/newsfirstlive-kannada/media/media_files/2025/11/20/bengaluru-robbery-2025-11-20-11-21-58.jpg)
7 ಕೋಟಿ ರಾಬರಿ ಕೇಸ್​ನ ದರೋಡೆಕೋರರಿಗಾಗಿ ಕರ್ನಾಟಕ ಗಡಿ ಭಾಗಗಳಲ್ಲಿ ತೀವ್ರ ಶೋಧ ನಡೆಯುತ್ತಿದೆ. ಸಿಸಿಬಿ ಪೊಲೀಸರೂ ಸೇರಿ ಸುಮಾರು 50ಕ್ಕೂ ಹೆಚ್ಚು ಪೊಲೀಸರಿಂದ ತಲಾಶ್ ನಡೆಸಲಾಗ್ತಿದೆ.
ದರೋಡೆಕೋರರ ಗ್ಯಾಂಗ್ ಎರಡು ತಂಡಗಳಾಗಿ ರಾಬರಿ ಮಾಡಿದ್ದು, ಒಂದು ಕಾರಿನಲ್ಲಿ ಸೆಕ್ಯೂರಿಟಿ, ಸಿಬ್ಬಂದಿಯನ್ನ ಗ್ಯಾಂಗ್​ ಕರೆದೊಯ್ದಿತ್ತು. ಮತ್ತೊಂದು ಗ್ಯಾಂಗ್​ ಹಣ ತುಂಬಿಕೊಂಡು ಎಸ್ಕೇಪ್ ಆಗಿತ್ತು ಎನ್ನಲಾಗ್ತಿದೆ. ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿದ್ರಿಂದ ಕಾರು ಪತ್ತೆಯೇ ಸಾವಾಲಾಗಿದ್ದು, ಸಿಸಿಟಿವಿ ಆಧಾರಿಸಿ ಕಾರಿಗಾಗಿ ತೀವ್ರ ಹುಡುಕಾಟ ನಡೆದಿದೆ.
ಇದನ್ನೂ ಓದಿ: ಪ್ರೀತಿಯ ಪತ್ನಿ ನಯನತಾರಗೆ 10 ಕೋಟಿ ಮೌಲ್ಯದ ಕಾರು ಗಿಫ್ಟ್ ಕೊಟ್ಟ ವಿಗ್ನೇಶ್..!
/filters:format(webp)/newsfirstlive-kannada/media/media_files/2025/11/20/robbary-1-2025-11-20-07-39-11.jpg)
ಇನ್ನು, ಪೊಲೀಸರು ನಾಲ್ಕು ತಂಡಗಳಾಗಿ ನಾಲ್ಕು ಆಯಾಮದಲ್ಲಿ ತನಿಖೆ ನಡೆಸ್ತಿದ್ದಾರೆ. ಆರೋಪಿಗಳು ಮಾಲೂರಿನಿಂದ ಎಡಕ್ಕೋದ್ರಾ? ಬಲಕ್ಕೋದ್ರಾ.? ಎಂಬುವುದು ತಿಳಿದುಬಂದಿಲ್ಲ. ಹೀಗಾಗಿ ಆರೋಪಿಗಳು ಏಳು ಕೋಟಿ ಹಣದ ಸಮೇತ ಕುಪ್ಪಂ ಕಡೆ ಹೋದ್ರಾ? ಅಥವಾ ಹೊಸೂರು ಕಡೆಗಾ ಅಂತ ಇನ್ನೂ ತಿಳಿದು ಬಂದಿಲ್ಲ.
ಈ ಹಿನ್ನೆಲೆ ಸಿಸಿಬಿಯ ಆರ್ಗನೈಸ್ಡ್​​ ಕ್ರೈಂ ವಿಂಗ್ ಟೀಮ್ ತಮಿಳುನಾಡಿಗೆ ಹಾಗೂ ದಕ್ಷಿಣ ವಿಭಾಗದ ಪೊಲೀಸ್ ಟೀಮ್ ಆಂಧ್ರಪ್ರದೇಶಕ್ಕೆ ತೆರಳಿ ತನಿಖೆ ನಡೆಸ್ತಿದ್ದಾರೆ. ಡಿಸಿಪಿ ಲೋಕೇಶ್ ಟೀಂನಿಂದ CMS ಏಜೆನ್ಸಿಯ ಸಿಬ್ಬಂದಿ ವಿಚಾರಣೆ ನಡೆಯುತ್ತಿದ್ದು, ಸಿಸಿಬಿ ಸ್ಪೆಷಲ್ ಎನ್​​​ಕ್ವೇರಿ ಟೀಂ ಟೆಕ್ನಿಕಲ್ CDR ಹಾಗೂ ಇತರೆ ಆಯಾಮದಲ್ಲಿ ತನಿಖೆ ನಡೆಸ್ತಿದ್ದಾರೆ.
ಇದನ್ನೂ ಓದಿ: 7 ಕೋಟಿ ದರೋಡೆ ಕೇಸ್​.. ಈಗ ಕಾಡ್ತಿರುವ ಅನುಮಾನಗಳು ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us