/newsfirstlive-kannada/media/post_attachments/wp-content/uploads/2024/09/Mumbai-Indians_News.jpg)
ಐಪಿಎಲ್​ ರಿಟೆನ್ಶನ್​ ಅನೌನ್ಸ್​ಮೆಂಟ್​ಗೆ ಕೆಲವೇ ಗಂಟೆಗಳು ಬಾಕಿ. ಫ್ರಾಂಚೈಸಿಗಳ ನಡುವೆ ರಿಟೈನ್​-ರಿಲೀಸ್​ ಲೆಕ್ಕಾಚಾರಗಳು ಜೋರಾಗಿ ನಡೀತಿವೆ. ಉಳಿದೆಲ್ಲಾ ತಂಡಗಳಿಗಿಂತ ಹೆಚ್ಚು ಬಾರಿ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್​​ ನಡೆ ಕ್ರಿಕೆಟ್​ ಲೋಕದ ಕುತೂಹಲ ಕೆರಳಿಸಿದೆ.
ಕಳೆದ ಸೀಸನ್​ನಲ್ಲಿ ಅಟ್ಟರ್​ಫ್ಲಾಪ್​ ಪರ್ಫಾಮೆನ್ಸ್​ ನೀಡಿ ಕೊನೆ ಸ್ಥಾನಿಯಾಗಿ ಗುಡ್​ ಬೈ ಹೇಳಿದ ಸಿಎಸ್​ಕೆ, 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಮುಂಬೈ ಸ್ಟ್ರಾಂಗ್​ ಕಮ್​ಬ್ಯಾಕ್​ಗೆ ಸಜ್ಜಾಗಿವೆ. ಬಲಿಷ್ಟ ತಂಡವನ್ನ ಕಟ್ಟೋಕೆ ಲೆಕ್ಕಾಚಾರ ಹಾಕಿವೆ.
ಅರ್ಜುನ್​ ತೆಂಡುಲ್ಕರ್ ಟ್ರೇಡ್​​.!
ಐಪಿಎಲ್​ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್​ ತಂಡದಿಂದ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದೆ. ಸಚಿನ್​ ತೆಂಡುಲ್ಕರ್​ ಪುತ್ರ ಅರ್ಜುನ್​ ತೆಂಡುಲ್ಕರ್​ನ ತಂಡದಿಂದ ಟ್ರೇಡ್​ ಮಾಡಿದೆ. 30 ಲಕ್ಷ ಬೇಸ್​ ಪ್ರೈಸ್​ಗೆ ಲಕ್ನೋ ಸೂಪರ್​ ಜೈಂಟ್ಸ್​ಗೆ ಅರ್ಜುನ್​ ತೆಂಡುಲ್ಕರ್​ನ ಮುಂಬೈ ಟ್ರೇಡ್​ ಮಾಡಿದೆ. ಇದೇ ವೇಳೆ ​2 ಕೋಟಿ ಮೊತ್ತ ನೀಡಿ ಲಕ್ನೋದಲ್ಲಿದ್ದ ಆಲ್​ರೌಂಡರ್​ ಶಾರ್ದೂಲ್​ ಠಾಕೂರ್​​ನ ತಂಡಕ್ಕೆ ಕರೆ ತಂದಿದೆ. ಜೊತೆಗೆ ವಿಂಡೀಸ್​ ಬ್ಯಾಟರ್​ ಶೆಫ್ರೆನ್​​ ರುದರ್​ಫೋರ್ಡ್​ನ ಗುಜರಾತ್​ ಟೈಟನ್ಸ್​ನಿಂದ ಟ್ರೇಡ್​ ಮಾಡಿಕೊಂಡಿದೆ.
ಇದನ್ನೂ ಓದಿ:ಜಡೇಜಾರ ನಿಷ್ಠೆಗೆ ಗೌರವ ಕೊಡದ CSK, ಎಷ್ಟು ಕೋಟಿಗೆ ರಾಜಸ್ಥಾನಕ್ಕೆ ಮಾರಿದೆ ಗೊತ್ತಾ..?
ಸ್ಪಿನ್ನರ್​ಗಳ ಬೇಟೆಗಿಳಿದ ಅಂಬಾನಿ ಬ್ರಿಗೆಡ್
ಮುಂಬರುವ ಸೀಸನ್​ಗೂ ಮುನ್ನ ಅಂಬಾನಿ ಬ್ರಿಗೆಡ್​ ಮುಂಬೈ ಇಂಡಿಯನ್ಸ್​ ತಂಡ ಸ್ಪಿನ್ನರ್​ಗಳ ಬೇಟೆಗಿಳಿದಿದೆ. ಟ್ರೇಡಿಂಗ್​ ಅವಕಾಶದಲ್ಲಿ ತಂಡದ ಮಾಜಿ ಸ್ಪಿನ್ನರ್​ಗಳನ್ನ ವಾಪಸ್​ ಕರೆ ತರಲು ಶತಪ್ರಯತ್ನ ನಡೆಸ್ತಿದೆ. ಕೆಕೆಆರ್​​ ತಂಡದಲ್ಲಿರೋ ಮಯಾಂಕ್​ ಮಾರ್ಕಂಡೆ, ಸನ್​ರೈಸರ್ಸ್​ ಹೈದ್ರಾಬಾದ್​ ತಂಡದಲ್ಲಿರೋ ರಾಹುಲ್ ಚಹರ್​ ಟ್ರೇಡ್​ ಮೂಲಕ ಸೆಳೆಯೋಕೆ ಶತಪ್ರಯತ್ನ ನಡೆಸ್ತಿದೆ.
ಭಾರತೀಯ ಆಟಗಾರರ ಮೇಲೆ ಮುಂಬೈ ಕಣ್ಣು
ಮುಂಬೈ ಇಂಡಿಯನ್ಸ್​​ ತಂಡದ ಕಣ್ಣು ಇಂಡಿಯನ್​ ಆಟಗಾರರ ಮೇಲೆ ಬಿದ್ದಿದೆ. ​ಇಂಡಿಯನ್​ ಕೋರ್​ ಟೀಮ್​ ರೆಡಿ ಮಾಡೋಕೆ ಹೊರಟಿರೋ ಮುಂಬೈ ವಿದೇಶಿ ಆಟಗಾರರನ್ನ ರಿಲೀಸ್​ ಮಾಡೋಕೆ ಮುಂದಾಗಿದೆ. ಮುಜೀಬ್​ ಉರ್​ ರೆಹಮಾನ್​, ರೋಸಿ ಟೋಪ್ಲಿ, ಚರಿತ್​ ಅಸಲಂಕ, ಕಾಬಿನ್​ ಜೋಷ್​, ಬೆವೊನ್​ ಜೇಕಬ್ಸ್​ರಂತಾ ಆಟಗಾರರು ಮುಂಬೈ ರಿಲೀಸ್​ ಲಿಸ್ಟ್​ನಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us