/newsfirstlive-kannada/media/post_attachments/wp-content/uploads/2024/10/Rishabh_Pant-1.jpg)
ಕೊಲ್ಕತ್ತಾ ಟೆಸ್ಟ್​ ಪಂದ್ಯದಲ್ಲಿ ತೀವ್ರ ಮುಖಭಂಗ. ಕ್ರಿಕೆಟ್ ಕಾಶಿಯಲ್ಲಿ ಹೋದ ಮಾನ, ಗುವಾಹಟಿಯಲ್ಲಿ ಹುಡುಕಾಟ.. ಹಾಲಿ ನಾಯಕ ಗಿಲ್ ಅಲಭ್ಯತೆ.. ಹಂಗಾಮಿ ನಾಯಕ ರಿಷಭ್ ಪಂತ್​ ಮೇಲೆ ಒತ್ತಡ. ಇದೇ ಕಾರಣಕ್ಕೆ 2ನೇ ಟೆಸ್ಟ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ವೈಟ್​ವಾಶ್ ಮುಖಭಂಗ ಅನುಭವಿಸಿರುವ ಟೀಮ್ ಇಂಡಿಯಾ ಮತ್ತೊಮ್ಮೆ ಅಂತಹದ್ದೇ ಕೆಟ್ಟ ಸ್ಥಿತಿಗೆ ಸಿಲುಕಿಕೊಂಡಿದೆ.
ಪಂತ್​ಗೆ ಸವಾಲ್
ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ, 30 ರನ್​ಗಳ ಹೀನಾಯ ಸೋಲು ಅನುಭವಿಸಿತ್ತು. ಆ ಪಂದ್ಯದ ಸೋಲಿಗೆ, ರಿಷಭ್ ಪಂತ್ ನಾಯಕತ್ವ ಕೂಡ ಕಾರಣ. ಗಿಲ್ ಅಲಭ್ಯತೆಯಲ್ಲಿ ತಂಡವನ್ನ ಮುನ್ನಡೆಸಿದ್ದ ಪಂತ್, ಮ್ಯಾಚ್ ಟ್ಯಾಕ್ಟಿಕ್ಸ್ ಮಾಡೋದ್ರಲ್ಲಿ ವಿಫಲರಾದ್ರು. ಗುವಾಹಟಿಯಲ್ಲಿ ಪಂತ್​​​​​​​​​​​, ಈಡನ್ ಗಾರ್ಡನ್ಸ್​ನಲ್ಲಿ ಮಾಡಿದ ತಪ್ಪನ್ನ ಮಾಡೋ ಆಗಿಲ್ಲ. ಸದ್ಯ ಪಂತ್ ಮುಂದಿರೋದು ಒಂದೇ ಒಂದು ಆಪ್ಶನ್. ಅದು ಗೆಲುವು ಮಾತ್ರ. ಒಂದು ಗೆಲುವು ಪಂತ್ ಮತ್ತು ಟೀಮ್ ಇಂಡಿಯಾ ಮರ್ಯಾದೆಯನ್ನ ಉಳಿಸುತ್ತದೆ. ಅಪ್ಪಿತಪ್ಪಿ ಟೀಮ್ ಇಂಡಿಯಾ 2ನೇ ಟೆಸ್ಟ್ ಪಂದ್ಯವನ್ನೂ ಸೋತ್ರೆ ತಲೆದಂಡಕ್ಕೆ ಆಹ್ವಾನ ಮಾಡಿದಂತೆ.
ಇದನ್ನೂ ಓದಿ: ವೈಟ್​ವಾಷ್​ ಭೀತಿ.. ಕೆಟ್ಟ ಮೇಲೆ ಬುದ್ಧಿ ಕಲಿತ ಟೀಮ್​ ಇಂಡಿಯಾ..!​ ​​​​ ​
/filters:format(webp)/newsfirstlive-kannada/media/media_files/2025/11/16/team-india-3-2025-11-16-14-52-35.jpg)
ಗುವಾಹಟಿ ಟೆಸ್ಟ್​ನಲ್ಲಿ ಪಂತ್​ಗೆ ಡಬಲ್ ಚಾಲೆಂಜ್
ಹಂಗಾಮಿ ನಾಯಕ ಪಂತ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಒತ್ತಡ ಕೂಡ ಇದೆ. ಒಂದೆಡೆ ನಾಯಕನಾಗಿ ಪಂತ್ ಮೇಲೆ ಜವಾಬ್ದಾರಿ, ಮತ್ತೊಂದೆಡೆ ಬ್ಯಾಟ್ಸ್​ಮನ್​ ಆಗಿ ಒತ್ತಡ. ನಾಯಕ ಹಾಗೂ ಬ್ಯಾಟ್ಸ್​ಮನ್ ಆಗಿ ಪಂತ್ ಎರಡನ್ನೂ ಬ್ಯಾಲೆನ್ಸ್ ಮಾಡಬೇಕಿದೆ. ಎರಡೂ ರೋಲ್​​ಗಳಲ್ಲೂ ಮಿಂಚಬೇಕಿದೆ. ನಾಯಕನಾಗಿ ಮಿಂಚಿ ಬ್ಯಾಟ್ಸ್​ಮನ್ ಆಗಿ ಫೇಲ್ ಆದ್ರೂ ಪಂತ್ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಪಂತ್, ಡಬಲ್ ರೋಲ್ ಕ್ಯಾರೆಕ್ಟರ್​​ನ ಅತ್ಯುತಮವಾಗಿ ನಿಭಾಯಿಸಬೇಕು.
ಅಗ್ರೆಸಿವ್ ಮತ್ತು ಸ್ಮಾರ್ಟ್ ಕ್ರಿಕೆಟ್​ನತ್ತ ಗಮನ
ಪಂತ್ ನ್ಯಾಚ್ಯುರಲಿ ಅಗ್ರೆಸಿವ್ ಪ್ಲೇಯರ್. ಕೋಚ್ ಗೌತಮ್ ಗಂಭೀರ್​ಗೂ ಪಂತ್ ಅಗ್ರೆಸಿವ್​ನೆಸ್ ತುಂಬಾ ಇಷ್ಟ. ಎಲ್ಲಾ ಟೈಮ್​​ನಲ್ಲೂ ಅಗ್ರೆಸಿವ್ ಆಗಿರೋದು. ಅಗ್ರೆಸಿವ್ ಆಗಿ ಆಡೋದು ಸರಿಯಲ್ಲ. ಕೆಲವೊಮ್ಮೆ ಪರಿಸ್ಥಿತಿಗೆ ತಕ್ಕಂತೆ ಜವಾಬ್ದಾರಿಯುತವಾಗಿ ಆಟವಾಡಬೇಕು. ಸ್ಮಾರ್ಟ್ ಗೇಮ್​ ಕಡೆ ಕೂಡ ಗಮನ ಹರಿಸಬೇಕು. ಪಂತ್ ಅಗ್ರೆಸಿವ್ ಮತ್ತು ಸ್ಮಾರ್ಟ್ ಗೇಮ್​​​ನ ಸೂಕ್ತ ಸಮಯದಲ್ಲಿ ಆಯ್ಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ: 7 ಕೋಟಿ ದರೋಡೆ ಕೇಸ್.. ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ.. ಏನಾಯ್ತು..?
/filters:format(webp)/newsfirstlive-kannada/media/media_files/2025/11/17/rishab-panth-2025-11-17-10-08-12.jpg)
ಹಂಗಾಮಿ ನಾಯಕ ​ಪಂತ್ ಮುಂದೆ ಇರೋ ಬಿಗ್ ಟಾಸ್ಕ್ ಪ್ಲೇಯಿಂಗ್ ಇಲೆವೆನ್ ಆಯ್ಕೆ. ಗಿಲ್ ಸ್ಥಾನಕ್ಕೆ ಯಾರು? ಪೇಸರ್ಸ್​ ಆಯ್ಕೆ, ಸ್ಪಿನ್ನರ್ಸ್ ಆಯ್ಕೆ, ಇವೆಲ್ಲವನ್ನೂ ಪಂತ್ ಪರ್ಫೆಕ್ಟ್ ಆಗಿ ಸೆಲೆಕ್ಟ್ ಮಾಡಬೇಕಿದೆ. ತಂಡದ ಆಯ್ಕೆಯಲ್ಲಿ ಸ್ವಲ್ಪ ಲೆಕ್ಕಾಚಾರ ತಪ್ಪಿದ್ರೂ ತಂಡದ ಸೋಲಿಗೆ ಕಾರಣವಾಗಬಹುದು. ಪಂತ್, ಸ್ಟ್ರಾಟಜಿ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ​
ಪಿಚ್ ಮತ್ತು ಕಂಡೀಷನ್ಸ್ ಅರಿಯೋದು ಸವಾಲ್​
ಕೊಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ, ಪಿಚ್​​​​ ಸೆಲೆಕ್ಷನ್ ಕಾರಣ. ಬೇಕಂತಲೇ ಕೋಚ್ ಗೌತಮ್ ಗಂಭೀರ್, ಱಂಕ್ ಟರ್ನಿಂಗ್ ಪಿಚ್​​​​​ಗೆ ಡಿಮ್ಯಾಂಡ್ ಮಾಡಿ ಕೈ ಸುಟ್ಟುಕೊಂಡರು. ಗುವಾಹಟಿ ಟೆಸ್ಟ್​ ಪಂದ್ಯಕ್ಕೆ ಕೋಚ್ ಗಂಭೀರ್, ಪೇಸ್ ಌಂಡ್ ಬೌನ್ಸ್ ಪಿಚ್ ಕೊಡುವಂತೆ ಮನವಿ ಮಾಡಿದ್ದಾರೆ. ಉತ್ತಮ ಪಿಚ್ ಆಯ್ಕೆ, ತಂಡದ ಫಲಿತಾಂಶವನ್ನ ಬದಲಿಸುತ್ತದೆ ಅನ್ನೋದನ್ನ, ಇದೀಗ ಗಂಭೀರ್ ಮನವರಿಕೆ ಮಾಡಿದ್ದಾರೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಮ್ಮ ನೆಲದಲ್ಲಿ ನಮ್ಮ ವಿರುದ್ಧವೇ ಎದುರಾಳಿಗಳು ಮೇಲುಗೈ ಸಾಧಿಸಿದ್ರೆ ಖಂಡಿತ ಸಹಿಸಿಕೊಳ್ಳೋಕೆ ಆಗೋದಿಲ್ಲ. ವೈಟ್​ವಾಶ್ ಭೀತಿ ಎದುರಿಸುತ್ತಿರುವ ಟೀಮ್ ಇಂಡಿಯಾ ಪಂತ್ ಪವರ್​ನಿಂದ ಮುಖಭಂಗದಿಂದ ಪಾರಾಗಬೇಕಷ್ಟೇ.
ಇದನ್ನೂ ಓದಿ: ರಣಜಿಯಲ್ಲಿ ಕರ್ನಾಟಕದ ತ್ರಿವಳಿ ಪ್ರತಿಭೆಗಳ ದರ್ಬಾರ್.. ಕಣ್ತೆರೆದು ಬಿಸಿಸಿಐ ನೋಡಬೇಕಿದೆ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us