Advertisment

BBK12 ಗಿಲ್ಲಿ ಕಿಚ್ಚನ ಇಮಿಟೇಷನ್‌ಗೆ ಎಷ್ಟು ಮಾರ್ಕ್ಸ್‌?

ಬಿಗ್‌ಬಾಸ್‌ನಲ್ಲಿ ಗಿಲ್ಲಿ ಅಂದ್ರೆ ಕಾಮಿಡಿ ಅನ್ನೋ ಅಭಿಪ್ರಾಯ ಇದೆ. ಎಲ್ಲರನ್ನೂ ಇಮಿಟೇಟ್‌ ಮಾಡಿ ಮಜಾ ತಗೊಳ್ಳೋ ಗಿಲ್ಲಿಗೆ ಇದೀಗ ಸುದೀಪ್‌ರನ್ನೇ ಇಮಿಟೇಟ್‌ ಮಾಡೋ ಅವಕಾಶ ಸಿಕ್ಕಿದೆ. ಇದ್ರಲ್ಲಿ ಗಿಲ್ಲಿ ಪಾಸಾ ಫೇಲಾ?

author-image
Ganesh Kerekuli
Gilli Nata
Advertisment

ಬಿಗ್‌ಬಾಸ್‌ನಲ್ಲಿ ಗಿಲ್ಲಿ ಅಂದ್ರೆ ಕಾಮಿಡಿ ಅನ್ನೋ ಅಭಿಪ್ರಾಯ ಇದೆ. ಎಲ್ಲರನ್ನೂ ಇಮಿಟೇಟ್‌ ಮಾಡಿ ಮಜಾ ತಗೊಳ್ಳೋ ಗಿಲ್ಲಿಗೆ ಇದೀಗ ಸುದೀಪ್‌ರನ್ನೇ ಇಮಿಟೇಟ್‌ ಮಾಡೋ ಅವಕಾಶ ಸಿಕ್ಕಿದೆ. ಇದ್ರಲ್ಲಿ ಗಿಲ್ಲಿ ಪಾಸಾ ಫೇಲಾ? 

Advertisment

ವಾರದ ಪಂಚಾಯ್ತಿಗೆ ಸುದೀಪ್‌ ಬಂದಿದ್ದಾರೆಂದರೆ ಅಲ್ಲಿ ಜೋರು ಇರುತ್ತೆ ಎಂಟರ್‌ಟೈನ್‌ಮೆಂಟ್‌ ಕೂಡ ಇರುತ್ತೆ. ಮನೆಯಲ್ಲಿ ಸಿಂಹದ ರೀತಿ ಘರ್ಜಿಸುವ ಸ್ಪರ್ಧಿಗಳು ಕೂಡ ಇಲಿಮರಿಯಂತೆ ಆಗಿ ಹೋಗುತ್ತಾರೆ. ಈ ವಾರ ಇನ್ನೂ ಮಜವಾಗಿದೆ. ಸುದೀಪ್‌ ಗಿಲ್ಲಿಗೆ ತಮ್ಮನ್ನೇ ಇಮಿಟೇಟ್‌ ಮಾಡೋ ಅವಕಾಶ ನೀಡಿದ್ದಾರೆ. ಈ ವಾರ ಸುದೀಪ್‌ ಗಿಲ್ಲಿ ಆದ್ರೆ ಗಿಲ್ಲಿ ಸುದೀಪ್‌ ಆಗಿದ್ದಾರೆ. 

ಇದನ್ನೂ ಓದಿ:IPL ರಿಟೆನ್ಶನ್.. ಯಾವ ತಂಡ ಯಾವ್ಯಾವ ಆಟಗಾರರ ಕೈಬಿಟ್ಟಿದೆ..? ಕಂಪ್ಲೀಟ್ ಲಿಸ್ಟ್..!

Kiccha sudeep (1)

ಸುದೀಪ್‌ರನ್ನು ಇಮಿಟೇಟ್‌ ಮಾಡಿರುವ ಗಿಲ್ಲಿ ಮೊದಲು ರಾಶಿಕಾರ ಹೆಸರನ್ನೆತ್ತಿ ತಮ್ಮನ್ನು ತಾವೇ ತಮಾಷೆ ಮಾಡಿಕೊಂಡಿದ್ದಾರೆ. ಬಿಗ್‌ಬಾಸ್‌ ಮನೇಲಿ ಕೂಗಾಡೋದ್ರಿಂದ ಮಾತ್ರ ಸಮಸ್ಯೆ ಆಗೋದಲ್ಲ ಕಮೆಂಟ್‌ ಮಾಡೋದರಿಂದ ಚಪ್ಪಾಳೆ ತಟ್ಟೋದರಿಂದಲೂ ಸಮಸ್ಯೆ ಆಗುತ್ತೆ ಎಂದಿದ್ದಾರೆ.

Advertisment

ಶನಿವಾರದ ಎಪಿಸೋಡ್‌ನಲ್ಲಷ್ಟೆ ಸುದೀಪ್‌ ಗಿಲ್ಲಿ ಕಮೆಂಟ್‌ ಮಾಡೋದು ಹಾಗೂ ಚಪ್ಪಾಳೆ ತಟ್ಟಿದ್ದನ್ನು ಇಟ್ಟುಕೊಂಡು ಉತ್ತರ ನೀಡೋಕೆ ಹೇಳಿದ್ದರು. ಅದನ್ನೇ ಇಟ್ಟುಕೊಂಡು ಗಿಲ್ಲಿ ಇವತ್ತು ತಮಾಷೆ ಮಾಡಿದ್ದಾರೆ. 

ಇದನ್ನೂ ಓದಿ:ಆ ನಟಿಗಾಗಿ 3 ಕೋಟಿ ಖರ್ಚು ಮಾಡಿದ್ದೇನೆ -ಬಂಧಿತ ಅರವಿಂದ್ ರೆಡ್ಡಿ ಹೇಳಿಕೆ

ಮಾತ್ರವಲ್ಲ ಕಾವ್ಯ ಬಗ್ಗೆಯೂ ಮಾತನಾಡಿರುವ ಗಿಲ್ಲಿ ಕಾವ್ಯಗಾಗಿ ಹಾಡನ್ನೂ ಹಾಡಿದ್ದಾರೆ. ಇದಕ್ಕೆ ಉತ್ತರಿಸಿರೋ ಸುದೀಪ್‌ ಇದು ಗಿಲ್ಲಿಯೇ ಹಾಡಿರುವಂತೆ ಅನಿಸ್ತಿದೆಯಲ್ಲ ಎಂದಿದ್ದಾರೆ. ಶನಿವಾರದ ಎಪಿಸೋಡ್‌ನಲ್ಲಿ ಸ್ಪರ್ಧಿಗಳಿಗೆ ಫುಲ್‌ ಕ್ಲಾಸ್‌ ತಗೊಳೋದನ್ನೇ ನೋಡಿದ್ದ ವೀಕ್ಷಕರಿಗೆ ಭಾನುವಾರದ ಎಪಿಸೋಡ್‌ ತುಂಬಾ ಎಂಟರ್‌ಟೈನಿಂಗ್‌ ಆಗಿರುತ್ತೆ ಅನ್ನೋದರಲ್ಲಿ ಅನುಮಾನನೇ ಇಲ್ಲ. 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 BBK12 Gilli Nata Bigg boss
Advertisment
Advertisment
Advertisment