Advertisment

IND vs SA ಟೆಸ್ಟ್​: ಗಿಲ್ ಔಟ್, ಬದಲಿ ಯಾರು..? ಕನ್ನಡಿಗನಿಗೆ ಸಿಗುತ್ತಾ ಚಾನ್ಸ್

ಇಂಡೋ-ಆಫ್ರಿಕಾ 2ನೇ ಟೆಸ್ಟ್​ ಪಂದ್ಯದ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ. ಚೊಚ್ಚಲ ಟೆಸ್ಟ್​ ಪಂದ್ಯದ ಆಯೋಜನೆಗೆ ಗುವಾಹಟಿಯ ಬರ್ಸಾಪುರ ಸ್ಟೇಡಿಯಂ ಸಜ್ಜಾಗಿದೆ. ಟೀಮ್​ ಇಂಡಿಯಾ ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸೋ ಲೆಕ್ಕಾಚಾರದಲ್ಲಿದೆ.

author-image
Ganesh Kerekuli
Gill
Advertisment

ಅಸ್ಸಾಂನ ಗುವಾಹಟಿ ಬರ್ಸಾಪುರ ಸ್ಟೇಡಿಯಂನತ್ತ ಕ್ರಿಕೆಟ್​ ಲೋಕದ ಚಿತ್ತ ನೆಟ್ಟಿದೆ. ಹಾಲಿ ಟೆಸ್ಟ್​ ಚಾಂಪಿಯನ್​​ ಸೌತ್​ ಆಫ್ರಿಕಾ ಭಾರತದ ನೆಲದಲ್ಲಿ ಐತಿಹಾಸಿಕ ಟೆಸ್ಟ್​ ಸರಣಿ ಗೆಲುವನ್ನ ಎದುರು ನೋಡ್ತಿದೆ. ಇನ್ನೊಂದೆಡೆ ಟೀಮ್​ ಇಂಡಿಯಾ ವೈಟ್​ ವಾಷ್​ ಮುಖಭಂಗದಿಂದ ಬಚಾವ್​ ಆಗೋ ಸರ್ಕಸ್​ ನಡೆಸ್ತಿದೆ. ಡು ಆರ್​ ಡೈ ಕದನದಲ್ಲಿ ಉಭಯ ತಂಡಗಳ ಹೋರಾಟ ಹೇಗಿರುತ್ತೆ ಅನ್ನೋದು ಕ್ರಿಕೆಟ್​ ಲೋಕದ ಗಮನ ಸೆಳೆದಿದೆ. 

Advertisment

ಇಂಡೋ-ಆಫ್ರಿಕಾ 2ನೇ ಟೆಸ್ಟ್​ ಪಂದ್ಯದ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ. ಚೊಚ್ಚಲ ಟೆಸ್ಟ್​ ಪಂದ್ಯದ ಆಯೋಜನೆಗೆ ಗುವಾಹಟಿಯ ಬರ್ಸಾಪುರ ಸ್ಟೇಡಿಯಂ ಸಜ್ಜಾಗಿದೆ. ಭಾರತದ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡೋ ಕನವರಿಕೆಯಲ್ಲಿ ಎದುರಾಳಿ ಸೌತ್​ ಆಫ್ರಿಕಾ ಪಡೆಯದೆ. ಟೀಮ್​ ಇಂಡಿಯಾ ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸೋ ಲೆಕ್ಕಾಚಾರದಲ್ಲಿದೆ. 

ಇದನ್ನೂ ಓದಿ:ವೈಟ್​ವಾಷ್​ ಭೀತಿ.. ಕೆಟ್ಟ ಮೇಲೆ ಬುದ್ಧಿ ಕಲಿತ ಟೀಮ್​ ಇಂಡಿಯಾ..!​

KL ರಾಹುಲ್​​ ಅಲ್ಲ; ಟೀಮ್​ ಇಂಡಿಯಾಗೆ ಸ್ಟಾರ್​ ಕನ್ನಡಿಗ ಎಂಟ್ರಿ; ಬಿಸಿಸಿಐ ಕದ ತಟ್ಟಿದ ಕೊಹ್ಲಿ ಆಪ್ತ!

ವೈಟ್​ವಾಷ್​ ಮುಖಭಂಗದ ಭೀತಿ

ಇಂದಿನ ಪಂದ್ಯಕ್ಕೂ ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಆತ್ಮವಿಶ್ವಾಸಕ್ಕೂ ಹೆಚ್ಚು ಆತಂಕವೇ ಮನೆ ಮಾಡಿದೆ. ಈಡನ್​ ಗಾರ್ಡನ್ಸ್​ನಲ್ಲಿ ಹೀನಾಯ ಸೋಲು ಕಂಡಿರೋದು ತಂಡದ ಒತ್ತಡ ಹೆಚ್ಚಿಸಿದೆ. ವೈಟ್​ ವಾಷ್​ ಮುಖಭಂಗದ ಭೀತಿ ಇಡೀ ಡ್ರೆಸ್ಸಿಂಗ್​ರೂಮ್​ನ ಆವರಿಸಿದೆ. ಗುವಾಹಟಿ ಟೆಸ್ಟ್​ ಟೀಮ್​ ಇಂಡಿಯಾ ಪಾಲಿಗೆ ಡು ಆರ್​​ ಡೈ ಪಂದ್ಯವಾಗಿ ಮಾರ್ಪಟ್ಟಿದೆ. ಟೆಸ್ಟ್​ ಫಾರ್ಮೆಟ್​ನಲ್ಲಿ ಸತತ ವೈಫಲ್ಯ ಅನುಭವಿಸಿರೋ ಹೆಡ್​ ಕೋಚ್​ ಗೌತಮ್​ ಗಂಭೀರ್​ ಭವಿಷ್ಯವನ್ನೇ ನಿರ್ಧರಿಸಲಿದೆ. 

ರಿಷಭ್​ ಪಂತ್​ ಕ್ಯಾಪ್ಟನ್ 

ಮೊದಲ ಟೆಸ್ಟ್​ ಪಂದ್ಯದಲ್ಲಿ ಕುತ್ತಿಗೆ ಬಳಿ ಸ್ನಾಯು ಸೆಳೆತಕ್ಕೆ ಒಳಗಾದ ಶುಭ್​​ಮನ್​ ಗಿಲ್​ 2ನೇ ಟೆಸ್ಟ್​ನಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಟೆಸ್ಟ್​ ತಂಡದಿಂದ ಗಿಲ್​ನ ರಿಲೀಸ್​ ಮಾಡಲಾಗಿದ್ದು, ಗುವಾಹಟಿಯಿಂದ ಮುಂಬೈಗೆ ಗಿಲ್​ ಪ್ರಯಾಣ ಬೆಳೆಸಿದ್ದಾರೆ. ಮುಂಬೈನಲ್ಲಿ ತಜ್ಙ ವೈದ್ಯ​​ ದಿನ್ಶಾ ಪರ್ದಿವಾಲಾರನ್ನ ಗಿಲ್​ ಬೇಟಿಯಾಗಿ ಹೆಚ್ಚಿನ ಚಿಕಿತ್ಸೆ ಪಡೆಯಲಿದ್ದಾರೆ. ಶುಭ್​ಮನ್​ ಗಿಲ್​ ಅಲಭ್ಯತೆಯಲ್ಲಿ ವಿಕೆಟ್​ ಕೀಪರ್​ ಬ್ಯಾಟರ್​ ರಿಷಭ್​ ಪಂತ್​​ ತಂಡವನ್ನ ಮುನ್ನಡೆಸಲಿದ್ದಾರೆ. 

Advertisment

ಇದನ್ನೂ ಓದಿ: 2ನೇ ಟೆಸ್ಟ್​ಗೆ ಕ್ಯಾಪ್ಟನ್ ಆಗಿ ಪಂತ್​​.. ಗುವಾಹಟಿಯಲ್ಲಿ ನಾಯಕನಿಗೆ ಇದೆ 2 ಚಾಲೆಂಜ್​..!

Rishab panth

ಶುಭ್​ಮನ್​ ಗಿಲ್​ ಅಲಭ್ಯತೆಯಿಂದಾಗಿ ಟೀಮ್​ ಇಂಡಿಯಾ ಪ್ಲೇಯಿಂಗ್​ ಇಲೆವೆನ್​ನಲ್ಲಿ ಬದಲಾವಣೆ ಆಗೋದು ಕನ್​ಫರ್ಮ್​​. ಶುಭ್​ಮನ್​ ಗಿಲ್ ಸ್ಥಾನ ತುಂಬೋದ್ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ದೇವದತ್​​ ಪಡಿಕ್ಕಲ್​, ಸಾಯಿ ಸುದರ್ಶನ್​, ನಿತೀಶ್​ ರೆಡ್ಡಿ ಸ್ಥಾನಕ್ಕಾಗಿ ರೇಸ್​ನಲ್ಲಿದ್ದಾರೆ. ಕೊಲ್ಕತ್ತಾ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾದ ಪ್ಲೇಯಿಂಗ್​ ಇಲೆವೆನ್​ನಲ್ಲಿ 6 ಮಂದಿ ಲೆಫ್ಟ್​ ಹ್ಯಾಂಡ್​ ಬ್ಯಾಟರ್ಸ್​ ಇದ್ರು. ಗಿಲ್​ ಕೂಡ ಪ್ಲೇಯಿಂಗ್​ ಇಲೆವೆನ್​ನಿಂದ ಹೊರ ಬಿದ್ದಿದ್ದಾರೆ. ಹೀಗಾಗಿ  ಇಂದಿನ ಪಂದ್ಯಕ್ಕೆ ಟೀಮ್​ ಕಾಂಬಿನೇಷನ್​​​ನಲ್ಲಿ ಬದಲಾವಣೆಯಾಗಲಿದೆ. 

ಲೆಫ್ಟ್​ ಆರ್ಮ್​ ಸ್ಪಿನ್​​ ಆಲ್​​ರೌಂಡರ್​ ಅಕ್ಷರ್​ ಪಟೇಲ್​ಗೆ ಇಂದಿನ ಪಂದ್ಯದಿಂದ ಕೊಕ್​ ಕೊಡೋ ಸಾಧ್ಯತೆ ದಟ್ಟವಾಗಿದೆ. ಅಕ್ಷರ್​ ಪಟೇಲ್​ ಹಾಗೂ ಶುಭ್​ಮನ್​ ಗಿಲ್ ಪ್ಲೇಯಿಂಗ್​ ಇಲೆವೆನ್​ನಿಂದ ಹೊರ ಬೀಳಲಿದ್ದು, ಸಾಯಿ ಸುದರ್ಶನ್​ ಹಾಗೂ ನಿತೀಶ್​ ರೆಡ್ಡಿಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಕಲ್ಪಿಸಲು ಮ್ಯಾನೇಜ್​ಮೆಂಟ್​ ಚಿಂತಿಸಿದೆ. ಸಾಯಿ ಸುದರ್ಶನ್​ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿದ್ರೆ, 4ನೇ ಕ್ರಮಾಂಕದಲ್ಲಿ ಬಹುತೇಕ ದೃವ್​ ಜುರೇಲ್​ನ ಆಡಿಸಲು ಪ್ಲ್ಯಾನ್ ರೂಪಿಸಲಾಗಿದೆ. 

Advertisment

ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್​ನಲ್ಲಿ ನಾಯಕತ್ವಕ್ಕಾಗಿ ಕಿತ್ತಾಟ..! ರವೀಂದ್ರ ಜಡೇಜಾಗೆ ಪಟ್ಟ..?

ಈಡನ್​ ಗಾರ್ಡನ್ಸ್​ನಲ್ಲಿ ಸ್ಪಿನ್​ ಫ್ರೆಂಡ್ಲಿ ಟ್ರ್ಯಾಕ್​ನಲ್ಲಿ ಕಣಕ್ಕಿಳಿದು ಮಕಾಡೆ ಮಲಗಿದ ಟೀಮ್​ ಇಂಡಿಯಾ ಇಂದಿನ ಪಂದ್ಯಕ್ಕೆ ಪಿಚ್​ನಲ್ಲಿ ಬದಲಾವಣೆ ಮಾಡಿಸಿಕೊಂಡಿದೆ. ಗುವಾಹಟಿಯ ಪಿಚ್​ ಸ್ಪಿನ್​ ಹಾಗೂ ಪೇಸರ್ಸ್​ ಇಬ್ಬರಿಗೂ ನೆರವಾಗಲಿದೆ. ಹೀಗಾಗಿ, ಟೀಮ್​ ಇಂಡಿಯಾ ಬೌಲಿಂಗ್​ನಲ್ಲಿ ಕಾಂಬಿನೇಷನ್​ನಲ್ಲಿ ಬದಲಾವಣೆ ಮಾಡೋ ಸಾದ್ಯತೆ ತೀರಾ ಕಡಿಮೆಯಿದೆ. ಇಬ್ಬರು ಪೇಸರ್ಸ್​, ನಾಲ್ವರು ಸ್ಪಿನ್ನರ್ಸ್​ ಕಾಂಬಿನೇಷನ್​​ನಲ್ಲಿ ಟೀಮ್​ ಇಂಡಿಯಾ ಮೈದಾನಕ್ಕಿಳಿಯಲಿದೆ. 

ಹಾಲಿ ಟೆಸ್ಟ್​ ಚಾಂಪಿಯನ್ಸ್​ ಸೌತ್​ ಆಫ್ರಿಕಾ ತಂಡ ಸುಲಭಕ್ಕೆ ಶರಣಾಗೋ ಛಾತಿಯದ್ದಲ್ಲ. ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯಾ ರಣ ತಂತ್ರ ಭೇದಿಸಿ ಗೆದ್ದಿರೋ ಸೌತ್​ ಆಫ್ರಿಕಾ ಭಾರತದ ನೆಲದಲ್ಲಿ ಸರಣಿ ಗೆಲುವಿನ ಕನವರಿಕೆಯಲ್ಲಿದೆ. ಗುವಾಹಟಿ ಅಂಗಳದಲ್ಲಿ ಟೀಮ್​ ಇಂಡಿಯಾಗೆ ಟಫ್​ ಫೈಟ್​​ ಕೊಡೋಕೆ ಹರಿಣಗಳ ಪಡೆ ರೆಡಿಯಾಗಿದೆ. ಹೀಗಾಗಿ ಇಂದಿನ ಪಂದ್ಯದ ಕ್ರಿಕೆಟ್​ ಲೋಕದ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿದೆ. 

Advertisment

ಇದನ್ನೂ ಓದಿ:‘ತಾಯಿ ಕಾಪಾಡಮ್ಮಾ..’ ಪವರ್​​ಫುಲ್​ ಸ್ಥಳಕ್ಕೆ​ ಗಂಭೀರ್​ ಭೇಟಿ.​.!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Ind vs SA India vs South Africa Test Match
Advertisment
Advertisment
Advertisment