/newsfirstlive-kannada/media/media_files/2025/11/19/gambhir-and-agarkar-2025-11-19-13-32-58.jpg)
ಮೊದಲಿಗೆ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ವೈಟ್​ವಾಶ್ ಮುಖಭಂಗ, ಇದೀಗ ಸೌತ್ ಆಫ್ರಿಕಾ ವಿರುದ್ಧ ಕೊಲ್ಕತ್ತಾ ಟೆಸ್ಟ್​ನಲ್ಲಿ ಹೀನಾಯ ಸೋಲು. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​ನ ಪ್ರಶ್ನೆ ಮಾಡುವಂತೆ ಮಾಡಿದೆ. ತಂಡದ ಆಯ್ಕೆಯಲ್ಲಿ ಯಡವಟ್ಟು, ಪ್ಲೇಯಿಂಗ್ ಇಲೆವೆನ್ ಗೊಂದಲ, ಫೇವರಿಸಂ, ಸ್ವಾರ್ಥ. ಇವೆಲ್ಲವೂ ಟೀಮ್ ಇಂಡಿಯಾ ವಾತಾವರಣ ಹದಗೆಡುವಂತೆ ಮಾಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಭಾವಂತ ಕ್ರಿಕೆಟಿಗರ ಕಡೆಗಣಿಸ್ತಿರೋದು ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.
ಗಾಯಕ್ವಾಡ್​​​ಗೆ ಯಾಕೆ ಚಾನ್ಸ್ ಕೊಡ್ತಿಲ್ಲ?
ಮಹಾರಾಷ್ಟ್ರ ಬ್ಯಾಟ್ಸ್​ಮನ್ ಗಾಯಕ್ವಾಡ್ ಒಬ್ಬ ಟ್ಯಾಲೆಂಟೆಡ್ ಕ್ರಿಕೆಟರ್. ಎಲ್ಲದಕ್ಕಿಂತ ಮುಖ್ಯವಾಗಿ ಗಾಯಕ್ವಾಡ್, ಮೂರೂ ಫಾರ್ಮೆಟ್​​​​ಗೆ ಸೆಟ್ ಆಗೋ ಪ್ಲೇಯರ್. ಸದ್ಯ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಅದ್ಭುತ ಫಾರ್ಮ್​ನಲ್ಲಿರುವ ಋತುರಾಜ್, ಟೆಸ್ಟ್ ತಂಡಕ್ಕೆ ಯಾಕೆ ಬೇಡವಾದ್ರು? ದುಲೀಪ್ ಟ್ರೋಫಿ ಸೆಮಿಫೈನಲ್​ನಲ್ಲಿ 184 ರನ್, ರಣಜಿ ಟ್ರೋಫಿಯಲ್ಲಿ ಚಂಢೀಗಢ ವಿರುದ್ಧ ಶತಕ, ಕೇರಳ ವಿರುದ್ಧ ಎರಡೂ ಇನ್ನಿಂಗ್ಸ್​ಗಳಲ್ಲಿ ತಲಾ ಅರ್ಧಶತಕ, ಸೌತ್ ಆಫ್ರಿಕಾ 'ಎ' ವಿರುದ್ಧ ಒಂದು ಶತಕ ಮತ್ತು ಒಂದು ಅರ್ಧಶತಕ. ಇಷ್ಟೆಲ್ಲಾ ರನ್​​ ದಾಖಲಿಸುತ್ತಿದ್ರೂ ಋತುರಾಜ್​​ಗೆ ಟೀಮ್ ಇಂಡಿಯಾ ಬಾಗಿಲು ಮಾತ್ರ ಓಪನ್ ಆಗುತ್ತಲೇ ಇಲ್ಲ.
ಕರುಣ್ ನಾಯರ್ ತಪ್ಪೇನು?
ಕರ್ನಾಟಕದ ಪ್ರತಿಭಾವಂತ ಕ್ರಿಕೆಟಿಗ ಕರುಣ್ ನಾಯರ್​ ವಿಚಾರದಲ್ಲಿ ತುಂಬಾನೇ ಅನ್ಯಾಯವಾಗಿದೆ. ಅದು ಒಂದೆರಡಲ್ಲ, ಹಲವು ಭಾರಿ ಕರುಣ್ ನಾಯರ್​ಗೆ ಸೆಲೆಕ್ಟರ್ಸ್​ ದೋಖಾ ಮಾಡಿದ್ದಾರೆ. ತ್ರಿಶತಕ ಬಾರಿಸಿದ್ರೂ ತಂಡದಿಂದ ಡ್ರಾಪ್ ಮಾಡ್ತಾರೆ. ಡಬಲ್ ಸೆಂಚುರಿ ಬಾರಿಸಿದ್ರೂ ತಂಡದಲ್ಲಿ ಚಾನ್ಸ್ ಕೊಡಲ್ಲ. ಪ್ರಸಕ್ತ ರಣಜಿ ಟೂರ್ನಿಯಲ್ಲಿ ಕರುಣ್ ನಾಯರ್, ಒಳ್ಳೆ ಬ್ಯಾಟಿಂಗ್ ಪ್ರದರ್ಶಿಸ್ತಿದ್ದಾರೆ. ನಾಯರ್​ಗೆ ನ್ಯಾಷನಲ್ ಟೀಮ್​ನಲ್ಲಿ ಅವಕಾಶ ಇಲ್ಲ. ಹೋಗ್ಲಿ ಕರುಣ್ ನಾಯರ್ ಮಾಡಿದ ತಪ್ಪಾದ್ರೂ ಏನು? ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮತ್ತು ಸೆಲೆಕ್ಟರ್ಸ್​ ಇದಕ್ಕೆ ಉತ್ತರ ಕೊಡಬೇಕು.
ಇದನ್ನೂ ಓದಿ:ಮೊದಲು ಸಿಹಿ ಮುತ್ತು.. ನಂತರ ಸೊಂಟದ ಮೇಲೆ ಕೂರಿಸಿಕೊಂಡು.. ಪಾಂಡ್ಯ ವೈರಲ್ ಫೋಟೋ
ಸರ್ಫರಾಜ್ ಖಾನ್ ಆತ್ಮವಿಶ್ವಾಸವೇ ಕುಗ್ಗಿಸಿಬಿಟ್ರು!
ಮುಂಬೈನ ಯಂಗ್ ಌಂಡ್ ಡೈನಾಮಿಕ್ ಬ್ಯಾಟ್ಸ್​ಮನ್ ಸರ್ಫರಾಜ್ ಖಾನ್ ಕಮ್​ಬ್ಯಾಕ್​​ಗೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮೊದಲಿಗೆ ಸರ್ಫರಾಜ್ ನೋಡೋಕೆ ಅನ್​ಫಿಟ್ ಅಂತ ಪದೇ ಪದೇ ಆರೋಪ ಮಾಡಿದ್ರು. ಸರ್ಫರಾಜ್ ಕೇವಲ 2 ತಿಂಗಳಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ 17 ಕೆ.ಜಿ ತೂಕ ಇಳಿಸಿಕೊಂಡು ಆರೋಪಗಳಿಗೆ ತಿರುಗೇಟು ನೀಡಿದ್ರು. ಸರ್ಫರಾಜ್ ಫಿಟ್ನೆಸ್, ಟೀಮ್ ಮ್ಯಾನೇಜ್ಮೆಂಟ್ ಮತ್ತು ಸೆಲೆಕ್ಟರ್ಸ್​​ಗೆ ಅಷ್ಟೇನು ಇಂಪ್ರೆಸ್ ಆಗ್ಲಿಲ್ಲ. ದಿನನಿತ್ಯ ಫಿಟ್ನೆಸ್. ಫಿಟ್ನೆಸ್ ಅಂತ ವರ್ಕ್​ಔಟ್ ಮಾಡ್ತಿದ್ದ ಸರ್ಫರಾಜ್ ಕೊನೆಗೆ ಬ್ಯಾಟಿಂಗ್ ಮರೆತು, ಫಾರ್ಮ್ ಕಳೆದುಕೊಂಡ್ರು. ಆತ್ಮವಿಶ್ವಾಸ ಕಳೆದುಕೊಂಡು ಕುಗ್ಗಿ ಹೋದ್ರು. ಒಬ್ಬ ಯುವ ಕ್ರಿಕೆಟಿಗನಿಗೆ ಹೀಗೆಲ್ಲಾ ಮಾಡಬೇಕಿತ್ತಾ?
ಕರ್ನಾಟಕದ ಆರ್.ಸ್ಮರಣ್ ಕಣ್ಣಿಗೆ ಕಾಣ್ತಿಲ್ವಾ?
ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕದ ಎಡಗೈ ಬ್ಯಾಟರ್ ರವಿಚಂದ್ರನ್ ಸ್ಮರಣ್, ಡ್ರೀಮ್ ಫಾರ್ಮ್​ನಲ್ಲಿ ರನ್​​ ಸ್ಕೋರ್​ ಮಾಡ್ತಿದ್ದಾರೆ. ಗೋವಾ ವಿರುದ್ಧ ಅಜೇಯ 174 ರನ್, ಕೇರಳ ವಿರುದ್ಧ 233 ರನ್, ಚತ್ತೀಸ್​ಗಢದ ವಿರುದ್ಧ ಅಜೇಯ 227 ರನ್. ಹೀಗೆ ಟನ್​ಗಟ್ಟಲೇ ರನ್, ಶತಕಗಳ ಮೇಲೆ ಶತಕಗಳನ್ನ ಸಿಡಿಸ್ತಿದ್ರೂ ಸ್ಮರಣ್​ ಯಾರ ಕಣ್ಣಿಗೂ ಕಾಣ್ತಿಲ್ಲ. ತಂಡದಲ್ಲಿ ಸ್ಲಾಟ್ ಖಾಲಿ ಇದ್ರೂ, ತಮಗೆ ಬೇಕಾದ ಆಟಗಾರರನ್ನ ಆಡಿಸುತ್ತಿದ್ದಾರೆ. ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಮತ್ತೊಂದು ನ್ಯಾಯ. ಇದು ರಾಜಕೀಯ ಅಲ್ಲದೇ ಮತ್ತೇನು? ಪಾರದರ್ಶಕತೆ ಅನ್ನೋ ಮಾತೇ ಬರೋದಿಲ್ಲ.
ಇದನ್ನೂ ಓದಿ: ಗಿಲ್ ಆರೋಗ್ಯ ಈಗ ಹೇಗಿದೆ? ಎರಡನೇ ಟೆಸ್ಟ್ ಆಡ್ತಾರಾ? ಆಡಲ್ವಾ?
ಇನ್ನೆಷ್ಟು ದಿನ ನಿಮ್ಮ ಆಟ?
ಎಂ.ಎಸ್.ಕೆ ಪ್ರಸಾದ್ ಚೇತನ್ ಶರ್ಮಾ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದಾಗ ಎಲ್ಲವೂ ರೈಟ್ ಟ್ರ್ಯಾಕ್​ನಲ್ಲಿತ್ತು. ಹಂಡ್ರೆಡ್ ಪರ್ಸಂಟ್ ಪರ್ಫೆಕ್ಟ್​ ಇಲ್ಲದಿದ್ರೂ ಒಂದು ಮಟ್ಟಕ್ಕೆ ಓಕೆ ಓಕೆ ಆಗಿತ್ತು. ಅಜಿತ್ ಅಗರ್ಕರ್ ಯಾವಾಗ ಆಯ್ಕೆ ಸಮಿತಿ ಮುಖ್ಯಸ್ಥರಾದ್ರೋ ಎಲ್ಲವೂ ಗೊಂದಲಮಯವಾಗಿಬಿಟ್ತು. ಅನಿಲ್ ಕುಂಬ್ಳೆ, ರವಿ ಶಾಸ್ತ್ರಿ, ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾಗ ಎಲ್ಲವೂ ಅಂದುಕೊಂಡಂತೆ ಸಾಗ್ತಿತ್ತು. ಗಂಭೀರ್ ಟೀಮ್ ಇಂಡಿಯಾ ಕೋಚ್ ಆದ್ಮೆಲೆ ಏನೇನೋ ಆಗ್ತಿದೆ. ತೆರೆ ಹಿಂದೆ ಅಗರ್ಕರ್-ಗಂಭೀರ್ ಜೋಡಿ ಆಡ್ತಿರುವ ಆಟ ಟೀಮ್ ಇಂಡಿಯಾಕ್ಕೆ ಸಂಕಟ ಶುರುವಾಗಿದೆ.
ತೆರೆ ಹಿಂದೆ ಅಗರ್​ಕರ್-ಗಂಭೀರ್ ಆಟ ಬಿಸಿಸಿಐ ಬಿಗ್​ಬಾಸ್​​ಗಳಿಗೆ ಗೊತ್ತಿದ್ರೂ, ಯಾಕೆ ಮೌನವಾಗಿದ್ದಾರೆ ಅನ್ನೋದಕ್ಕೆ ಗೊತ್ತಿಲ್ಲ. ಹೀಗೆ ಮುಂದುವರೆದ್ರೆ ಮುಂದೆ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ತಂಡಗಳಂತಾದ್ರೂ ಆಶ್ಚರ್ಯ ಪಡಬೇಕಾಗಿಲ್ಲ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us