Advertisment

ಬಲಿಷ್ಠ ತಂಡ ಕಟ್ಟೋಕೆ ಧೋನಿ ಬಿಗ್​ಪ್ಲಾನ್.. ರಚಿನ್, ಕಾನ್ವೆಗೂ ಗೇಟ್​ಪಾಸ್​..!

ಮುಂದಿನ ಸೀಸನ್​ಗೂ ಮುನ್ನ ಬಲಿಷ್ಟ ತಂಡ ಕಟ್ಟೋಕೆ 5 ಬಾರಿಯ ಚಾಂಪಿಯನ್​ ತಂಡಗಳ ಸಿದ್ಧತೆ ಜೋರಾಗಿವೆ. ಬಿಗ್​ ಪರ್ಸ್​ನೊಂದಿಗೆ ಹರಾಜಿನ ಕಣದಲ್ಲಿ ಆಟಗಾರರ ಬೇಟೆಗಿಳಿಯಲು ಚೆನ್ನೈ ಮುಂದಾಗಿದೆ. ಅದಕ್ಕಾಗಿ ತಂಡದಲ್ಲಿರೋ ಸ್ಟಾರ್​​ಗಳನ್ನೇ ರಿಲೀಸ್​​ ಮಾಡೋಕೆ ಫ್ರಾಂಚೈಸಿ ರೆಡಿಯಾಗಿದೆ.

author-image
Ganesh Kerekuli
ಧೋನಿ ಮಾಡಿದ್ದು ದೊಡ್ಡ ತಪ್ಪು.. ಸಿಎಸ್​ಕೆ ಸೋಲಲು ಪ್ರಮುಖ ಕಾರಣ MSD..!
Advertisment

ಮುಂದಿನ ಸೀಸನ್​ಗೂ ಮುನ್ನ ಬಲಿಷ್ಟ ತಂಡ ಕಟ್ಟೋಕೆ 5 ಬಾರಿಯ ಚಾಂಪಿಯನ್​ ತಂಡಗಳ ಸಿದ್ಧತೆ ಜೋರಾಗಿವೆ. ಬಿಗ್​ ಪರ್ಸ್​ನೊಂದಿಗೆ ಹರಾಜಿನ ಕಣದಲ್ಲಿ ಆಟಗಾರರ ಬೇಟೆಗಿಳಿಯಲು ಚೆನ್ನೈ ಮುಂದಾಗಿದೆ. ಅದಕ್ಕಾಗಿ ತಂಡದಲ್ಲಿರೋ ಸ್ಟಾರ್​​ಗಳನ್ನೇ ರಿಲೀಸ್​​ ಮಾಡೋಕೆ ಫ್ರಾಂಚೈಸಿ ರೆಡಿಯಾಗಿದೆ. 

Advertisment

ಆಕ್ಷನ್​​ಗೆ ಚೆನ್ನೈ ಎಂಟ್ರಿ

ಈಗಾಗಲೇ ರಾಜಸ್ಥಾನ್​ ರಾಯಲ್ಸ್​ ಜೊತೆಗೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸಂಜು ಸ್ಯಾಮ್ಸನ್​ ಟ್ರೇಡ್​ ಡೀಲ್​ ಕುದುರಿಸಿಕೊಂಡಿದೆ. ಜಡೇಜಾ, ಸ್ಯಾಮ್​ ಕರನ್​ ಬಿಟ್ಟು ಕೊಟ್ಟು ಸಂಜುನ ಕರೆತರೋ ಡೀಲ್​ ಆಲ್​​ಮೋಸ್ಟ್​ ಡನ್​ ಆಗಿದ್ದು, ಅಧಿಕೃತ ಅನೌನ್ಸ್​ಮೆಂಟ್​ ಮಾತ್ರ ಬಾಕಿ ಉಳಿದಿದೆ.

ಇದನ್ನೂ ಓದಿ: ಜಡೇಜಾರ ನಿಷ್ಠೆಗೆ ಗೌರವ ಕೊಡದ CSK, ಎಷ್ಟು ಕೋಟಿಗೆ ರಾಜಸ್ಥಾನಕ್ಕೆ ಮಾರಿದೆ ಗೊತ್ತಾ..?

ಹೊರತಾಗಿ ಮತ್ತಷ್ಟು ಪ್ಲಾನ್​​ಗಳು ಚೆನ್ನೈ ಸೂಪರ್​ ಕಿಂಗ್ಸ್​ ವಲಯದಲ್ಲಿ ನಡಿದಿವೆ. ಹಲವು ಆಟಗಾರರನ್ನ ಬಿಟ್ಟು ಬರೋಬ್ಬರಿ 30 ಕೋಟಿ ಬಿಗ್​ ಪರ್ಸ್​ನೊಂದಿಗೆ ​ಮಿನಿ ಆಕ್ಷನ್​ ಅಖಾಡಕ್ಕಿಳಿಯಲು ತೆರೆ ಹಿಂದೆ ಭಾರೀ ಕಸರತ್ತು ನಡೀತಿದೆ. 

Advertisment

ಸ್ಟಾರ್​ ಬ್ಯಾಟರ್​ಗಳಿಗೆ ಚೆನ್ನೈನಿಂದ ಗೇಟ್​​ಪಾಸ್

ಬ್ಯಾಟಿಂಗ್​ ಆರ್ಡರ್​ನ ಬಲಿಷ್ಟಗೊಳಿಸೋಕೆ ಹೊರಟಿರೋ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಹಲವು ಬ್ಯಾಟ್ಸ್​ಮನ್​ಗಳನ್ನ ಹರಾಜಿಗೂ ಮುನ್ನ ರಿಲೀಸ್​ ಮಾಡೋಕೆ ದೃಢ ನಿರ್ಧಾರ ಮಾಡಿದೆ. ತಂಡದಲ್ಲಿರೋ ನ್ಯೂಜಿಲೆಂಡ್​​ನ ಸ್ಟಾರ್​ ಬ್ಯಾಟ್ಸ್​ಮನ್​ಗಳಾದ​ ಡೊವೋನ್​ ಕಾನ್ವೆ, ರಚಿನ್​ ರವೀಂದ್ರ ಕೂಡ ಈ ಲಿಸ್ಟ್​ನಲ್ಲಿದ್ದಾರೆ. ಜೊತೆಗೆ ಇಂಡಿಯನ್​ ಬ್ಯಾಟರ್​ಗಳಾದ ರಾಹುಲ್​ ತ್ರಿಪಾಠಿ, ವಿಜಯ್​ ಶಂಕರ್​, ದೀಪಕ್​ ಹೂಡರನ್ನೂ ರಿಲೀಸ್​ ಮಾಡಲು ಯೆಲ್ಲೋ ಆರ್ಮಿ ನಿರ್ಧರಿಸಿದೆ. 

ಇದನ್ನೂ ಓದಿ: 6 ಕೋಟಿ ವೀರನಿಗೂ ಸ್ಥಾನ ಇಲ್ಲ.. RCB ರಿಲೀಸ್ ಲಿಸ್ಟ್​ನಲ್ಲಿರೋ ಯಾರು, ಯಾರು?

ಬೌಲಿಂಗ್​ ವಿಭಾಗದಲ್ಲಿ ದೊಡ್ಡ ಆಟಗಾರರ ರಿಲೀಸ್​ಗೆ ಚೆನ್ನೈ ಮುಂದಾಗೋದು ಅನುಮಾನವಾಗಿದೆ. ಮತಿಶಾ ಪತಿರಣ, ನಥನ್​ ಎಲ್ಲಿಸ್​ ಟ್ರೇಡಿಂಗ್​ಗೆ ಬಂದ ಆಫರ್​ಗಳನ್ನ ಸಿಎಸ್​ಕೆ ಈಗಾಗಲೇ ರಿಜೆಕ್ಟ್​ ಮಾಡಿದೆ. ಒಂದು ವೇಳೆ ಮಾಡಿದ್ರೆ ಕಮಲೇಶ್​ ನಾಗರಕೋಟಿ, ಜೆಮ್ಮಿ ಓವರ್​​ಟನ್​ನ ರಿಲೀಸ್​ ಮಾಡೋ ಸಾಧ್ಯತೆಯಿದೆ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

MS Dhoni chennai super kings
Advertisment
Advertisment
Advertisment