/newsfirstlive-kannada/media/media_files/2025/10/14/kl-rahul-4-2025-10-14-08-00-24.jpg)
ಕೊಲ್ಕತ್ತಾ ಟೆಸ್ಟ್ ಪಂದ್ಯದ ಸೋಲು, ಬಿಗ್​ಬಾಸ್​ಗಳಿಗೆ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಇನ್ನೊಂದೇ ಒಂದು ಸೋಲು, ಟೀಮ್ ಇಂಡಿಯಾದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಲಿದೆ. ಹೌದು. ಬಿಗ್​ಬಾಸ್​ಗಳು ಇನ್ಮುಂದೆ ಸುಮ್ನೆ ಇರೋದಿಲ್ಲ. ಈಗಾಗಲೇ ಬಿಗ್​ಬಾಸ್​​ಗಳಿಗೆ ವೈಟ್​ವಾಶ್​​ ಮುಖಂಗದ ಬಿಸಿ ತಟ್ಟಿದೆ. ಹಾಗಾಗಿ ಇನ್ನೊಂದು ವೈಟ್​ವಾಶ್​​ಗೆ ಯಾವುದೇ ಕಾರಣಕ್ಕೂ ರೆಡಿ ಇಲ್ಲ.
ಈಡನ್ ಗಾರ್ಡನ್ಸ್​ನಲ್ಲಿ ಕಳಪೆ ಬ್ಯಾಟಿಂಗ್​​​​​​​, ಕಳಪೆ ಸ್ಟ್ರಾಟಜಿ, ಕಳಪೆ ಟ್ಯಾಕ್ಟಿಕ್ಸ್​​ನಿಂದ, ಟೀಮ್ ಇಂಡಿಯಾ ಸೋಲು ಅನುಭವಿಸಿತ್ತು. ಆ ಸೋಲಿಗೆ ನೇರ ಕಾರಣ, ಕೋಚ್ ಗೌತಮ್ ಗಂಭೀರ್. ಱಂಕ್ ಟರ್ನರ್​​ಗೆ ಪಟ್ಟು ಹಿಡಿದಿದ್ದ ಗಂಭೀರ್, ಕೊನೆಗೆ ತಾವೇ ತೋಡಿದ ಹಳ್ಳಕ್ಕೆ ಬಿದ್ರು. ನ್ಯೂಜಿಲೆಂಡ್ ವಿರುದ್ಧ ವೈಟ್​ವಾಶ್ ಆಗಿದ್ದ ಟೀಮ್ ಇಂಡಿಯಾ, ಸೌತ್ ಆಫ್ರಿಕಾ ವಿರುದ್ಧ ಸೋತ್ರೆ ಕೋಚ್ ಗಂಭೀರ್ ತಲೆತಂಡ ಪಕ್ಕಾ ಎನ್ನಲಾಗ್ತಿದೆ.
ಇದನ್ನೂ ಓದಿ: IND vs SA ಟೆಸ್ಟ್​: ಗಿಲ್ ಔಟ್, ಬದಲಿ ಯಾರು..? ಕನ್ನಡಿಗನಿಗೆ ಸಿಗುತ್ತಾ ಚಾನ್ಸ್
ಟೀಮ್ ಇಂಡಿಯಾ ದಕ್ಷಿಣ ಆಪ್ರಿಕಾ ವಿರುದ್ಧ ವೈಟ್​ವಾಶ್ ಆಗಿದ್ದೇ ಆದ್ರೆ ಬಿಗ್​ಬಾಸ್​​ಗಳು ಟಫ್ ಡಿಸಿಷನ್​ಗೆ ಮುಂದಾಗುವ ಸಾಧ್ಯತೆ ಇದೆ. ಕೋಚ್ ಗೌತಮ್ ಗಂಭೀರ್ ವೈಟ್​ಬಾಲ್ ಕ್ರಿಕೆಟ್​ನಲ್ಲಿ ಎಕ್ಸಲೆಂಟ್ ರೆಕಾರ್ಡ್ ಹೊಂದಿದ್ದಾರೆ. ರೆಡ್​ಬಾಲ್ ಕ್ರಿಕೆಟ್​ನಲ್ಲಿ ಅಂದುಕೊಂಡಂತೆ ಸಕ್ಸಸ್ ಕಾಣಲಿಲ್ಲ. ಸೋ, ಹೊಸ ಕೋಚ್ ಹುಡುಕೋದೆ ಸೂಕ್ತ ಅನ್ನೋದು, ಬಿಗ್​ಬಾಸ್​ಗಳ ಲೆಕ್ಕಾಚಾರವಾಗಲಿದೆ.
ಕೊಲ್ಕತ್ತಾ ಟೆಸ್ಟ್ ಸೋಲಿನ ಬಳಿಕ ವರ್ಲ್ಡ್​​​ ಟೆಸ್ಟ್​ ಚಾಂಪಿಯನ್​ಶಿಪ್ ಪಾಯಿಂಟ್ ಟೇಬಲ್​ನಲ್ಲಿ ಭಾರೀ ಬದಲಾವಣೆ ಆಗಿದೆ. ಸದ್ಯ ಟೀಮ್ ಇಂಡಿಯಾ, ಪಾಯಿಂಟ್ ಟೇಬಲ್​ನಲ್ಲಿ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಮತ್ತು ಶ್ರೀಲಂಕಾ ನಂತರದ ಸ್ಥಾನದಲ್ಲಿದೆ. ಒಂದು ವೇಳೆ ಗುವಾಹಟಿ ಟೆಸ್ಟ್ ಪಂದ್ಯ ಸೋತ್ರೆ, ಮತ್ತೆ WTC ಪಾಯಿಂಟ್ ಟೇಬಲ್​ನಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಈ ಬೆಳವಣಿಗೆ ಟೀಮ್ ಇಂಡಿಯಾ ಪಾಲಿಗೆ ಒಳ್ಳೆ ಬೆಳವಣಿಗೆ ಅಲ್ಲವೇ ಅಲ್ಲ.
ಟೆಸ್ಟ್ ಱಂಕಿಂಗ್​ನಲ್ಲಿ ದಾಖಲೆಯ ಕುಸಿತ
ಐಸಿಸಿ ಟೆಸ್ಟ್ ಱಂಕಿಂಗ್​ನಲ್ಲೂ ಟೀಮ್ ಇಂಡಿಯಾಗೆ ದೊಡ್ಡ ಹೊಡೆತ ಬಿದ್ದಿದೆ. ಸದ್ಯ ಱಂಕಿಂಗ್​ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ ನಂತರ ಸ್ಥಾನದಲ್ಲಿದೆ. ಗುವಾಹಟಿ ಟೆಸ್ಟ್ ಪಂದ್ಯವನ್ನ ಟೀಮ್ ಇಂಡಿಯಾ ಗೆದ್ರೆ, ಮೂರನೇ ಸ್ಥಾನಕ್ಕೇರುವ ಅವಕಾಶ ಇರುತ್ತದೆ. ಒಂದು ವೇಳೆ 2ನೇ ಟೆಸ್ಟ್ ಪಂದ್ಯ ಸೋತ್ರೆ ಟೀಮ್ ಇಂಡಿಯಾ, 5ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡಕ್ಕಿಂತ ಹಿಂದೆ ಉಳಿಯಲಿದೆ. ಹಾಗಾಗಿ ಮುಂದಿನ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಅತ್ಯಾವಶಕ.​​​​​​
ಕಳೆದ ವರ್ಷ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್​ ಪಂದ್ಯಗಳನ್ನ ಸೋತ ಟೀಮ್ ಇಂಡಿಯಾ, ವೈಟ್​ವಾಶ್ ಆಯ್ತು. ಇದೀಗ ಸೌತ್ ಆಫ್ರಿಕಾ ವಿರುದ್ಧವೂ ಅದೇ ಭೀತಿ ಎದುರಿಸುತ್ತಿದೆ. ಒಂದು ವೇಳೆ ಇಲ್ಲೂ ಅದೇ ಫಲಿತಾಂಶ ಹೊರಬಿದ್ರೆ, ಬಿಗ್​ಬಾಸ್​ಗಳು ಭಾರೀ ಟೀಕೆಗಳನ್ನ ಎದುರಿಸಬೇಕಾಗುತ್ತದೆ. ಕ್ರಿಕೆಟ್ ಅಭಿಮಾನಿಗಳ ಒತ್ತಡಕ್ಕೆ ಮಣಿದು, ಪೋರ್ಸ್ಟ್​ ಮಾರ್ಟಂ ಮಾಡೋ ಸಾಧ್ಯತೆ ಹೆಚ್ಚಿದೆ. ​​
ಇಷ್ಟೆಲ್ಲಾ ಇದ್ರೂ ಗುವಾಹಟಿ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಪಾಸಿಟಿವ್ ಆಗಿ ಕಣಕ್ಕಿಳಿಯಲು ಮುಂದಾಗಿದೆ. ಗೆಲುವೊಂದೇ ಮಂತ್ರ ಎನ್ನುತ್ತಿರುವ ಪಂತ್ ಪಡೆ, ಹರಿಣಗಳನ್ನ ಬೇಟೆಯಾಡಲು ತುದಿಗಾಲಲ್ಲಿ ನಿಂತಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us