/newsfirstlive-kannada/media/media_files/2025/11/16/aniissh-tejeshwar-2025-11-16-09-58-58.jpg)
ಲವ್ OTP ನವೆಂಬರ್ 14ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿ, ಅತ್ಯುತ್ತಮ ವಿಮರ್ಶೆಗಳನ್ನ ಬಾಚಿಕೊಂಡು ಮುನ್ನುಗ್ಗುತ್ತಿರೋ ಸಿನಿಮಾ. ವಿಮರ್ಶಕರಿಂದ 3.5/5 ರೇಟಿಂಗ್ ಪಡೆದಿರೋ ಚಿತ್ರ. ಬುಕ್ ಮೈ ಶೋನಲ್ಲೂ ಈ ಲವ್​ ಒಟಿಪಿಗೆ ಪ್ರಶಂಸೆಗಳ ಸುರಿಮಳೆ ಸುರಿದು ಬರ್ತಾಯಿದೆ. ಹೀಗಿರುವಾಗ ಈ ಸಿನಿಮಾದ ನಟ ನಿರ್ದೇಶಕ ಅನೀಶ್ ಹ್ಯಾಪಿಯಾಗಿ ಸಿನಿರಸಿಕರಿಗೆ ಥ್ಯಾಂಕ್ಯೂ ಹೇಳೋದಕ್ಕೆ ಪ್ರೆಸ್​​ ಮೀಟ್​ ಮಾಡ್ಬೇಕು ಇಲ್ಲ. ಸೋಶಿಯಲ್​ ಮಿಡಿಯಾ ಮೂಲಕ ಖುಷಿ ವ್ಯಕ್ತಪಡಿಸ್ಬೇಕು. ನಟ ಅನೀಶ್​ ನೋವು ಹತಾಶೆಯಲ್ಲಿ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಕಿಚ್ಚ ಸುದೀಪ್​​ ಅವರನ್ನೇ ಇಮಿಟೇಟ್ ಮಾಡಿದ ಗಿಲ್ಲಿ.. ಕಿಚ್ಚನ ರಿಯಾಕ್ಷನ್ ಹೇಗಿತ್ತು? VIDEO
ಇದಕ್ಕಿಂತ ಇನ್ನೇನು ಮಾಡ್ಬೇಕೆಂದು ಕಣ್ಣೀರಿಟ್ಟಿರೋ ನಟ, ತಮ್ಮ ಇನ್ಸ್ಟಾಗ್ರಾಮ್ ಪೇಜ್​ನಲ್ಲಿ ವಿಡಿಯೋ ಬಿಟ್ಟು, ನೋವು ತೋಡುಕೊಂಡಿದ್ದಾರೆ. 14 ವರ್ಷದ ನಿರಂತರ ಶ್ರಮ.. ಸೋಲುಗಳಿಗೆ ಕಂಗೆಡದೇ.. ಸಿನಿಮಾದಿಂದ ಸಿನಿಮಾಗೆ ಆಶಾದಾಯಕವಾಗೇ ಇಲ್ಲಿವರೆಗೂ ಬಂದೆ. ನನ್ನ ವೃತ್ತಿ ಬದುಕಿನಲ್ಲೇ The Best Reviews ಲವ್ OTPಗೆ ಸಿಕ್ಕಿದೆ. ಆದ್ರೆ, ಥಿಯೇಟರಿಗೆ ಯಾಕ್ ಯಾರೂ ಬರ್ತಿಲ್ಲ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಅನಿಶ್ ನೋವು ಏನು..?
ನಮಸ್ಕಾರ... ತುಂಬಾ ನೋವಿನಿಂದ ಹತಾಶೆಯಿಂದ ಈ ಮಾತುಗಳನ್ನ ಹೇಳ್ತೀನಿದ್ದೀನಿ...
14ವರ್ಷದ ನಿರಂತರ ಶ್ರಮ.. ಸೋಲುಗಳಿಗೆ ಕಂಗೆಡದೇ.. ಸಿನಿಮಾದಿಂದ ಸಿನಿಮಾಗೆ ಆಶಾದಾಯಕವಾಗೇ ಇಲ್ಲಿವರೆಗೂ ಬಂದೆ...
ನನ್ನ ವೃತ್ತಿ ಬದುಕಿನಲ್ಲೇ The Best Reviews ಲವ್ OTPಗೆ ಸಿಕ್ಕಿದೆ... ಸಿಕ್ತಿದೆ..
ಆದ್ರೆ, ಥಿಯೇಟರಿಗೆ ಯಾಕ್ ಯಾರೂ ಬರ್ತಿಲ್ಲ...??? ನಾನೂ ಇನ್ನೇನ್ ಮಾಡ್ಬೇಕು..??? ಗೊತ್ತಾಗ್ತಿಲ್ಲ...!!!
ಮೊನ್ನೆ ಪ್ರಿಮಿಯರ್ ನೋಡಿ ಪತ್ರಕರ್ತರು ಅತ್ಯುತ್ತಮ ವಿಮರ್ಶೆಗಳನ್ನ ಕೊಟ್ಟಿದ್ದಾರೆ.. ನಿನ್ನೆ ಯಾರೆಲ್ಲಾ ನೋಡಿದ್ದಾರೋ ಬುಕ್ ಮೈಶೋನಲ್ಲಿ ನಿರೀಕ್ಷೆಗೂ ಮೀರಿ ನಮ್ಮ ಕೆಲಸವನ್ನ ಕೊಂಡಾಡ್ತಿದ್ದಾರೆ..ಆದ್ರೂ ಯಾಕ್ ಈರೀತಿ..???? ಅರ್ಥ ಆಗ್ತಿಲ್ಲ..???
ಇವತ್ತು ನಾಳೆಯೊಳಗೆ ಪ್ರೇಕ್ಷಕರು ಬಂದ್ರೆ ಕೈ ಹಿಡಿದ್ರೆ ಮುಂದಿನ ದಾರಿ.... ಇಲ್ಲಾಂದ್ರೆ ಇಲ್ಲಿಗೆ ನನ್ನ ಸಿನಿಮಾ ಪ್ರಯತ್ನವನ್ನ ನಿಲ್ಲಿಸ್ತೀನಿ.
ತುಂಬಾ ದುಃಖದಿಂದ ಈ ವಿಚಾರ ಹೇಳ್ತಿದ್ದೀನಿ.. ಈ ಕಣ್ಣೀರು ಸಿಂಪತಿಗಲ್ಲ... ಗಿಮಿಕ್ಕು ಅಲ್ಲ.. ನನ್ನ ಅಂತರಾಳದ ನೋವಿದು🙏🙏🙏
ಅನೀಶ್, ನಟ
ಕಣ್ಣೀರು ಸಿಂಪತಿಗಲ್ಲ, ಗಿಮಿಕ್ಕಲ್ಲ, ಅಂತರಾಳದ ನೋವಿದು ಅಂತ ಬೇಸರ ಹೊರ ಹಾಕಿದ ನಟ. ನಾಳೆಯೊಳಗೆ ಪ್ರೇಕ್ಷಕರು ಬಂದ್ರೆ ಕೈ ಹಿಡಿದ್ರೆ ಮುಂದಿನ ದಾರಿ.. ಇಲ್ಲಾಂದ್ರೆ ಇಲ್ಲಿಗೆ ನನ್ನ ಸಿನಿಮಾ ಪ್ರಯತ್ನವನ್ನ ನಿಲ್ಲಿಸ್ತೀನಿ ಅಂತ ಅಸಹಾಯಕತೆಯನ್ನ ತೋಡಿಕೊಂಡಿದ್ದಾರೆ. ಒಟ್ನಲ್ಲಿ ಕತೆ ಚೆನ್ನಾಗಿದ್ರು ಎಲ್ಲೋ ಕನ್ನಡ ಸಿನಿಮಾಗಳಿಗೆ ಅನ್ಯಾಯ ಆಗ್ತಾಯಿದ್ಯಾ ಅನ್ನೋ ಪ್ರಶ್ನೆ ಮತ್ತೆ ಮುನ್ನಲೆಗೆ ಬರುವಂತೆ ಮಾಡಿದೆ ನಟನ ಈ ಭಾವುಕ ಪೋಸ್ಟ್​.
ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಕೋಲ್ಕತ್ತ ಟೆಸ್ಟ್.. 2ನೇ ದಿನದಾಟದಲ್ಲಿ ಉರುಳಿದ್ದು 16 ವಿಕೆಟ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us