/newsfirstlive-kannada/media/media_files/2025/11/16/gill-2025-11-16-13-25-43.jpg)
ಸೌತ್​ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ 2ನೇ ದಿನದಾಟದಲ್ಲಿ ಇಂಜುರಿಗೆ ತುತ್ತಾದ ಶುಭ್​ಮನ್ ಗಿಲ್​ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಲ್ಕತ್ತಾದ ವುಡ್​​ಲ್ಯಾಂಡ್​ ಆಸ್ಪತ್ರೆಯಲ್ಲಿ ಶುಭ್​ಮನ್ ಚಿಕಿತ್ಸೆ ಪಡೀತಿದ್ದಾರೆ. 2ನೇ ದಿನದಾಟದಲ್ಲಿ ಬ್ಯಾಟಿಂಗ್​ಗೆ ವೇಳೆ ಗಿಲ್​ ಕತ್ತಿನ ಬಳಿ ಸ್ನಾಯು ಸೆಳೆತ ಒಳಗಾದ್ರು. ಕೂಡಲೇ ಫೀಲ್ಡ್​ನಿಂದ ಹೊರ ನಡೆದ ಗಿಲ್​ ಮತ್ತೆ ಮೈದಾನಕ್ಕಿಳಿಯಲಿಲ್ಲ.
ಮೊದಲ ದಿನದಾಟ ಅಂತ್ಯದ ಬಳಿಕ ಗಿಲ್​ ಸ್ಕ್ಯಾನ್​ಗೆ ತೆರಳಿದ್ದು, ಈ ವೇಳೆ ಇಂಜುರಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಿನ್ನೆ ರಾತ್ರಿಯಿಂದಲೇ ಆಸ್ಪತ್ರೆಯಲ್ಲಿ ಗಿಲ್​ ಚಿಕಿತ್ಸೆ ಪಡೀತಿದ್ದು, ಬಿಸಿಸಿಐ ಮೆಡಿಕಲ್ ಟೀಮ್​ ಗಿಲ್​ ಆರೋಗ್ಯದ ನಿಗಾ ವಹಿಸಿದೆ.
ಇದನ್ನೂ ಓದಿ:BBK12 ಗಿಲ್ಲಿ ಕಿಚ್ಚನ ಇಮಿಟೇಷನ್‌ಗೆ ಎಷ್ಟು ಮಾರ್ಕ್ಸ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us