Advertisment

ಆ ಒಂದು ಆಟಗಾರನ ವಿಚಾರದಲ್ಲಿ RCB ದೊಡ್ಡ ತಪ್ಪು.. ‘ಶೇಮ್, ಶೇಮ್’ ಎಂದು ಫ್ಯಾನ್ಸ್ ಆಕ್ರೋಶ

IPL ರಿಟೈನ್ಶನ್​ ಮುಗಿದ ಬೆನ್ನಲ್ಲೇ RCB ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಕ್ರಿಕೆಟ್​ ಅಭಿಮಾನಿಗಳಂತೂ ಮ್ಯಾನೇಜ್​​ಮೆಂಟ್​ ಮೇಲೆ ಕೆಂಡ ಕಾರ್ತಿದ್ದಾರೆ. ಈ ಸಿಟ್ಟು ಆಕ್ರೋಶಕ್ಕೆ ವೇಗಿ ಯಶ್​ ದಯಾಳ್​ ರಿಟೈನ್ಶನ್​ ಕಾರಣ. ರಿಟೈನ್​ ಮಾಡಿಕೊಂಡಿದ್ದಕ್ಕೆ ಅಭಿಮಾನಿಗಳಿಗೆ ಯಾಕೆ ಕೋಪ ಅಂತಿರಾ?

author-image
Ganesh Kerekuli
RCB (2)
Advertisment
  • ಕ್ರಿಕೆಟ್​ ಫ್ಯಾನ್ಸ್​ ಕೆಂಗಣ್ಣಿಗೆ ಗುರಿಯಾದ ಆರ್​​ಸಿಬಿ
  • ಯಶ್​ ದಯಾಳ್​ ರಿಟೈನ್​, ಕ್ರಿಕೆಟ್ ಫ್ಯಾನ್ಸ್​ ಕೆಂಡ
  • UPT20 ಲೀಗ್​ನಿಂದಲೂ ಯಶ್​ ದಯಾಳ್​ ಬ್ಯಾನ್

ಐಪಿಎಲ್​ ರಿಟೈನ್​-ರಿಲೀಸ್​ ಕುತೂಹಲಕ್ಕೆ ತೆರೆ ಬಿದ್ದಿದೆ. 10 ಫ್ರಾಂಚೈಸಿಗಳು ಅಳೆದುತೂಗಿ ಲೆಕ್ಕಾಚಾರ ಹಾಕಿ ಆಟಗಾರರನ್ನ ರಿಟೈನ್​ ಮಾಡಿಕೊಂಡಿವೆ. ಹಾಲಿ ಚಾಂಪಿಯನ್​ ಆರ್​​ಸಿಬಿ ಕೂಡ ಜಾಣ್ಮೆಯ ಹೆಜ್ಜೆಇಟ್ಟಿದೆ. ಚಾಂಪಿಯನ್​ ಟೀಮ್​ನ ಡಿಸ್ಟರ್ಬ್​ ಮಾಡದೇ 8 ಆಟಗಾರರನ್ನ ಮಾತ್ರ ರಿಲೀಸ್​ ಮಾಡಿದೆ. ಆದ್ರೂ ಕೂಡ ರೆಡ್​ ಆರ್ಮಿ ಆರ್​​ಸಿಬಿ ಫ್ಯಾನ್ಸ್​ ಸೇರಿದಂತೆ ಕ್ರಿಕೆಟ್​ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. 

Advertisment

ಕ್ರಿಕೆಟ್​ ಫ್ಯಾನ್ಸ್​ ಕೆಂಗಣ್ಣಿಗೆ ಗುರಿಯಾದ ಆರ್​​ಸಿಬಿ

ನಿರೀಕ್ಷೆಯಂತೆ ಲಿಯಾಮ್ ಲಿವಿಂಗ್​ಸ್ಟೋನ್, ಲುಂಗಿ ಎಂಗಿಡಿ, ಟಿಮ್ ಸೀರ್ಫಟ್​, ಸ್ವಸ್ತಿಕ್​ ಚಿಕಾರ, ಬ್ಲೆಸಿಂಗ್​ ಮುಝರಬಾನಿ, ಮೋಹಿತ್​ ರಾತೆಯನ್ನ ಆರ್​​ಸಿಬಿ ಕೈ ಬಿಟ್ಟಿದೆ. ಜೊತೆಗೆ ಕರ್ನಾಟಕದ ಮಯಾಂಕ್ ಅಗರ್​​ವಾಲ್ ಮತ್ತು ಮನೋಜ್ ಬಾಂಡಗೆಯನ್ನೂ ರಿಲೀಸ್​ ಮಾಡಿದೆ. ಪರ್ಸ್​ನಲ್ಲಿ 16.4 ಕೋಟಿ ಹಣ ಉಳಿಸಿಕೊಂಡು ಹರಾಜಿನಲ್ಲಿ ಬ್ಯಾಕ್​​ಅಪ್​ ಪ್ಲೇಯರ್​ಗಳನ್ನ ಖರೀದಿಗೆ ಸ್ಪಷ್ಟವಾದ ಪ್ಲಾನ್​ನೊಂದಿಗೆ ಸಜ್ಜಾಗಿದೆ. ಆಟಗಾರರನ್ನ ರಿಲೀಸ್​ ಮಾಡಿದ ವಿಚಾರದಲ್ಲಿ ಅಭಿಮಾನಿಗಳಿಗೆ ಯಾವುದೇ ಬೇಸರವಿಲ್ಲ. ಆಟಗಾರನೊಬ್ಬನ ರಿಟೈನ್​ ಮಾಡಿಕೊಂಡ ವಿಚಾರದಲ್ಲಿ ಕೋಪಗೊಂಡಿದ್ದಾರೆ. 

ಯಶ್​ ದಯಾಳ್​ ರಿಟೈನ್​​​

ಅಭಿಮಾನಿಗಳ ಸಿಟ್ಟು, ಬೇಸರ, ಅಸಮಾಧಾನಕ್ಕೆ ಕಾರಣವಾಗಿರೋದು ದಯಾಳ್​ ರಿಟೆನ್ಶನ್​. ಒಂದಲ್ಲ.. ಎರಡು ರೇಸ್​​ ಕೇಸ್​​ಗಳಲ್ಲಿ ಯಶ್​ ದಯಾಳ್​ ಆರೋಪಿಯಾಗಿದ್ದಾರೆ. ಗಾಝಿಯಾಬಾದ್​ನಲ್ಲಿ ಒಂದು ಕೇಸ್​, ಜೈಪುರದಲ್ಲಿ ಒಂದು ಕೇಸ್​ ದಾಖಲಾಗಿ ವಿಚಾರಣೆಯೂ ನಡೀತಿದೆ. ಅದ್ರಲ್ಲಿ ಒಂದು ಪೋಕ್ಸೋ ಕೇಸ್​.. ಅಂದ್ರೆ ಪ್ರಕರಣದ ಗಂಭೀರತೆಯನ್ನ ಅರ್ಥ ಮಾಡಿಕೊಳ್ಳಿ. ಹೀಗಿರುವಾಗ ಈತನನ್ನ ರಿಟೈನ್​ ಮಾಡಿಕೊಂಡಿರೋದು ನಡೆ ಎಷ್ಟು ಸರಿ?

ಇದನ್ನೂ ಓದಿ: ದೆಹಲಿ ಸ್ಫೋ* ಪ್ರಕರಣ.. ಹರ್ಯಾಣ ಮೂಲದ ಮತ್ತೋರ್ವ ವೈದ್ಯೆ ವಶಕ್ಕೆ..!

ಒಂದು ಪ್ರಕರಣದಲ್ಲಿ ನ್ಯಾಯಾಲಯ ಬಂಧಿಸದಂತೆ ಆದೇಶ ನೀಡಿದ್ರೂ ಇನ್ನೊಂದು ಪ್ರಕರಣದಲ್ಲಿ ಸಂತ್ರಸ್ತೆ ಅಪ್ರಾಪ್ತೆ ಆಗಿದ್ದಾಳೆ. ಭವಿಷ್ಯದ ಭರವಸೆ ನೀಡಿ 2 ವರ್ಷದಿಂದ ಲೈಂ*ಕ ದೌರ್ಜನ್ಯ ಎಸೆಗಿದ್ದಾರೆ ಅಂತಾ ಗಂಭೀರ ಆರೋಪವನ್ನ ಅಪ್ರಾಪ್ತ ಸಂತ್ರಸ್ಥೆ ಮಾಡಿದ್ದಾರೆ. ಆ ಪ್ರಕರಣವನ್ನ ಪೋಲಿಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಯಶ್​ ದಯಾಳ್​ ಅಪರಾಧಿಯೋ? ಅಲ್ವೋ? ಅನ್ನೋದು ಸೆಕೆಂಡರಿ. ವಿಚಾರಣೆಯಂತೂ ನಡೀತಿದೆ. ಈ ಹಂತದಲ್ಲಿ ಅತ್ಯಾ*ರ​ ಕೇಸ್​​ ಆರೋಪಿ ಮೇಲೆ ಸಾಫ್ಟ್​ ಕಾರ್ನರ್​ ತೋರಿಸಿ ಆರ್​​ಸಿಬಿ ಸಮಾಜಕ್ಕೆ ನೀಡ್ತಿರೋ ಸಂದೇಶ ಏನು? RCB ದಯಾಳ್​ ಬೆಂಬಲಕ್ಕೆ ನಿಂತಿದ್ಯಾ ಎಂಬ ಚರ್ಚೆಯೂ ನಡೀತಿದೆ.

Advertisment

ಇದನ್ನೂ ಓದಿ: ಗಂಭೀರ್ ಕೋಚ್ ಆದ್ಮೇಲೆ ಇದೆಲ್ಲ.. ತವರಿನಲ್ಲಿ ಟೀಂ ಇಂಡಿಯಾಗೆ ಏನಾಗ್ತಿದೆ..?
 
ಯಶ್​ ದಯಾಳ್​​ನ ತವರು ತಂಡವೇ ದೂರ ಇಟ್ಟಿದೆ. ಉತ್ತರ ಪ್ರದೇಶ ಕ್ರಿಕೆಟ್​ ಅಸೋಸಿಯೇಶನ್​ ದಯಾಳ್​ನ ಬ್ಯಾನ್ ಮಾಡಿದೆ. ಕೇಸ್​ ಕ್ಲೀಯರ್​​ ಆಗಿ ನಿರಪರಾಧಿ ಎಂದು ಪ್ರೂವ್​ ಆದ್ರೆ ಮಾತ್ರ ಮತ್ತೆ ಡೋರ್​ ಓಪನ್​ ಎಂದು ಸ್ಪಷ್ಟ ಸಂದೇಶ ರವಾನಿಸಿದೆ. ಡೊಮೆಸ್ಟಿಕ್​ ಕ್ರಿಕೆಟ್​ ಜೊತೆಗೆ ಉತ್ತರ ಪ್ರದೇಶ ಟಿ20 ಲೀಗ್​ನಲ್ಲೂ ಯಶ್​ ದಯಾಳ್​ ಆಡಿಸಿರಲಿಲ್ಲ. ಯಶ್ ದಯಾನ 7 ಲಕ್ಷಕ್ಕೆ ಗೋರಖ್‌ಪುರ ಲಯನ್ಸ್ ಖರೀದಿಸಿತ್ತು. ಆರೋಪ ಬಂದ ಬೆನ್ನಲ್ಲೇ ದಯಾಳ್​ ಬ್ಯಾನ್​ ಮಾಡಲಾಗಿತ್ತು. 

ಶೇಮ್​, ಶೇಮ್ RCB..!

ಆರ್​​ಸಿಬಿ ಮ್ಯಾನೇಜ್​ಮೆಂಟ್​ನ ನಿರ್ಧಾರ ಅಭಿಮಾನಿಗಳಲ್ಲಿ ತೀವ್ರ ಬೇಸರ ತರಿಸಿದೆ. ಸೋಷಿಯಲ್​ ಮೀಡಿಯಾಗಳಲ್ಲಂತೂ ಶೇಮ್​, ಶೇಮ್​ ಆರ್​​ಸಿಬಿ ಮ್ಯಾನೇಜ್​ಮೆಂಟ್​ ಅನ್ನೋ ಅಭಿಯಾನವೇ ನಡೀತಿದೆ. ಯಶ್​ ದಯಾಳ್​ನ ರಿಲೀಸ್​ ಮಾಡಿ ಅನ್ನೋದು ಎಲ್ಲರ ಆಗ್ರಹವಾಗಿದೆ. ಜೊತೆಗೆ ನಿರಪರಾಧಿ ಎಂದು ತೀರ್ಪು ಬರುವವರೆಗೂ ಯುಪಿಸಿಎನಂತೆ ಐಪಿಎಲ್​ ಕಮಿಟಿ ಕೂಡ ಬ್ಯಾನ್​ ಮಾಡಬೇಕು ಎಂಬ ಕೂಗೂ ಕೇಳಿ ಬಂದಿದೆ.

ಇದನ್ನೂ ಓದಿ: ನಂಬಿಕಸ್ಥ ಜಡೇಜಾ, MS ಧೋನಿಗೆ ಬೇಡವಾಗಿದ್ದೇಕೆ..? ತಲಾ ವಿರುದ್ಧ ಭಾರೀ ಆಕ್ರೋಶ

Advertisment

ಯಶ್​ ದಯಾಳ್ ಗಂಭೀರ ಆರೋಪವನ್ನ ಎದುರಿಸ್ತಾ ಇರೋದ್ರಿಂದಾಗಿ ಇಲ್ಲಿ ಲಾಯಲಿಟಿ ಅಥವಾ ಕ್ವಾಲಿಟಿ ಪ್ಲೇಯರ್​, ಫ್ರಾಂಚೈಸಿಯ ಗ್ರೇಟ್​ ಸರ್ವಂಟ್​ ಅನ್ನೋದೆಲ್ಲಾ ಲೆಕ್ಕಕ್ಕೆ ಬರಲ್ಲ. ಇದನ್ನ ಆರ್​​ಸಿಬಿ ಮ್ಯಾನೇಜ್​ಮೆಂಟ್ ಅರ್ಥ ಮಾಡಿಕೊಳ್ಳಬೇಕಿದೆ. ರಿಟೈನ್ಶನ್​ ಮಾಡಿಕೊಂಡಿದ್ರೂ ಕೂಡ ರಿಲೀಸ್​ ಮಾಡೋಕೆ ಆರ್​​ಸಿಬಿಗೆ ಇನ್ನೂ ಅವಕಾಶ ಇದೆ. ನಿರಪರಾಧಿ ಎಂದು ನಿರ್ಧಾರವಾದ ಮೇಲೆ ಬೇಕಾದ್ರೆ ತಂಡಕ್ಕೆ ಸೇರಿಸಿಕೊಳ್ಳಲಿ. ಸದ್ಯಕ್ಕೆ ಆರೋಪಿಯನ್ನ ತಂಡದಿಂದ ದೂರ ಇಡೋದು ಮಾದರಿ ನಡೆಯಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Yash Dayal RCB RCB retention
Advertisment
Advertisment
Advertisment