Advertisment

ಗಂಭೀರ್​ ಕೋಚಿಂಗ್​​ನಲ್ಲಿ ಸೋಲು, ಸೋಲು.. ಇದಕ್ಕೆ 5 ಯಡವಟ್ಟುಗಳೇ ಕಾರಣ..!

ಮುಖಭಂಗ.. ಹೀನಾಯ ಮುಖಭಂಗ.. ತುಂಬಾ ಹಿಂದಲ್ಲ.. 2 ವರ್ಷದ ಹಿಂದೆ ಟೆಸ್ಟ್​ ಕ್ರಿಕೆಟ್​​ನಲ್ಲಿ ಟೀಮ್​ ಇಂಡಿಯಾ ಅಧಿಪತ್ಯ ಸಾಧಿಸಿತ್ತು. ಆದ್ರೀಗ ತವರಿನಲ್ಲಿ ಗೆಲ್ಲೋಕೆ ತಿಣುಕಾಡ್ತಿದೆ. ಭಾರತದ ನೆಲದಲ್ಲಿ ನಮ್ಮ ಸೋಲಿಸೋರೆ ಇಲ್ಲ ಎಂದು ಮೆರೆದಾಡಿದ್ದ ಟೀಮ್​ ಇಂಡಿಯಾ ಈಗ ನೆಲ ಕಚ್ಚಿದೆ.

author-image
Ganesh Kerekuli
Gambhir (1)
Advertisment
  • ಕೊಲ್ಕತ್ತಾ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾಗೆ ಹೀನಾಯ ಸೋಲು
  • ಹೆಡ್​​ ಕೋಚ್​ ಗೌತಮ್​ ಗಂಭೀರ್​​ ಕಾರ್ಯವೈಖರಿ ಬಗ್ಗೆ ಪ್ರಶ್ನೆ
  • ಗೌತಮ್​ ಗಂಭೀರ್​ ಕೋಚಿಂಗ್​ನಲ್ಲಿ ಹೀನಾಯ ಪ್ರದರ್ಶನ

ಈಡನ್​​ ಗಾರ್ಡನ್ಸ್​ ಟೆಸ್ಟ್​ ಪಂದ್ಯದ ಹೀನಾಯ ಸೋಲು ಟೀಮ್ ಇಂಡಿಯಾದ ಅಸಲಿ ಸಾಮರ್ಥ್ಯವನ್ನ ಬಟಾಬಯಲು ಮಾಡಿದೆ. ಹೀನಾಯ ಸೋಲಿನ ಬೆನ್ನಲ್ಲೇ ಹೆಡ್​ ಕೋಚ್​ ಗೌತಮ್​ ಗಂಭೀರ್​ ಮೇಲೆ ಟೀಕಾಸ್ತ್ರ ಪ್ರಯೋಗವಾಗ್ತಿದೆ. ಅಷ್ಟಕ್ಕೂ ಗಂಭೀರ್​ ಕೋಚಿಂಗ್​ನಲ್ಲಿ ಟೀಮ್​ ಇಂಡಿಯಾ ವೈಫಲ್ಯ ಅನುಭವಿಸ್ತಿರೋದ್ಯಾಕೆ? ಇಲ್ಲಿದೆ ಡಿಟೇಲ್ಸ್. 

Advertisment

ಕೊಲ್ಕತ್ತಾ ಟೆಸ್ಟ್​ ಹೀನಾಯ ಸೋಲು

ಸೌತ್​ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಸೋಲು ಟೀಮ್​ ಇಂಡಿಯಾದ ಅಸಲಿ ಸಾಮರ್ಥ್ಯವನ್ನ ಬಟಾಬಯಲು ಮಾಡಿದೆ. 124 ರನ್​ಗಳನ್ನ ಅದೂ ತವರಿನಲ್ಲಿ ಚೇಸ್​ ಮಾಡಲಾಗದ ಟೀಮ್​ ಇಂಡಿಯಾವನ್ನ ವಿಶ್ವ ಶ್ರೇಷ್ಟ ತಂಡ ಅನ್ನೋಕಾಗುತ್ತಾ.?  93 ರನ್​ಗಳಿಗೆ ಆಲೌಟ್​ ಆದ ತಂಡದ ಆಟಗಾರರನ್ನ ವಿಶ್ವ ಶ್ರೇಷ್ಟ ಆಟಗಾರರು ಅನ್ನೋಕಾಗುತ್ತಾ? ಅಸಲಿಗೆ ಆಟಗಾರರಿಗಿಂತ ಸದ್ಯ ಪ್ರಶ್ನೆಹುಟ್ಟಿರೋದು ಹೆಡ್​ ಕೋಚ್​ ಸಾಮರ್ಥ್ಯದ ಮೇಲೆ.

ಇದನ್ನೂ  ಓದಿ:ದೆಹಲಿಯಲ್ಲಿ ಕಾರ್ ಬಾಂಬ್ ಸ್ಪೋಟಿಸಿದ ಉಮರ್ ನಬಿಯ ವಿಡಿಯೋ ಹೇಳಿಕೆ ಬಿಡುಗಡೆ: ವಿಡಿಯೋದಲ್ಲಿ ಉಗ್ರ ಉಮರ್ ನಬಿ ಹೇಳಿದ್ದೇನು?

ಚಾಂಪಿಯನ್ಸ್ ಟ್ರೋಫಿ: ಕೆ.ಎಲ್​ ರಾಹುಲ್​ಗೆ ಟೀಮ್​ ಇಂಡಿಯಾದಲ್ಲಿ ವಿಶೇಷ ಜವಾಬ್ದಾರಿ

ರವಿಶಾಸ್ತ್ರಿ ಹೆಡ್​ ಕೋಚ್​ ಆಗಿದ್ದ ಅವಧಿಯಲ್ಲಿ 43 ಪಂದ್ಯಗಳನ್ನಾಡಿದ್ದ ಟೀಮ್​ ಇಂಡಿಯಾ 25 ಪಂದ್ಯ ಗೆದ್ದು 13 ಪಂದ್ಯ ಸೋತಿತ್ತು. ರಾಹುಲ್ ದ್ರಾವಿಡ್​ ಮಾರ್ಗದರ್ಶನದಲ್ಲಿ 24 ಪಂದ್ಯಗಳನ್ನಾಡಿದ್ದ ಟೀಮ್ ಇಂಡಿಯಾ 14 ಪಂದ್ಯ ಗೆದ್ದು, 7 ಸೋತಿತ್ತು. ಗೌತಮ್​ ಗಂಭೀರ್​ ಕೋಚಿಂಗ್​ ಮಾರ್ಗದರ್ಶನದಲ್ಲಿ 18 ಪಂದ್ಯಗಳನ್ನ ಆಡಿರೋ ಭಾರತ ತಂಡ 7 ಪಂದ್ಯ ಮಾತ್ರ ಗೆದ್ದಿದ್ದು, 9 ಪಂದ್ಯ ಸೋತಿದೆ. 

Advertisment

ವೈಫಲ್ಯ ಯಾಕೆ..?

ಟೆಸ್ಟ್​ ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾ ಇತಿಹಾಸದಲ್ಲೇ ಇಂತಾ ಹೀನಾಯ ಪ್ರದರ್ಶನವನ್ನ ನೀಡಿರಲಿಲ್ಲ. ಗಂಭೀರ್​ ಮಾರ್ಗದರ್ಶನದಲ್ಲಿ ತಂಡದ ಪರ್ಫಾಮೆನ್ಸ್​ ತವರಿನಲ್ಲೇ ಸೋಲುವಷ್ಟು ಪಾತಾಳಕ್ಕೆ ಕುಸಿದಿದೆ. ಮಾಜಿ ಕ್ರಿಕೆಟರ್ಸ್​, ಫ್ಯಾನ್ಸ್ ಎಲ್ಲರೂ ಗಂಭೀರ್​ ಮೇಲೆ ಸದ್ಯ ಟೀಕಾಸ್ತ್ರ ಪ್ರಯೋಗಿಸ್ತಿದ್ದಾರೆ. ಅಸಲಿಗೆ ಈ ವೈಫಲ್ಯಕ್ಕೆ ಕಾರಣ ಏನ್​ ಗೊತ್ತಾ? ಗಂಭೀರ್ ಮಾಡಿದ​ ಯಡವಟ್ಟುಗಳು.

ಯಡವಟ್ಟು ನಂ.1: ಅಗ್ರೆಸ್ಸಿವ್​ ಅಪ್ರೋಚ್

ಗಂಭೀರ್​ ಹಿನ್ನೆಡೆಗೆ ಪ್ರಮುಖ ಕಾರಣವೇ ಅಗ್ರೆಸ್ಸಿವ್ ಅಪ್ರೋಚ್​​. 5 ದಿನಗಳ ಸುದೀರ್ಘ ಟೆಸ್ಟ್​ ಕ್ರಿಕೆಟ್​ನಲ್ಲಿ ಈ ಅಪ್ರೋಚ್​ ಎಷ್ಟು ಸೂಕ್ತ? ಟೆಸ್ಟ್​ ಕ್ರಿಕೆಟ್​ನಲ್ಲಿ ಆದ್ಯತೆ ಇರಬೇಕಿರರೋದು ತಾಳ್ಮೆ, ಎಚ್ಚರಿಕೆ, ರಕ್ಷಣಾತ್ಮಕ ಆಟಕ್ಕೆ. ಗಂಭೀರ್​ ಕೋಚಿಂಗ್​ನಲ್ಲಿ ಅದು ಕಾಣಿಸ್ತಿಲ್ಲ. 

ಯಡವಟ್ಟು ನಂ.2: T20 ಮೈಂಡ್​ಸೆಟ್ 

20 ಓವರ್​ಗಳ ಗೇಮ್​ ಬೇರೆ. ಟೆಸ್ಟ್​ ಕ್ರಿಕೆಟ್​ ಬೇರೆ. ವೇಗವಾಗಿ ಮುಗಿಯೋ ಟಿ20 ಕ್ರಿಕೆಟ್​ನಲ್ಲಿ ಏನು ಬೇಕಾದ್ರೂ ಪ್ರಯೋಗ ಮಾಡಬಹುದು. ಟೆಸ್ಟ್​ ಕ್ರಿಕೆಟ್​​ನಲ್ಲಿ ಅನಗತ್ಯ ಪ್ರಯೋಗಗಳಿಗೆ ಫಲ ಸಿಗಲ್ಲ. ಗಂಭೀರ್​ ಪಂದ್ಯದಿಂದ ಪಂದ್ಯಕ್ಕೆ ಪ್ರಯೋಗಗಳನ್ನೆ ಮಾಡ್ತಿದ್ದಾರೆ. ಪ್ಲೇಯಿಂಗ್​ ಇಲೆವೆನ್​, ಬ್ಯಾಟಿಂಗ್ ಆರ್ಡರ್​, ಬೌಲಿಂಗ್​ ಕಾಂಬಿನೇಷನ್​ ಪದೇ ಪದೇ ಬದಲಾವಣೆಯಾಗ್ತಿರೋದು ಕೂಡ ಸೋಲಿಗೆ ಕಾರಣವಾಗಿದೆ. 

Advertisment

ಯಡವಟ್ಟು ನಂ.3: ಅನುಭವಿಗಳ ಅನುಪಸ್ಥಿತಿ

ಗಂಭೀರ್​ ಕೋಚ್​ ಆದ ಬಳಿಕ ತನ್ನ ಅಧಿಪತ್ಯ ಸಾಧಿಸಲು ಹೊಸ ದಾಳ ಉರುಳಿಸಿ ಸೀನಿಯರ್ಸ್​ ಕತೆ ಮುಗಿಸಿದ್ದು ಸೀಕ್ರೆಟ್​ ಆಗಿ ಏನು ಉಳಿದಿಲ್ಲ. ಅಶ್ವಿನ್​, ಕೊಹ್ಲಿ, ರೋಹಿತ್​ರಂತಹ ಸೀನಿಯರ್​ಗಳ ಅನುಪಸ್ಥಿತಿ ಈಗ ತಂಡವನ್ನ ಕಾಡ್ತಿದೆ. ಅನುಭವಿಗಳಿದ್ದಾಗ ಸಾಲಿಡ್​ ಆಟವಾಡಿದ್ದ ಕೆಲ ಯುವ ಆಟಗಾರರೂ ಕೂಡ ಅವರ ಅಲಭ್ಯತೆಯಲ್ಲಿ ಪರ್ಫಾಮ್​ ಮಾಡುವಲ್ಲಿ ಫೇಲ್ ಆಗ್ತಿದ್ದಾರೆ. 

ಇದನ್ನೂ ಓದಿ: ಕೋಲ್ಕತ್ತ ಟೆಸ್ಟ್​ನಲ್ಲಿ ಜೈಸ್ವಾಲ್​​ಗೆ ವಿಲನ್ ಆಗಿ ಕಾಡಿದ್ದು ಯಾರು ಗೊತ್ತಾ..?

gautam_gambhir_surya

ಯಡವಟ್ಟು ನಂ.4: ಒತ್ತಡ ನಿಭಾಯಿಸುವಲ್ಲಿ ವಿಫಲ

ಸೌತ್​ ಆಫ್ರಿಕಾ ಎದುರಿನ ಸೋಲಿನ ಬಳಿಕ ಸ್ವತಃ ಗಂಭೀರ್​ ಇದನ್ನ ಒಪ್ಪಿಕೊಂಡಿದ್ದಾರೆ. ಟ್ರಿಕಿ ಟ್ರ್ಯಾಕ್​ ಆದ್ರೂ 124 ದೊಡ್ಡ ಟಾರ್ಗೆಟ್​ ಏನು ಆಗಿರಲಿಲ್ಲ. ಇದನ್ನ ಚೇಸಿಂಗ್​ ಮಾಡುವಾಗ 93 ರನ್​ಗಳಿಗೆ ಆಲೌಟ್​ ಆದ ಕತೆ ಬ್ಯಾಟರ್ಸ್​ ಒತ್ತಡಕ್ಕೆ ಸಿಲುಕಿ ವಿಕೆಟ್​ ಒಪ್ಪಿಸಿದ್ದನ್ನ ಇದು ಹೇಳ್ತಿದೆ. ಒನ್ಸ್​ ಅಗೇಲ್​ ಸೀನಿಯರ್ಸ್​ ಅಲಭ್ಯತೆ ಇಲ್ಲಿ ಕಾಡಿದೆ. 

Advertisment

ಯಡವಟ್ಟು ನಂ.5: ನಾಯಕನಿಗಿಲ್ಲ ಸ್ವಾತಂತ್ರ್ಯ

ಇದೂ ಕೂಡ ಒಂದು ಕಾರಣವೇ. ತಂಡದ ಆಯ್ಕೆ, ಪ್ಲೇಯಿಂಗ್​ ಇಲೆವೆನ್​ ಆಯ್ಕೆ, ಬ್ಯಾಟಿಂಗ್​ ಆರ್ಡರ್​ ಸೆಲೆಕ್ಷನ್​, ಬೌಲಿಂಗ್ ಬದಲಾವಣೆ ಎಲ್ಲದರಲ್ಲೂ ಗಂಭೀರ್​ ಮಾತೇ ಫೈನಲ್​ ಆಗಿದೆ. ಗಂಭೀರ್​ ಹೇಳಿದಂತೆ ಶುಭ್​ಮನ್​ ಗಿಲ್ ಫೀಲ್ಡ್​ನಲ್ಲಿ ತಂಡ ಮುನ್ನಡೆಸ್ತಿರುವಂತಿದೆ. ಕ್ಯಾಪ್ಟನ್​ಗೆ ಸ್ವಾತಂತ್ರ್ಯವೇ ಇಲ್ಲದಿರೋದು ಕೂಡ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. 

ಇದನ್ನೂ ಓದಿ: IPL ನಾಯಕತ್ವ ಕಷ್ಟದ ಬಗ್ಗೆ ಸ್ಫೋಟಕ ಹೇಳಿಕೆ.. ಮಾಲೀಕರ ಬಗ್ಗೆಯೂ ಬಹಿರಂಗ ಮಾತು..!

Gambhir

ನ್ಯೂಜಿಲೆಂಡ್​ ಎದುರಿನ ವೈಟ್​ವಾಷ್ ಮುಖಭಂಗದ ಬಳಿಕ ಇದೀಗ ತವರಿನಲ್ಲಿ ಮತ್ತೆ ಸೌತ್​ ಆಫ್ರಿಕಾ ಎದುರು ಮೊದಲ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾ ಸೋಲುಂಡಿದೆ. ಮತ್ತೊಂದು ವೈಟ್​ವಾಷ್​ ಮುಖಭಂಗದಿಂದ ತಪ್ಪಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದಾದ್ರೂ ಕೋಚ್​ ಗಂಭೀರ್​ ಪಾಠ ಕಲಿಯಬೇಕಿದೆ. 

Advertisment

ಇನ್ನಷ್ಟು ಕ್ರಿಕೆಟ್ ಸುದ್ದಿಗಾಗಿ ಇಲ್ಲಿಕ್ಲಿಕ್ ಮಾಡಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Gautam Gambhir Team India
Advertisment
Advertisment
Advertisment