Advertisment

ನಂಬಿಕಸ್ಥ ಜಡೇಜಾ, MS ಧೋನಿಗೆ ಬೇಡವಾಗಿದ್ದೇಕೆ..? ತಲಾ ವಿರುದ್ಧ ಭಾರೀ ಆಕ್ರೋಶ

ಮಹೇಂದ್ರ ಸಿಂಗ್ ಧೋನಿ, ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ಧೋನಿಯನ್ನ ಸ್ಮಾರ್ಟ್ ಕ್ಯಾಪ್ಟನ್, ಕೂಲ್ ಕ್ಯಾಪ್ಟನ್, ಗ್ರೇಟ್ ಫಿನಿಷರ್, ಲೆಜೆಂಡ್ ಅಂತೆಲ್ಲಾ ಕರೀತಾರೆ. ಧೋನಿ ಕೆಲ ಕ್ರಿಕೆಟಿಗರ ಪಾಲಿಗೆ ವಿಲನ್ ಅಂದ್ರೆ ನಂಬ್ತೀರಾ? ನಂಬಲೇಬೇಕು.

author-image
Ganesh Kerekuli
ಕೋಟಿ ಕೋಟಿ ಹಣ ಕಳೆದುಕೊಂಡ MS ಧೋನಿ.. ಮಾಜಿ ಕ್ಯಾಪ್ಟನ್ ಲಾಸ್ ಆಗಿದ್ದು ಹೇಗೆ?
Advertisment

ಮಹೇಂದ್ರ ಸಿಂಗ್ ಧೋನಿ, ವಿಶ್ವ ಕಂಡ ಶ್ರೇಷ್ಟ ಕ್ರಿಕೆಟಿಗರಲ್ಲಿ ಒಬ್ಬರು. ಧೋನಿಯನ್ನ ಸ್ಮಾರ್ಟ್ ಕ್ಯಾಪ್ಟನ್, ಕೂಲ್ ಕ್ಯಾಪ್ಟನ್, ಗ್ರೇಟ್ ಫಿನಿಷರ್, ಲೆಜೆಂಡ್ ಅಂತೆಲ್ಲಾ ಕರೀತಾರೆ. ಧೋನಿ ಕೆಲ ಕ್ರಿಕೆಟಿಗರ ಪಾಲಿಗೆ ವಿಲನ್ ಅಂದ್ರೆ ನಂಬ್ತೀರಾ? ನಂಬಲೇಬೇಕು.

Advertisment

ಚೆನ್ನೈ ಸೂಪರ್​ಕಿಂಗ್ಸ್ ತಂಡದಿಂದ ಆಲ್​ರೌಂಡರ್ ರವೀಂದ್ರ ಜಡೇಜಾ ಟ್ರೇಡ್ ಆಗಿದ್ದೇ ತಡ. ಸಿಎಸ್​​ಕೆ ತಂಡದ ಹಾರ್ಡ್​​ಕೋರ್ ಕ್ರಿಕೆಟ್ ಅಭಿಮಾನಿಗಳು ತಲಾ ಧೋನಿ ವಿರುದ್ಧ ತಿರುಗಿಬಿದ್ದಿದ್ದಾರೆ. ಧೋನಿ, ಜಡೇಜಾರನ್ನ ತಂಡದಲ್ಲೇ ಉಳಿಸಿಕೊಳ್ಳಬೇಕಿತ್ತು. ಧೋನಿ, ಜಡ್ಡು ಕೈಬಿಡಬಾರದಿತ್ತು. 13 ವರ್ಷಗಳ ಕಾಲ ಚೆನ್ನೈ ತಂಡಕ್ಕೆ ಸೇವೆ ಸಲ್ಲಿಸಿದ್ದ ಜಡ್ಡು ಈಗ ಯಾಕೆ ಧೋನಿಗೆ ಬೇಡವಾದ್ರು ಎಂದು ಮಾಜಿ ಸಿಎಸ್​​ಕೆ ನಾಯಕನ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.   

ಇದನ್ನೂ ಓದಿ: ಆ ನಟಿಗಾಗಿ 3 ಕೋಟಿ ಖರ್ಚು ಮಾಡಿದ್ದೇನೆ -ಬಂಧಿತ ಅರವಿಂದ್ ರೆಡ್ಡಿ ಹೇಳಿಕೆ

Jadeja_Sanju_Samson_ipl_2026_csk

ಧೋನಿಗೆ ಬೇಡವಾಗಿದ್ದೇಕೆ?

ಆಲ್​ರೌಂಡರ್ ರವೀಂದ್ರ ಈಗಲೂ ಫುಲ್ ಫಿಟ್ ಌಂಡ್ ಫೈಟ್. ಬ್ಯಾಟ್, ಬಾಲ್​ನಲ್ಲಿ ಜಡ್ಡು ಪರ್ಫಾಮೆನ್ಸ್ ಅದ್ಭುತವಾಗಿದೆ. ಚೆನ್ನೈ ಸೂಪರ್​ಕಿಂಗ್ಸ್​ ತಂಡ ಜಡೇಜಾರನ್ನ ತಂಡದಿಂದ ಕೈಬಿಟ್ಟಿದ್ದೇಕೆ? 13 ವರ್ಷಗಳ ಕಾಲ ಸಿಎಸ್​ಕೆ ತಂಡದ ಗೇಮ್​ ಚೇಂಜರ್, ಮ್ಯಾಚ್ ವಿನ್ನರ್ ಆಗಿದ್ದ ಜಡೇಜಾ, ಈಗೇಕೆ ತಂಡಕ್ಕೆ ಬೇಡವಾದ್ರು ಅಂತೆಲ್ಲಾ ಪ್ರಶ್ನೆಗಳು ಎದುರಾಗಿವೆ. ಧೋನಿ ಮನಸ್ಸು ಮಾಡಿದ್ರೆ, ಜಡ್ಡುರನ್ನ ತಂಡದಲ್ಲೇ ಉಳಿಸಿಕೊಳ್ಳಬಹುದಿತ್ತು. ಧೋನಿಯನ್ನ ಕೇಳದೆ ಸಿಎಸ್​ಕೆ ಮ್ಯಾನೇಜ್ಮೆಂಟ್ ಏನು ಮಾಡಲ್ಲ. ಜಡೇಜಾರನ್ನ ಟ್ರೇಡ್ ಮಾಡೋ ನಿರ್ಧಾರ ಸ್ವತಃ ಧೋನಿಯದ್ದೇ ಅನ್ನೋದು ಸದ್ಯ ತಿಳಿದುಬಂದಿದೆ. 36 ವರ್ಷದ ಜಡೇಜಾ ಯಾಕೆ ಬೇಡ? ಈ ಪ್ರಶ್ನೆಗೆ ಧೋನಿ ಮಾತ್ರ ಉತ್ತರಿಸಬೇಕಷ್ಟೆ.

Advertisment

ಇದನ್ನೂ ಓದಿ: IPL ರಿಟೆನ್ಶನ್.. ಯಾವ ತಂಡ ಯಾವ್ಯಾವ ಆಟಗಾರರ ಕೈಬಿಟ್ಟಿದೆ..? ಕಂಪ್ಲೀಟ್ ಲಿಸ್ಟ್..!

DHONI_CSK_AUCTION

ಗಂಭೀರ್, ಯುವಿ, ಭಜ್ಜಿ ಗರಂ

ಧೋನಿ ಮೇಲೆ ಒಂದು ಗಂಭೀರ ಆರೋಪ ಇದೆ. ಧೋನಿ ತನಗೆ ಬೇಡವಾದ ಆಟಗಾರರನ್ನ ತಂಡದಲ್ಲಿ ಇಟ್ಟುಕೊಳ್ಳೋದಿಲ್ಲ ಅನ್ನೋದು. ಜಡೇಜಾ ವಿಚಾರದಲ್ಲೂ ಅದು ನಿಜ ಅನಿಸಿದೆ. ಈ ಹಿಂದೆ ಧೋನಿ ಟೀಮ್ ಇಂಡಿಯಾ ನಾಯಕನಾಗಿದ್ದಾಗ ಸಾಕಷ್ಟು ಆಟಗಾರರ ವಿರೋಧ ಕಟ್ಟಿಕೊಂಡಿದ್ರು. ಧೋನಿ ತಂಡದ ಸಹ ಆಟಗಾರರಿಗೆ ಸಪೋರ್ಟ್ ಮಾಡಲ್ಲ. ಧೋನಿ ಆಟಗಾರರ ಪರ ನಿಲ್ಲೋದಿಲ್ಲ ಅಂತ ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್, ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಆರೋಪ ಮಾಡಿದ್ರು. ಆ ತ್ರಿಮೂರ್ತಿ ಆಟಗಾರರು ಮಾಡಿದ ಆರೋಪಗಳು ಇಂದು ಅಭಿಮಾನಿಗಳನ್ನ ಆಲೋಚಿಸುವಂತೆ ಮಾಡಿದೆ.

ಹುಕ್ಕಾ ಕಿಕ್ ಎಂದಿದ್ದ ಪಠಾಣ್​..!

ಟೀಮ್ ಇಂಡಿಯಾ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ ಸಹ, ಇತ್ತೀಚಿಗೆ ಧೋನಿ ವಿರುದ್ಧ ಗಂಭೀರ ಆರೋಪ ಮಾಡಿದ್ರು. ಧೋನಿ, ತನಗೆ ಹುಕ್ಕಾ ಸಪ್ಲೈ ಮಾಡೋ ಆಟಗಾರರ ಬೆಂಬಲಕ್ಕೆ ನಿಲ್ತಾರೆ. ತನ್ನ ಹಿಂದೆ ಸುತ್ತೋ ಆಟಗಾರರಿಗೆ ತಂಡದಲ್ಲಿ ಹೆಚ್ಚು ಅವಕಾಶ ನೀಡ್ತಾರೆ ಅಂತ, ಜ್ಯೂನಿಯರ್ ಪಠಾಣ್ ಬಾಂಬ್ ಸಿಡಿಸಿದ್ರು. ಇದಷ್ಟೇ ಅಲ್ಲ. ಧೋನಿ, ತನ್ನನ್ನ ತಂಡದಿಂದ ಡ್ರಾಪ್ ಮಾಡುವಾಗಲೂ ಒಂದೇ ಒಂದು ಮಾತು ಹೇಳಿಲ್ಲ ಅಂತ ಇರ್ಫಾನ್​​​​​​​​​​​, ಧೋನಿ ವಿರುದ್ಧ ಬಹಿರಂಗವಾಗೇ ಅಸಮಾಧಾನ ಹೊರಹಾಕಿದ್ರು.

Advertisment

ಇದನ್ನೂ ಓದಿ:BBK12 ಗಿಲ್ಲಿ ಕಿಚ್ಚನ ಇಮಿಟೇಷನ್‌ಗೆ ಎಷ್ಟು ಮಾರ್ಕ್ಸ್‌?

Ravidnra Jadeja

ಧೋನಿ ವಿರುದ್ಧ ಟೀಮ್ ಇಂಡಿಯಾದ ಲೆಜೆಂಡ್ಸ್ ಕೂಡ ತಿರುಗಿಬಿದ್ದಿದ್ರು. ಈ ಹಿಂದೆ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಸಹ, ಧೋನಿ ನಡೆಯ ವಿರುದ್ಧ ಬೇಸರಗೊಂಡಿದ್ರು. ಧೋನಿಯನ್ನ ಸಂಪರ್ಕಿಸೋದೇ ಕಷ್ಟ. ಧೋನಿ ಜೊತೆ ಮಾತನಾಡೋದು ಅಸಾಧ್ಯ. ನಿವೃತ್ತಿಯ ವೇಳೆಯೂ ಧೋನಿ ಜೊತೆ ಮಾತನಾಡಲು ಸಾಕಷ್ಟು ಪ್ರಯತ್ನ ಪಟ್ಟೆವು. ಧೋನಿ ಯಾರ ಕೂಗೂ ಸಿಗೋದಿಲ್ಲ ಅಂತ ಟೀಮ್ ಇಂಡಿಯಾ ದಿಗ್ಗಜ ಆಟಗಾರರು ಧೋನಿ ಬಗ್ಗೆ ಹೇಳಿಕೊಂಡಿದ್ದರು.

ಮಾಜಿ ಕ್ರಿಕೆಟಿಗರ ಆಕ್ರೋಶ..!

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಬೆಂಗಾಲ್​​​​ನ ಮನೋಜ್ ತಿವಾರಿಯಂತೂ, ಧೋನಿ ಬಗ್ಗೆ ಓಪನ್ ಆಗೇ ಆಕ್ರೋಶ ವ್ಯಕ್ತಪಡಿಸಿದ್ರು. ಧೋನಿ ತನ್ನನ್ನ ಇಷ್ಟ ಪಡ್ತಿರಲಿಲ್ಲ. ಧೋನಿಗೆ ಇಷ್ಟ ಆಗದೇ ಇರುವವರನ್ನ ತಂಡದಲ್ಲಿ ಇರಲು ಬಿಡ್ತಿರಲಿಲ್ಲ ಅಂತ ತಿವಾರಿ,  ಗಂಭೀರ ಆರೋಪ ಮಾಡಿದ್ರು. ಆದ್ರೆ ಧೋನಿ ನಾಯಕನಾಗಿದ್ದಾಗ ತಂಡದಲ್ಲಿ ಕೆಲವರನ್ನ ಇಷ್ಟ ಪಡ್ತಿದ್ರು. ಅವರಿಗೇ ಹೆಚ್ಚು ಸಪೋರ್ಟ್ ಮಾಡ್ತಿದ್ರು ಅಂತ, ಮಾಜಿ ನಾಯಕನ ವಿರುದ್ಧ ಸಂದರ್ಶನವೊಂದರಲ್ಲಿ ಸಿಡಿದೆದ್ದಿದ್ರು. 

ಇದನ್ನೂ ಓದಿ:ಟೆಸ್ಟ್​ ಪಂದ್ಯದ ಮಧ್ಯೆ ತಂಡಕ್ಕೆ ಆಘಾತ.. ಕ್ಯಾಪ್ಟನ್ ಗಿಲ್ ಆಸ್ಪತ್ರೆಗೆ ದಾಖಲು

Advertisment

Dhoni and shrinivasan

ಧೋನಿ, ಜಡೇಜಾರನ್ನ ಸಿಎಸ್​​ಕೆ ತಂಡದಲ್ಲಿ ಉಳಿಸಿಕೊಳ್ಳದ ಕಾರಣ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಧೋನಿ ಮತ್ತು ಚೆನ್ನೈ ಸೂಪರ್​ಕಿಂಗ್ಸ್​ ಫ್ರಾಂಚೈಸಿ ಮಾಲೀಕರಿಬ್ಬರಿಗೂ ಲಾಯಲ್ಟಿ ಅನ್ನೋದೇ ಇಲ್ಲ ಅಂತ, ಬೇಸರ ಹೊರಹಾಕುತ್ತಿದ್ದಾರೆ. ಸಿಎಸ್​​ಕೆ ಸಿಇಓ  ಕಾಸಿ ವಿಶ್ವನಾಥನ್ ಏನೋ ಕಾರಣ ನೀಡಿ, ನಾವು ಮಾಡಿದ್ದೇ ಸರಿ ಅನ್ತಿದ್ದಾರೆ. ಆದ್ರೆ ಧೋನಿ ಮಾತ್ರ ಎಂದಿನಂತೆ ಯಾವುದಕ್ಕೂ ಉತ್ತರಿಸದೇ ಸೈಲೆಂಟ್ ಆಗಿದ್ದಾರೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

MS Dhoni Ravindra Jadeja
Advertisment
Advertisment
Advertisment