/newsfirstlive-kannada/media/media_files/2025/11/16/kiccha-sudeep-2-2025-11-16-11-00-43.jpg)
ಗಿಲ್ಲಿ ಹಾಗೂ ರಕ್ಷಿತಾ ಬಿಗ್‌ಬಾಸ್ ಮನೆಯಲ್ಲಿ ಏನೇ ಮಾಡಿದ್ರೂ ಅವರಿಗೆ ಏನೂ ಮಾಡಲ್ವಾ? ಅನ್ನೋ ಅಭಿಪ್ರಾಯವಿತ್ತು. ಸುದೀಪ್ ಈ ವಾರ ಅದನ್ನು ಸುಳ್ಳು ಮಾಡಿದ್ದಾರೆ. ರಕ್ಷಿತಾ ಹಾಗೂ ಗಿಲ್ಲಿಗೆ ಸುದೀಪ್ ಫುಲ್ ಕ್ಲಾಸ್ ತಗೊಂಡಿದ್ದಾರೆ.
ಗಿಲ್ಲಿ ಈ ವಾರದ ಟಾಸ್ಕ್‌ಗಳಲ್ಲಿ ಸೇಫ್ ಟೀಂನಲ್ಲಿದ್ದರೆ, ರಕ್ಷಿತಾ ನಾಮಿನೇಟೆಡ್ ಟೀಂನಲ್ಲಿದ್ದರು. ಆದರೆ ಯಾವಾಗ ನಾಮಿನೇಟೆಡ್ ಟೀಂ ವಿನ್ ಆಗಿ ತಮ್ಮ ಟೀಂನಿಂದ ಸೇಫ್ ಟೀಂಗೆ ಒಬ್ಬರನ್ನು ಕಳುಹಿಸಬೇಕು ಅಲ್ಲಿಂದ ಒಬ್ಬರನ್ನು ತಮ್ಮ ಟೀಂಗೆ ಕರೆಸಿಕೊಳ್ಳಬೇಕು ಎನ್ನುವ ಪ್ರಶ್ನೆ ಬಂದಿತ್ತೋ ಆಗ ರಕ್ಷಿತಾ ತಮ್ಮ ಟೀಂನ ನಿರ್ಧಾರದ ವಿರುದ್ಧವೇ ತಿರುಗಿ ಬಿದ್ದಿದ್ದರು. ಇದೇ ವೇಳೆ ಗಿಲ್ಲಿ ಕೂಡ ರಕ್ಷಿತಾ ತಮ್ಮ ವಂಶದ ಕುಡಿ ಹಾಗೆ ಸರಳವಾಗಿ ಸೋಲಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ:ಇಬ್ಬರು ಕನ್ನಡಿಗರಿಗೆ ಗೇಟ್​ಪಾಸ್​ ಕೊಟ್ಟ RCB.. ರಿಲೀಸ್ ಮಾಡಿದ್ದು ಯಾರನ್ನ?
ಇದು ನಾಮಿನೇಟೆಡ್ ಟೀಂನವರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಇನ್ನೊಂದು ಟಾಸ್ಕ್‌ನ ಆರಂಭಕ್ಕೂ ಮೊದಲೇ ಗಿಲ್ಲಿ ರಕ್ಷಿತಾ ಕಿವಿಯಲ್ಲಿ ಏನೋ ಹೇಳಿದ್ದು ಕೂಡ ದೊಡ್ಡ ಗಲಾಟೆಗೆ ಕಾರಣವಾಗಿತ್ತು. ಇದನ್ನೇ ಇಟ್ಟುಕೊಂಡು ಸುದೀಪ್ ಶನಿವಾರದ ಎಪಿಸೋಡ್‌ನಲ್ಲಿ ಗಿಲ್ಲಿ ಹಾಗೂ ರಕ್ಷಿತಾಗೆ ಕ್ಲಾಸ್ ತಗೊಂಡಿದ್ದಾರೆ.
ಅವರ ನಡವಳಿಕೆಯನ್ನು ಸಮರ್ಥಿಸಿಕೊಳ್ಳೋಕೆ ಹೇಳಿದ್ದಾರೆ. ಅಲ್ಲದೇ ಇವರಿಬ್ಬರ ಈ ನಡವಳಿಕೆ ಒಂದು ಟೀಂ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅನ್ನೋದನ್ನೂ ಹೇಳಿದ್ದಾರೆ. ಇಬ್ಬರಿಗೂ ಸರಿಯಾಗೇ ಕ್ಲಾಸ್ ತಗೊಂಡಿದ್ದು, ಇಲ್ಲಿವರೆಗೂ ಇನೋಸೆಂಟ್ ತರ ಕಾಣಿಸುತ್ತಿದ್ದ ರಕ್ಷಿತಾ ಮೊದಲ ಬಾರಿ ತಾವೇ ಮಾಡಿದ್ದ ಗುಂಡಿಗೆ ಬಿದ್ದ ಹಾಗೆ ಆಗಿದ್ದಾರೆ. ಇನ್ನಾದ್ರೂ ತಪ್ಪನ್ನು ಅರಿತುಕೊಂಡು ಇವರಿಬ್ಬರು ತಿದ್ದಿಕೊಳ್ತಾರಾ? ಮುಂದಿನ ದಿನಗಳಲ್ಲಿ ನೋಡಬೇಕಷ್ಟೆ.
ಇದನ್ನೂ ಓದಿ:ಗಳಗಳನೇ ಕಣ್ಣೀರಿಟ್ಟ ನಟ ಅನೀಶ್.. ಸ್ಯಾಂಡಲ್​ವುಡ್​ ಹೀರೋಗೆ ಆಗಿದ್ದೇನು..? VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us