/newsfirstlive-kannada/media/media_files/2025/11/13/delhi-case-2-2025-11-13-20-00-20.jpg)
ದೆಹಲಿ ಕೆಂಪು ಕೋಟೆ ಬಳಿ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಂಡಿದೆ. ಇತ್ತ ಜಮ್ಮು ಕಾಶ್ಮೀರದ ನೌಗಾಮ್​ ಪೊಲೀಸ್ ಠಾಣೆಯ ಆಕಸ್ಮಿಕ ಸ್ಫೋ*ದ ವಿಚಾರವಾಗಿಯೂ ಅಧಿಕಾರಿಗಳು ಪರಿಶೀಲನೆ ಮಾಡ್ತಿದ್ದಾರೆ. ಈಗಾಗಲೇ ಕೇಂದ್ರದ ಫೊರೆನ್ಸಿಕ್ ಸಿಬ್ಬಂದಿ ಭೇಟಿ ನೀಡಿದೆ. ಈ ನಡುವೆ ಮತ್ತೊಬ್ಬನನ್ನ ಲಾಕ್ ಮಾಡಲಾಗಿದೆ.
ಇದನ್ನೂ ಓದಿ: ಬಿಗ್​ಬಾಸ್ ಆಟ ಮುಗಿಸಿ ಹೊರ ಬಂದ ಕಾಕ್ರೋಚ್ ಸುಧೀ..!
/filters:format(webp)/newsfirstlive-kannada/media/media_files/2025/11/12/delhi-incident-car-2025-11-12-12-14-23.jpg)
ಕಾರಿನ ನೋಂದಾಯಿತ ಮಾಲಿಕ ಅಮೀರ್ ರಶೀದ್ ಅಲಿ ಅರೆಸ್ಟ್​
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನ ನೊಂದಾಯಿತ ಮಾಲೀಕ ಅಮೀರ್ ರಶೀದ್ ಅಲಿಯನ್ನ ರಾಷ್ಟ್ರೀಯ ತನಿಖಾ ದಳ ದೆಹಲಿಯಲ್ಲಿ ಬಂಧಿಸಿದೆ. ಉಗ್ರ ಉಮರ್ ಉನ್ ನಬಿ ಜೊತೆ ಸೇರಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ಕಾಶ್ಮೀರಿ ನಿವಾಸಿ ಅಮೀರ್ ರಶೀದ್ ಅಲಿಯನ್ನ ಬಂಧಿಸಲಾಗಿದೆ. ಭಯೋತ್ಪಾದಕ ದಾಳಿ ನಡೆಸಲು ಆರೋಪಿ ಆತ್ಮ*ತ್ಯಾ ಬಾಂಬರ್ ಉಮರ್ ನಬಿ ಜೊತೆ ಸೇರಿ ಸಂಚು ರೂಪಿಸಿದ್ದಾನೆ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ. ನಬಿಗೆ ಸೇರಿದ ಮತ್ತೊಂದು ವಾಹನ ವಶಪಡಿಸಿಕೊಂಡಿದ್ದು ಪರಿಶೀಲಿಸಲಾಗುತ್ತಿದೆ ಎಂದೂ ಉಲ್ಲೇಖಿಸಿದೆ.
ಇದನ್ನೂ ಓದಿ:ಗಂಭೀರ್ ಕೋಚ್ ಆದ್ಮೇಲೆ ಇದೆಲ್ಲ.. ತವರಿನಲ್ಲಿ ಟೀಂ ಇಂಡಿಯಾಗೆ ಏನಾಗ್ತಿದೆ..?
/filters:format(webp)/newsfirstlive-kannada/media/media_files/2025/11/11/delhi-incident-7-2025-11-11-21-23-38.jpg)
ಉಗ್ರರೊಂದಿಗೆ ಸಂಪರ್ಕ.. ಹರ್ಯಾಣ ಮೂಲದ ವೈದ್ಯೆ ವಶಕ್ಕೆ
ಪ್ರಕರಣ ಸಂಬಂಧ ವೈಟ್-ಕಾಲರ್ ಉಗ್ರರ ಘಟಕದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಕಾಶ್ಮೀರದ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯೆಯನ್ನು ವಶಕ್ಕೆ ಪಡೆದಿದ್ದಾರೆ. ರೋಹ್ಟಕ್ ಮೂಲದ ಡಾ.ಪ್ರಿಯಾಂಕಾ ಶರ್ಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಕೆಯ ಮನೆಯಲ್ಲಿ ವಶಪಡಿಸಿಕೊಂಡ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್‌ಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮೂವರು ವೈದ್ಯರು ಸೇರಿ ನಾಲ್ವರನ್ನು NIA ಬಿಡುಗಡೆ
ಒಟ್ಟಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನ ಬಂಧಿಸಲಾಗಿದೆ ಅಂತ ಕೇಂದ್ರ ಸಚಿವ ಕೀರ್ತಿ ವರ್ಧನ್ ಸಿಂಗ್ ಉತ್ತರಪ್ರದೇಶದಲ್ಲಿ ಹೇಳಿದ್ದಾರೆ. ಭಯೋತ್ಪಾದಕರನ್ನ ಹಾಗೂ ಉಗ್ರ ಕೃತ್ಯಕ್ಕೆ ಬಳಸಲಾದ ವಸ್ತುಗಳನ್ನ NIA ವಶಪಡಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಇನ್ನು ಕೆಂಪುಕೋಟೆ ಬಳಿ ನಡೆದ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ವೈದ್ಯರು ಸೇರಿದಂತೆ ನಾಲ್ವರನ್ನು NIA ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಪ್ರಕರಣದಲ್ಲಿ ಈ ನಾಲ್ವರ ಪಾತ್ರ ಇಲ್ಲ ಎಂದು ಎನ್‌ಐಎ ಅಧಿಕಾರಿಗಳು ದೃಢಪಡಿಸಿದ್ದಾರೆ.
ಇದನ್ನೂ ಓದಿ: ‘ಒಂದು ಸೀರೆಗಾಗಿ..’ ಮದುವೆ ದಿನವೇ ವಧುವಿನ ಜೀವ ತೆಗೆದ ವರ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us