/newsfirstlive-kannada/media/media_files/2025/09/01/ipl_teams-2025-09-01-14-21-24.jpg)
ಐಪಿಎಲ್ ಸೀಸನ್-19ರ ಪ್ಲೇಯರ್ಸ್ ರಿಟೆನ್ಶನ್ ಮತ್ತು ರಿಲೀಸ್​​ಗೆ ಅದ್ಧೂರಿ ತೆರೆ ಬಿದ್ದಿದೆ. ಈ ಬಾರಿ ಫ್ರಾಂಚೈಸಿ ಮಾಲೀಕರು ಸಖತ್ತಾಗೇ ಹೋಂವರ್ಕ್​​ ಮಾಡಿದ್ದಾರೆ. ವಿದೇಶಿ ಆಟಗಾರರಿಗೆ ಹೆಚ್ಚು ಒತ್ತು ನೀಡಿದ ಫ್ರಾಂಚೈಸಿಗಳು, ಲೋಕಲ್ ಪ್ಲೇಯರ್ಸ್​ ಮೇಲೆ ವಿಶ್ವಾಸವಿಟ್ಟು ಮಣೆ ಹಾಕಿವೆ.
ಕನ್ನಡಿಗರಿಬ್ಬರಿಗೂ ಕೈಕೊಟ್ಟ RCB ಫ್ರಾಂಚೈಸಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರೀಕ್ಷೆಯಂತೆ ಕೆಲ ಆಟಗಾರರನ್ನ ಕೈಬಿಟ್ಟಿದೆ. ಇಂಗ್ಲೆಂಡ್​​ನ ಲಿಯಾಮ್ ಲಿವಿಂಗ್​ಸ್ಟೋನ್, ಸೌತ್ ಆಫ್ರಿಕಾದ ಲುಂಗಿ ಎಂಗಿಡಿ, ನ್ಯೂಜಿಲೆಂಡ್​ನ ಟಿಮ್ ಟೈರ್ಫಟ್​ರನ್ನ ತಂಡದಿಂದ ರಿಲೀಸ್ ಮಾಡಿದೆ. ಕಳೆದ ಐಪಿಎಲ್​ ಸೀಸನ್​ನಲ್ಲಿ ದೇವದತ್ ಪಡಿಕ್ಕಲ್​​ಗೆ ​ರೀಪ್ಲೇಸ್​​ಮೆಂಟ್ ಪ್ಲೇಯರ್ ಆಗಿ ಆರ್​ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಕರ್ನಾಟಕದ ಮಯಾಂಕ್ ಅಗರ್​​ವಾಲ್ ಮತ್ತು ಮನೋಜ್ ಬಾಂಡಗೆಗೆ, ಫ್ರಾಂಚೈಸಿ ಕೈಕೊಟ್ಟಿದೆ.
ಇದನ್ನೂ ಓದಿ:ರೋಚಕ ಘಟ್ಟ ತಲುಪಿದ ಕೋಲ್ಕತ್ತ ಟೆಸ್ಟ್.. 2ನೇ ದಿನದಾಟದಲ್ಲಿ ಉರುಳಿದ್ದು 16 ವಿಕೆಟ್ಸ್..!
ಫಾರಿನರ್ಸ್​​ಗೆ ಬಿಗ್ ಥ್ಯಾಂಕ್ಯೂ ಹೇಳಿದ KKR
ಕೊಲ್ಕತ್ತಾ ನೈಟ್​ರೈಡರ್ಸ್​ ಫ್ರಾಂಚೈಸಿ, ವಿದೇಶದ ಬಿಗ್ ಪ್ಲೇಯರ್​ಗಳನ್ನ ತಂಡದಿಂದ ಕೈಬಿಟ್ಟು ಶಾಕ್ ನೀಡಿದೆ. ವೆಸ್ಟ್ ಇಂಡೀಸ್​​ನ ಌಂಡ್ರೆ ರಸೆಲ್, ಭಾರತದ ವೆಂಕಟೇಶ್ ಅಯ್ಯರ್, ಸೌತ್ ಆಫ್ರಿಕಾದ ಕ್ವಿಂಟನ್ ಡಿಕಾಕ್, ಎನ್ರಿಚ್ ನೋಕಿಯಾ ಮತ್ತು ಇಂಗ್ಲೆಂಡ್​ನ ಮೊಯಿನ್ ಅಲಿಗೆ ತಂಡದಿಂದ ಗೇಟ್​ಪಾಸ್ ನೀಡಿ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ.
ಚೆನ್ನೈ ​ಸೂಪರ್ ಚಮಕ್..!
ಐಪಿಎಲ್​ನ ಮೋಸ್ಟ್ ಸಕ್ಸಸ್​​ಫುಲ್ ಫ್ರಾಂಚೈಸಿ ಚೆನ್ನೈ ಸೂಪರ್​ಕಿಂಗ್ಸ್ ಲೆಕ್ಕಾಚಾರದಲ್ಲಿ ನಂಬರ್ 1. ಸದಾ ಎಚ್ಚರಿಕೆಯ ನಡೆ ಇಡೋ ಸಿಎಸ್​ಕೆ, ಪ್ಲೇಯರ್ಸ್​ ರಿಲೀಸ್​​ನಲ್ಲೂ ಜಾಣ್ಮೆ ಮೆರೆದಿದೆ. ನ್ಯೂಜಿಲೆಂಡ್​​ನ ರಚ್ಚಿನ್ ರವೀಂದ್ರ ಮತ್ತು ಡ್ವೇನ್ ಕಾನ್ವೆ, ಶ್ರೀಲಂಕಾದ ಮತೀಶ ಪತಿರಣ, ಭಾರತದ ದೀಪಕ್ ಹೂಡ ಮತ್ತು ರಾಹುಲ್ ತ್ರಿಪಾಠಿಯನ್ನ, ಚೆನ್ನೈ ತಂಡದಿಂದ ಕೈಬಿಟ್ಟಿದೆ. ಸಿಎಸ್​​ಕೆ ತಂಡದ ಸ್ಮಾರ್ಟ್ ಮೂವ್ ಅಂದ್ರೆ ತಪ್ಪಾಗಲ್ಲ.
ಬೇಡವಾದ ವಿದೇಶಿ ಆಟಗಾರರು
ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್​ ಮತ್ತು ರಾಜಸ್ಥಾನ್ ರಾಯಲ್ಸ್​ ತಂಡಗಳು, ವಿದೇಶಿ ಆಟಗಾರರನ್ನ ಮುಲಾಜಿಲ್ಲದೇ ಕಡೆಗಣಿಸಿವೆ. ಮುಂಬೈ ಇಂಗ್ಲೆಂಡ್​ ರಿಸಿ ಟಾಪ್ಲೆ ಮತ್ತು ಆಫ್ಘಾನಿಸ್ತಾನದ ಮುಜೀಬ್-ಉರ್-ರಹಮಾನ್​ರನ್ನ ಕೈಬಿಟ್ಟಿದ್ರೆ, ಪಂಜಾಬ್ ಕಿಂಗ್ಸ್​ ಆಸ್ಟ್ರೇಲಿಯಾದ ಜೋಷ್ ಇಂಗ್ಲೀಸ್, ಗ್ಲೇನ್ ಮ್ಯಾಕ್ಸ್​​ವೆಲ್ ಮತ್ತು ಌರೊನ್ ಹಾರ್ಡಿಯನ್ನ ರಿಲೀಸ್ ಮಾಡಿದೆ. ರಾಜಸ್ಥಾನ್ ರಾಯಲ್ಸ್​ ಶ್ರೀಲಂಕಾದ ವನಿಂದು ಹಸರಂಗ ಮತ್ತು ಮಹೀಶ್ ತೀಕ್ಷಣರನ್ನ ಹರಾಜಿಗೆ ಕಳುಹಿಸಿದೆ.
ಇದನ್ನೂ ಓದಿ:ಟೀಂ ಇಂಡಿಯಾ ಗೆಲುವಿಗೆ ಕೆಲವೇ ಕೆಲವು ರನ್ಸ್ ಅಗತ್ಯ.. ಆರಂಭದಲ್ಲೇ ಬಿಗ್ ಶಾಕ್..!
ಡೆಲ್ಲಿ ಕ್ಯಾಪಿಟಲ್ಸ್ ತಂಡ ಫಾಫ್ ಡುಪ್ಲೆಸಿ ಮತ್ತು ಆಸ್ಟ್ರೇಲಿಯಾದ ಜೇಮ್ಸ್-ಫ್ರೇಸರ್-ಮೆಕ್​ಗರ್ಕ್​​​​​​​​​​​​​​​​​​​​ರನ್ನ ರಿಟೇನ್ ಮಾಡಿಕೊಳ್ಳಲಿಲ್ಲ. ಲಕ್ನೋ ಸೂಪರ್​ಜೈಂಟ್ಸ್​ ಕಿಲ್ಲರ್ ಡೇವಿಡ್ ಮಿಲ್ಲರ್​​​​​​​​​​ ಮತ್ತು ಭಾರತದ ರವಿ ಬಿಷ್ನೋಯ್​​ಗೆ ಕೈಕೊಟ್ರೆ, ಸನ್​ರೈಸರ್ಸ್ ಹೈದ್ರಾಬಾದ್ ತಂಡ ಌಂಡ್ ಝಾಂಪಗೆ ಗೂಗ್ಲಿ ಹಾಕಿದೆ.
ಇವರೊಂದಿಗೆ ಕರ್ನಾಟಕದ ಅಭಿನವ್ ಮನೋಹರ್ ಮತ್ತು ಮನ್ವಂತ್ ಕುಮಾರ್ ಸಹ, ಫ್ರಾಂಚೈಸಿ ಮಾಲೀಕರ ಮನ ಗೆಲ್ಲಲು ವಿಫಲರಾಗಿದ್ದಾರೆ. ಒಟ್ನಲ್ಲಿ ಆಟಗಾರರ ರಿಲೀಸ್ ವಿಚಾರದಲ್ಲಿ ಯಾವ ತಂಡ ಸ್ಮಾರ್ಟ್ ಗೇಮ್ ಆಡಿದೆ ಅನ್ನೋದು ಮುಂದಿ ದಿನಗಳಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: ಇಬ್ಬರು ಕನ್ನಡಿಗರಿಗೆ ಗೇಟ್​ಪಾಸ್​ ಕೊಟ್ಟ RCB.. ರಿಲೀಸ್ ಮಾಡಿದ್ದು ಯಾರನ್ನ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us