Advertisment

ಅಶ್ವಿನಿ ಗೌಡ ಸ್ವಾಭಿಮಾನಕ್ಕೆ ದಕ್ಕೆ.. ಬಿಗ್​ಬಾಸ್​ ಮನೆಯಲ್ಲಿ ಉಪವಾಸ ಸತ್ಯಾಗ್ರಹ..!

ಬಿಗ್​​ಬಾಸ್​ ಮನೆಯಲ್ಲಿ ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅದಕ್ಕೆ ಕಾರಣ ಅವರ ಸ್ವಾಭಿಮಾನಕ್ಕೆ ದಕ್ಕೆ ಆಗಿದೆಯಂತೆ! ಗಿಲ್ಲಿ, ಮ್ಯುಟಂಟ್ ರಘು ಹಾಗೂ ರಕ್ಷಿತಾ ಮೇಲೆ ಬೇರೆ ರೀತಿ ಸಮರ ಸಾರಿದಂತೆ ಕಾಣ್ತಿದೆ.

author-image
Ganesh Kerekuli
Ashwini Gowda (5)
Advertisment

ಬಿಗ್​​ಬಾಸ್​ ಮನೆಯಲ್ಲಿ ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅದಕ್ಕೆ ಕಾರಣ ಅವರ ಸ್ವಾಭಿಮಾನಕ್ಕೆ ದಕ್ಕೆ ಆಗಿದೆಯಂತೆ!

Advertisment

ರಘು ಜೊತೆ ಕಿತ್ತಾಡಿಕೊಂಡು ಕದ ಬಡಿದಿದ್ದ ಅಶ್ವಿನಿ ಗೌಡಗೆ ಬಿಗ್​ಬಾಸ್ ಡೋರ್​ ಓಪನ್ ಮಾಡಲಿಲ್ಲ. ಅದೇ ಕಾರಣಕ್ಕೆ ತಮಗೆ ಆಗುತ್ತಿರುವ ನೋವುಗಳನ್ನು ಹೊರ ಹಾಕಲು ಇದೀಗ ಹೊಟ್ಟೆಗೆ ಏನೂ ತಿನ್ನದೇ ಕೂತಿದ್ದಾರೆ. ಇದು ಬಿಗ್​​ಬಾಸ್​ ಮನೆಯ ಇತರ ಸದಸ್ಯರ ತಳಮಳಕ್ಕೂ ಕಾರಣವಾಗಿದೆ.

ಇದನ್ನೂ ಓದಿ: ‘ಕರ್ಣ’ ವೀಕ್ಷಕರಿಗೆ ಎರಡು ಸರ್ಪ್ರೈಸಿಂಗ್ ನ್ಯೂಸ್​..! Don't Miss

ಕಲರ್ಸ್ ಕನ್ನಡ ಇಂದು ಬೆಳಗ್ಗೆ ಪ್ರೊಮೋ ಒಂದನ್ನು ರಿಲೀಸ್ ಮಾಡಿದೆ. ಅದರಲ್ಲಿ ಅಶ್ವಿನಿ ಬೆಡ್ ಮೇಲೆ ಮಲಗಿಕೊಂಡಿದ್ದಾರೆ. ಜಾಹ್ನವಿ ತಟ್ಟೆಯಲ್ಲಿ ಊಟ ಹಾಕಿಕೊಂಡು ಬಂದಿದ್ದಾರೆ. ನೀವು ಫಸ್ಟು ಊಟ ಮಾಡಿ ಎಂದು ಒತ್ತಾಯ ಮಾಡಿದ್ದಾರೆ. ನಂತರದ ನಡೆದ ಸಂಭಾಷಣೆ ಹೀಗಿದೆ. 

  • ಜಾಹ್ನವಿ: ಊಟ ಮಾಡಿ ನೀವು
  • ಅಶ್ವಿನಿ ಗೌಡ: ಬೇಡ, ಜಾನು
  • ಜಾಹ್ನವಿ: ನಿನ್ನೆನೂ ಮಾಡಿಲ್ಲ. ಈಗಲೂ ತಿಂದಿಲ್ಲ
  • ಅಶ್ವಿನಿ ಗೌಡ: ಗೊತ್ತು, ತುಂಬಾ ಹರ್ಟ್ ಆಗಿದೆ, ನನಗೆ..
  • ಅಶ್ವಿನಿ ಗೌಡ: ನನ್ನ ವಯಸ್ಸಿಗೆ, ನನ್ನ ಲೇವಲ್​ಗೆ, ನನ್ನ ಮೆಚುರಿಟಿಗೆ.. ಈ ಥರದ ಅವಮಾನ ನನಗೆ ಅಲ್ಲ. ನನ್ನ ಸ್ವಾಭಿಮಾನವನ್ನು ಕೊಂದುಕೊಂಡು ತಿನ್ನೋಕೆ ಮನಸ್ಸು ಬರುತ್ತಾ? ನನಗೆ ನಾನೇ ಸ್ಟ್ಯಾಂಡ್ ತೆಗೆದುಕೊಳ್ತೀನಿ. 
Advertisment

ಇದರ ಮಧ್ಯೆ ಅಶ್ವಿನಿ ಗೌಡ ಬಗ್ಗೆ ಜಾಹ್ನವಿ ಹಾಗೂ ಧ್ರುವಂತ್ ಮಾತಾಡಿಕೊಂಡಿದ್ದಾರೆ. ಹಾಗಿದ್ದರೆ ಇನ್ಮುಂದೆ ಬಿಗ್​ಬಾಸ್ ಮನೆಯಲ್ಲಿ ಜಾಹ್ನವಿ ಏನನ್ನೂ ತಿನ್ನೋದೇ ಇಲ್ವಾ? ಎಂದು ಧ್ರುವಂತ್ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಜಾಹ್ನವಿ 10 ನಿಮಿಷದಲ್ಲಿ ಸೊಂಟ ನೋವು ಹೋಗಿಬಿಡುತ್ತಾ ಎಂದಾಗ ಟ್ರಿಗರ್ ಆಗಿಯೇ ಆಗಿಬಿಡುತ್ತೆ.. ಎಂದಿದ್ದಾರೆ. 

ಇತ್ತ ರಘು ಹಾಗೂ ರಕ್ಷಿತಾ ಕೂಡ ಮಾತನ್ನಾಡಿಕೊಂಡಿದ್ದು, ನಮಗೆ ಹೇಳಿಕೆ ಆಗಲ್ಲ ಅಲ್ವಾ? ನೀವು ಎಂಥ ದಬ್ಬಾಕಿದ್ದೀರಾ ಅಂದ್ರೆ.. ಅವ್ರಿಗೆ ಬೇಜಾರು ಆಗುತ್ತೆ ಸರ್ ಅಂತಾ ರಘು ಬಳಿ ಹೇಳಿದ್ದಾರೆ. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK12 Ashwini Gowda Bigg Boss Ashwini Gowda
Advertisment
Advertisment
Advertisment