾನ್ ರಾಯಲ್ಸ್ ಒಪ್ಪಂದದ ಮೂಲಕ ಖರೀದಿ ಮಾಡಿದೆ. ಐಪಿಎಲ್ ಇತಿಹಾಸದಲ್ಲೇ ಇದು ಅತಿದೊಡ್ಡ ಡೀಲ್ ಎನ್ನಲಾಗಿದೆ. ಸಿಎಸ್​ಕೆಯಲ್ಲಿ 18 ಕೋಟಿಗೆ ಆಡುತ್ತಿದ್ದ ಜಡೇಜಾ, ರಾಜಸ್ಥಾನ್ ರಾಯಲ್ಸ್​ಗೆ 14 ಕೋಟಿಗೆ ಸೇಲ್ ಆಗಿದ್ದಾರೆ. ಸಂಜು ಸ್ಯಾಮ್ಸನ್​​ಗಾಗಿ ಈ ಟ್ರೇಡ್​ ಡೀಲ್ ನಡೆದಿದೆ.
ಸಂಜು ಸ್ಯಾಮ್ಸನ್
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಐಪಿಎಲ್ 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ. ಅವರ ಬೆಲೆ ₹18 ಕೋಟಿ. ಸ್ಯಾಮ್ಸನ್ 177 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಸಿಎಸ್‌ಕೆ ಅವರ ವೃತ್ತಿಜೀವನದಲ್ಲಿ ಮೂರನೇ ಫ್ರಾಂಚೈಸಿಯಾಗಿದೆ. 2013ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಸ್ಯಾಮ್ಸನ್, ಈ ಹಿಂದೆ ರಾಜಸ್ಥಾನಕ್ಕೂ ಮೊದಲು ದೆಹಲಿ ಕ್ಯಾಪಿಟಲ್ಸ್ ಪರ ಆಡಿದ್ದರು.
ಸ್ಯಾಮ್ ಕರನ್
ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದಿಂದ ರಾಜಸ್ಥಾನ್ ರಾಯಲ್ಸ್ (RR) ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಕರಣ್ ಅವರನ್ನು ರಾಜಸ್ಥಾನ್ ರಾಯಲ್ಸ್, 2.4 ಕೋಟಿ ರೂಪಾಯಿಗೆ ಖರೀದಿಸಿದೆ. 27 ವರ್ಷದ ಕರಣ್, 64 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಚೆನ್ನೈಗಿಂತ ಮೊದಲು ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಇದು ಅವರ ಮೂರನೇ ಐಪಿಎಲ್ ತಂಡವಾಗಿದೆ.
ಮೊಹಮ್ಮದ್ ಶಮಿ
ಮೊಹ್ಮದ್ ಶಮಿ ಸನ್‌ರೈಸರ್ಸ್ ಹೈದರಾಬಾದ್ (SRH)ನಿಂದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಹಿಂದಿನ ಆವೃತ್ತಿಯಲ್ಲಿ ಶಮಿಯನ್ನು ₹10 ಕೋಟಿಗೆ ಖರೀದಿಸಲಾಗಿತ್ತು. ಇದೀಗ ಅದೇ ಬೆಲೆಗೆ ಲಕ್ನೋ ಸೂಪರ್ ಜೈಂಟ್ಸ್ ಸೇರಿದ್ದಾರೆ. ಹೈದರಾಬಾದ್‌ಗೆ ಮೊದಲು ಶಮಿ ಗುಜರಾತ್ ಟೈಟಾನ್ಸ್‌ನೊಂದಿಗೆ ಇದ್ದರು. 2023 ರಲ್ಲಿ 17 ಪಂದ್ಯಗಳಲ್ಲಿ 28 ವಿಕೆಟ್‌ಗಳನ್ನು ಪಡೆದು ಪರ್ಪಲ್ ಕ್ಯಾಪ್ ಗೆದ್ದರು.
ಮಾಯಾಂಕ್
ಲೆಗ್-ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಕೋಲ್ಕತ್ತಾ ನೈಟ್ ರೈಡರ್ಸ್ (KKR)ನಿಂದ ಮುಂಬೈ ಇಂಡಿಯನ್ಸ್ (MI) ತಂಡಕ್ಕೆ ಮರಳಿದ್ದಾರೆ. ಅವರನ್ನು KKR ₹30 ಲಕ್ಷಕ್ಕೆ (30 ಲಕ್ಷ ರೂಪಾಯಿ) ಖರೀದಿಸಿತ್ತು. ಅದೇ ಬೆಲೆಗೆ MI ತಂಡವನ್ನು ಕೂಡಿಕೊಂಡಿದ್ದಾರೆ. ಮಾರ್ಕಂಡೆ ತಮ್ಮ ಐಪಿಎಲ್ ವೃತ್ತಿಜೀವನವನ್ನು ಮುಂಬೈ ಇಂಡಿಯನ್ಸ್ ಪರ ಪ್ರಾರಂಭಿಸಿದರು. 2018, 2019 ಮತ್ತು 2022 ರಲ್ಲಿ ಮುಂಬೈ ಪ್ರತಿನಿಧಿಸಿದ್ದ ಅವರು 2021ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಮತ್ತು 2023 ಮತ್ತು 2024 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದರು.
ಅರ್ಜುನ್ ತೆಂಡೂಲ್ಕರ್
ಬೌಲಿಂಗ್ ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್‌ನಿಂದ ಎಲ್​ಎಸ್​ಜಿ ತಂಡ ಸೇರಿಕೊಂಡಿದ್ದಾರೆ. ಅರ್ಜುನ್ ₹30 ಲಕ್ಷಕ್ಕೆ LSG ಸೇರಿದರು. 2021ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಅವರನ್ನು ಖರೀದಿಸಿತ್ತು. ಅಲ್ಲಿಂದ ಒಂದೇ ಒಂದು ಪಂದ್ಯವನ್ನು ಆಡದೇ 2023ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us