/newsfirstlive-kannada/media/media_files/2025/11/20/robbary-1-2025-11-20-07-39-11.jpg)
ನವೆಂಬರ್​ 19 ಮಟಮಟ ಮಧ್ಯಾಹ್ನ. ಡೈರಿ ಸರ್ಕಲ್ ಫ್ಲೈಓವರ್​​ ಮೇಲೆ ನಡೆದ ಸಿನಿಮೀಯ ಶೈಲಿಯ ದರೋಡೆಗೆ ಬೆಂಗಳೂರೇ ಬೆಚ್ಚಿಬಿದ್ದಿದೆ. ರಸ್ತೆ ಮಧ್ಯೆಯೇ 7 ಕೋಟಿ 11 ಲಕ್ಷ ಹಣ ದರೋಡೆ ಮಾಡಿದ್ದು ರಾಜ್ಯದವರಲ್ಲ ಅಂತಾನೇ ಪೊಲೀಸರು ಶಂಕಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ತಕ್ಷಣವೇ ದರೋಡೆಕೋರರ ಬೇಟೆಗಿಳಿದ ಬೆಂಗಳೂರು ಪೊಲೀಸರು ಆಂಧ್ರಪ್ರದೇಶದ ಚಿತ್ತೂರುವರೆಗೂ ಕಾರ್ಯಾಚರಣೆ ನಡೆಸಿದ್ದಾರೆ.
ಕಾರು ಕೊಟ್ಟವ್ರು ಪೊಲೀಸರ ವಶಕ್ಕೆ
7 ಕೋಟಿ 11 ಲಕ್ಷದ ದರೋಡೆ ಪ್ರಕರಣದಲ್ಲಿ ಕಾರ್ ಕೊಟ್ಟಿದ್ದವ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದರೋಡೆಗೆ ಬಳಸಿದ್ದ ಇನ್ನೋವಾ ಕಾರನ್ನು ಕೊಟ್ಟವರನ್ನು ಲಾಕ್ ಮಾಡಿದ್ದಾರೆ. ಇನ್ನೋವಾ ಕಾರು ನೀಡಿದ್ದ ಇಬ್ಬರೂ ಗೋವಿಂದಪುರದವರು ಅನ್ನೋದು ಪತ್ತೆಯಾಗಿದೆ. ಚಿತ್ತೂರು ಗುಡಿಪಲ್ಲಿ ಬಳಿ ಇನ್ನೋವಾ ಕಾರು ಪತ್ತೆಯಾಗಿತ್ತು. ಕಾರಿನ ಎಂಜಿನ್‌ನ ಚಾಸಿಸ್ ನಂಬರ್ ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದು ಚಾಸಿಸ್ ನಂಬರ್ ಆಧಾರದ ಮೇಲೆ ಮೂಲ ಮಾಲೀಕನ ಪತ್ತೆ ಮಾಡಿ ವಿಚಾರಿಸಿದಾಗ ಮಾರಾಟ ಮಾಡಿದ್ದು ಬೆಳಕಿಗೆ ಬಂದಿದೆ. ಅಲ್ಲದೇ ದರೋಡೆಕೋರರು ಚಿತ್ತೂರು ಮೂಲದವ್ರು ಅನ್ನೋದು ಬಹಿರಂಗವಾಗಿದೆ.
/filters:format(webp)/newsfirstlive-kannada/media/media_files/2025/11/20/bengaluru-robbery-2025-11-20-11-21-58.jpg)
ಚಿತ್ತೂರು ಮೂಲದ ದರೋಡೆಕೋರರು!
- ದರೋಡೆಕೋರರು ಚಿತ್ತೂರು ಮೂಲದವರು ಅನ್ನೋದು ಪತ್ತೆ
- ಚಿತ್ತೂರು ಬಳಿ ವಾಹನ ಬಿಟ್ಟು ದರೋಡೆಕೋರರು ಪರಾರಿ
- ಚಿತ್ತೂರು ಗುಡಿಪಲ್ಲಿ ಬಳಿ ಪತ್ತೆಯಾಗಿತ್ತು ಇನ್ನೋವಾ ಕಾರ್
- ಕಾರಿನ ಎಂಜಿನ್‌ನ ಚಾಸಿಸ್ ನಂಬರ್ ಆಧರಿಸಿ ಇಬ್ಬರು ವಶಕ್ಕೆ
- ಚಾಸಿಸ್ ನಂಬರ್ ಆಧಾರದ ಮೇಲೆ ಮೂಲ ಮಾಲೀಕನ ಪತ್ತೆ
- ಮೂಲ ಮಾಲೀಕನ ವಿಚಾರಿಸಿದಾಗ ಮಾರಾಟ ಮಾಡಿದ್ದು ಬೆಳಕಿಗೆ
- ಕಾರನ್ನ ಖರೀದಿಸಿದ್ದ ಇಬ್ಬರು ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ
- ದರೋಡೆಗೆ ಉದ್ದೇಶಪೂರ್ವಕವಾಗಿ ಕಾರು ಕೊಟ್ರಾ ಎಂದು ವಿಚಾರಣೆ
- ದರೋಡೆ ಕೃತ್ಯದ ಬಗ್ಗೆ ಮೊದಲೇ ಮಾಹಿತಿ ಇತ್ತಾ ಅನ್ನೊ ಬಗ್ಗೆ ತನಿಖೆ
ದರೋಡೆಕೋರರು ಆಂಧ್ರದತ್ತ ಪರಾರಿಯಾಗಿರೋ ಸುಳಿವು ಪಡೆದ ಪೊಲೀಸರು, ಚಿತ್ತೂರು ಪೊಲೀಸರ ಸಹಾಯದಿಂದ ದರೋಡೆಕೋರರ ಇನ್ನೋವಾ ಕಾರು ಹಾಗೂ ಇಬ್ಬರನ್ನು ಲಾಕ್ ಮಾಡಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಚಿತ್ತೂರಿನಲ್ಲೇ ತೀವ್ರ ವಿಚಾರಣೆ ನಡೆಸ್ತಿದ್ದಾರೆ. ಒಟ್ಟಾರೆ ದರೋಡೆ ನಡೆದ 24 ಗಂಟೆಗಳಲ್ಲೇ ಪೊಲೀಸರು ಖದೀಮರನ್ನು ಲಾಕ್ ಮಾಡಿದ್ದಾರೆ. ಪೊಲೀಸರ ವೇಗ ನೋಡಿದ್ರೆ ಶೀಘ್ರದಲ್ಲೇ ಎಲ್ಲರನ್ನು ಹೆಡೆಮುರಿಕಟ್ಟಿ ಮುದ್ದೆ ತಿನ್ನಿಸೋ ಭವಿಷ್ಯ ದಟ್ಟವಾಗಿದೆ.
ಇದನ್ನೂ ಓದಿ:‘ಕಂಗ್ರ್ಯಾಜುಲೇಷನ್ಸ್ ಬ್ರದರ್’ ಗ್ರ್ಯಾಂಡ್ ರಿಲೀಸ್.. ಸಿನಿ ವೀಕ್ಷಕರಿಂದ ಸೂಪರ್ ರೆಸ್ಪಾನ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us