/newsfirstlive-kannada/media/media_files/2025/11/17/cockroach-sudhi-2025-11-17-07-21-32.jpg)
ಬಿಗ್​​ಬಾಸ್ ಮನೆಯಿಂದ ಕಾಕ್ರೋಚ್ ಸುಧಿ ಅವರು ಹೊರ ಬಿದ್ದಿದ್ದಾರೆ. ಬರೋಬ್ಬರಿ 7 ವಾರಗಳ ಕಾಲ ಬಿಗ್​ಬಾಸ್ ಮನೆಯಲ್ಲಿದ್ದ ಸುಧಿ, ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು.
ಹೇಗೆ ಎಲಿಮಿನೇಟ್ ಮಾಡಲಾಯ್ತು..?
ನಿನ್ನೆ ಎಪಿಸೋಡ್​ನಲ್ಲಿ ಒಟ್ಟು 5 ಮಂದಿ ನಾಮಿನೇಟ್ ಆಗಿರುವ ಸ್ಪರ್ಧಿಗಳು ಉಳಿದುಕೊಂಡಿದ್ದರು. ಅವರಲ್ಲಿ ಧ್ರುವಂತ್ ಅವರನ್ನು ಕಿಚ್ಚ ಸುದೀಪ್ ಸೇಫ್ ಎಂದು ಘೋಷಿಸಿದರು. ಬಳಿಕ ರಘು, ರಿಷಾ, ಸುಧಿ ಮತ್ತು ಜಾಹ್ನವಿ ನಾಮಿನೇಷನ್‌ನಲ್ಲಿದ್ದರು. ಈ ನಾಲ್ಕು ಸ್ಪರ್ಧಿಗಳು ತಮ್ಮ ತಮ್ಮ ಸೂಟ್‌ಕೇಸ್ ತೆಗೆದುಕೊಂಡು ಮುಖ್ಯಧ್ವಾರದ ಬಳಿ ಬಂದಿದ್ದಾರೆ.
ಇದನ್ನೂ ಓದಿ:‘ವಂಶದ ಕುಡಿ, ಸುಲಭಕ್ಕೆ ಸೋಲಲ್ಲ’ ಗಿಲ್ಲಿ, ರಕ್ಷಿತಾಗೆ ಸುದೀಪ್ ಕ್ಲಾಸ್​..!
ಬಿಗ್​ಬಾಸ್ ಮನೆಯ ಬಾಗಿಲು ಓಪನ್ ಆದಾಗ ಎಲ್ಲರೂ ಆಚೆ ಕಡೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿಂತಿರುತ್ತಾರೆ. ಮುಖ್ಯಧ್ವಾರ ಕ್ಲೋಸ್ ಆಗಿ ಮತ್ತೆ ಓಪನ್ ಆದಾಗ ಯಾರು ಇರಲ್ಲವೋ, ಅವರು ಮನೆಯಿಂದ ಔಟ್ ಎಂದು ಸುದೀಪ್ ತಿಳಿಸಿದ್ದರು. ಅಂತೆಯೇ ಕಾಕ್ರೋಚ್ ಸುಧೀ ಅವರು ಕಾಣಿಸಲಿಲ್ಲ.
ಅದನ್ನು ನೋಡಿದ ಸುಧೀಪ್, ಸೇಫ್ ಆದ ರಘು, ಜಾಹ್ನವಿ ಹಾಗೂ ರಿಷಾ ಗೌಡಗೆ ಅಭಿನಂದನೆ ತಿಳಿಸಿದರು. ಹಿಂದಿನ ವಾರವೇ ಚಂದ್ರಪ್ರಭ ಜೊತೆಗೆ ಕಾಕ್ರೋಚ್ ಸುಧಿ ನಾಮಿನೇಷನ್‌ನಲ್ಲಿದ್ದರು. ಎಲಿಮಿನೇಷನ್ ಭೀತಿಯಲ್ಲಿದ್ದ ಕಾಕ್ರೋಚ್ ಸುಧಿ ತಮಗೆ ಸಿಕ್ಕಿರುವ ಸ್ಪೆಷಲ್ ಪವರ್ ಬಳಸಿಕೊಂಡು ಸೇವ್ ಆಗಿದ್ದರು. ಇದರಿಂದ ಚಂದ್ರಪ್ರಭ ಮನೆಯಿಂದ ಹೊರಬರಬೇಕಾಯಿತು.
ಇದನ್ನೂ ಓದಿ: BBK12 ಗಿಲ್ಲಿ ಕಿಚ್ಚನ ಇಮಿಟೇಷನ್‌ಗೆ ಎಷ್ಟು ಮಾರ್ಕ್ಸ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us