/newsfirstlive-kannada/media/media_files/2025/11/21/congratulations-brother-2-2025-11-21-08-00-09.jpg)
ಆಹಾ.. ಇಂಥಾ ಆಫರ್ ಕೊಟ್ರೇ ಯಾರ್ ತಾನೇ ಬೇಡ ಅಂತಾರೆ ಅಲ್ವಾ.. ಆದ್ರೆ ಈ 'ಬ್ರದರ್' ವರಸೆನೇ ಬೇರೆ.. ನೋಡೋಕೆ ಪಕ್ಕಾ 'ಜೆನ್ ಜಿ ಕಿಡ್ಸ್'ಗೆ ಮಾಡಿರೋ ಸಿನಿಮಾ ಥರಾ ಇದ್ರೂ.. ಮಕ್ಕಳಿಂದ ವಯಸ್ಸಾದವ್ರ ತನಕ ಕೂತು, ಎಂಜಾಯ್ ಮಾಡಬಹುದಾದ ಸಿನಿಮಾ ಇದು.. ಸಿನಿಮಾದ ಟೈಟಲ್ ಬಿಡುಗಡೆ ಆದಾಗಿನಿಂದಲೂ 'ಕಂಗ್ರ್ಯಾಜುಲೇಷನ್ಸ್ ಬ್ರದರ್'ಗೆ ಒಂದೊಳ್ಳೆ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬರ್ತಿತ್ತು.. ಆ ಪಾಸಿಟಿವ್ ರೆಸ್ಪಾನ್ಸ್ ಈಗ ಥಿಯೇಟರ್ ತನಕವೂ ಬಂದಿದ್ದು, ಇಂದಿನಿಂದ ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್​ಗೆ ಸಿದ್ಧವಾಗಿದೆ.
ಇದನ್ನೂ ಓದಿ: ಪ್ರೀತಿಯ ಪತ್ನಿ ನಯನತಾರಗೆ 10 ಕೋಟಿ ಮೌಲ್ಯದ ಕಾರು ಗಿಫ್ಟ್ ಕೊಟ್ಟ ವಿಗ್ನೇಶ್..!
/filters:format(webp)/newsfirstlive-kannada/media/media_files/2025/11/21/congratulations-brother-3-2025-11-21-08-04-02.jpg)
‘ಕಂಗ್ರ್ಯಾಜುಲೇಷನ್ಸ್ ಬ್ರದರ್’ ರಿಲೀಸ್
ಒಬ್ಬ ಹುಡುಗ ಇಬ್ಬರು ಹುಡುಗೀರನ್ನ ಮದುವೆ ಆಗಿರೋ, ಪ್ರೀತಿಸಿರೋ ಸಾಕಷ್ಟು ಘಟನೆಗಳನ್ನು ನಾವ್ ನೋಡಿದ್ದೀವಿ.. ಆದ್ರೆ ಇಬ್ಬರು ಹುಡುಗೀರು ಒಬ್ಬನೇ ಹುಡುಗನನ್ನು ಮದುವೆ ಆಗ್ತೀನಿ ಅನ್ನೋದು ಹೊಸ ತರಹದ ಯೋಚನೆ.. ಇಂಥಾ ಸಂದರ್ಭ ಸೃಷ್ಟಿಯಾದಾಗ ಆ ಹುಡುಗ ಏನ್ ಮಾಡ್ತಾನೆ, ಆತನ ನಿರ್ಧಾರ ಏನಾಗಿರುತ್ತೆ.. ಆತ ಯಾರನ್ನ ಮದುವೆ ಆಗ್ತಾನೆ ಅನ್ನೋ ಸೀಟ್ ಎಜ್ಡ್ ಕ್ಯೂರಿಯಾಸಿಟಿ ಹುಟ್ಟಿಸೋ ಸಿನಿಮಾನೇ ಕಂಗ್ರ್ಯಾಜುಲೇಷನ್ಸ್ ಬ್ರದರ್..
ಸೂಪರ್ ರೆಸ್ಪಾನ್ಸ್
ಕಂಪ್ಲೀಟ್ ಹೊಸಬರ ತಂಡವಾಗಿರೋ ಕಂಗ್ರ್ಯಾಜುಲೇಷನ್ಸ್ ಬ್ರದರ್ ರಿಲೀಸ್​ಗೂ ಮುನ್ನ ರಾಜ್ಯಾದ್ಯಂತ ಪ್ರವಾಸ ಕೈ ಗೊಂಡಿತ್ತು.. ಹೋದ ಕಡೆಯಲೆಲ್ಲಾ ಅದ್ದೂರಿ ಪ್ರಚಾರ ಮಾಡಿದ್ರು... ಇದರಾಚೆಗೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ರಿಲೀಸ್​ಗೂ ಮುನ್ನ, ಸಿನಿಮಾ ಸ್ಪೆಷಲ್ ಪ್ರೀಮಿಯರ್ ಆಯೋಜಿಸಲಾಗಿತ್ತು.. ಪ್ರೀಮಿಯರ್ ಶೋನಲ್ಲಿ ಜನ ನಿರೀಕ್ಷೆಗೂ ಮೀರಿದ ರಿಪೋರ್ಟ್ ಕೊಟ್ಟಿದ್ರು.
ಇದನ್ನೂ ಓದಿ: ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು
/filters:format(webp)/newsfirstlive-kannada/media/media_files/2025/11/21/congratulations-brother-1-2025-11-21-08-04-58.jpg)
ಈ ಸಿನಿಮಾಗೆ ಸ್ಕ್ರೀನ್ ಫಸ್ಟ್ ಪ್ರೊಡಕ್ಷನ್ಸ್, ಪೆನ್ & ಪೇಪರ್ ಸ್ಟುಡಿಯೋ, ಕಲ್ಲೂರ್ ಸಿನಿಮಾಸ್ ಬಂಡವಾಳ ಹೂಡಿದ್ದು, ಹೊಸ ಕಲಾವಿದರನ್ನು, ತಂತ್ರಜ್ಞರನ್ನು ಸ್ಯಾಂಡಲ್ವುಡ್​ಗೆ ಕೊಡುಗೆಯಾಗಿ ನೀಡುತ್ತಿವೆ.. ರಕ್ಷಿತ್ ನಾಗ್, ಅನುಷಾ, ಸಂಜನಾ ದಾಸ್ ಲೀಡ್ ರೋಲ್​ನಲ್ಲಿ ನಟಿಸಿದ್ದು, ಈಗಾಗಲೇ ಬಿಡುಗಡೆ ಆಗಿರೋ ಕಂಟೆಂಟ್ ಮೂಲಕ ಜನರನ್ನ ರೀಚ್ ಆಗಿದ್ದಾರೆ. ಪ್ರತಾಪ್ ಗಂಧರ್ವ ನಿರ್ದೇಶನ, ಧ್ರುವ್ ಮ್ಯೂಸಿಕ್ ಸಿನಿಮಾದ ಪ್ರಮುಖ ಹೈಲೈಟ್ ಆಗಿರಲಿದೆ.
ಇದನ್ನೂ ಓದಿ: ಜೀವನದಲ್ಲಿ ಮೂರನೇ ಭಾರಿಗೆ ವಿವಾಹ ವಿಚ್ಛೇದನ ಪಡೆದ ನಟಿ ಮೀರಾ ವಾಸುದೇವನ್ : ಇದು ಜೀವನದ ಅದ್ಭುತ, ಶಾಂತಿಯುತ ಹಂತ ಎಂದ ನಟಿ
/filters:format(webp)/newsfirstlive-kannada/media/media_files/2025/11/21/congratulations-brother-2025-11-21-08-05-34.jpg)
ನಿನ್ನೆ ರಾತ್ರಿ ಬೆಂಗಳೂರಿನ ಒರಿಯನ್​​ ಮಾಲ್​​​​ನಲ್ಲಿ ‘ಕಂಗ್ರ್ಯಾಜುಲೇಷನ್ಸ್ ಬ್ರದರ್’ ಸಿನಿಮಾ ಪ್ರೀಮಿಯರ್ ಶೋಗಳು ಹೌಸ್​ಫುಲ್ ಆಗಿದ್ದು, ಜನರಿಂದ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ.. ಸಿನಿಮಾ ನೋಡಿ ಬಂದು ಜನ ಫುಲ್​ ಖುಷ್​ ಆಗಿದ್ದು, ತಂದೆ-ಮಗನ ಸೆಂಟಿಮೆಂಟ್​​ಗೆ ಜನ ಫಿದಾ ಆಗಿದ್ದಾರೆ.. ಸಿನಿಮಾ ನೋಡಿ ಬಂದ ಪ್ರೇಕ್ಷಕರು ಪೈಸಾ ವಸೂಲ್​ ಎಂದಿದ್ದಾರೆ..
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಒಟ್ಟಾರೆ.. ಈ ವರ್ಷದಲ್ಲಿ ಬ್ಯಾಕ್ ಟು ಬ್ಯಾಕ್ ಒಂದಷ್ಟು ಸಿನಿಮಾಗಳು ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಿದ್ದು, ಆ ಗೆಲುವಿನ ಸಾಥ್ ಕಂಗ್ರ್ಯಾಜುಲೇಷನ್ಸ್ ಬ್ರದರ್​ಗೂ ಸಿಗಲಿದೆ ಅನ್ನೋದು ಸಿನಿರಸಿಕರ ಅಭಿಪ್ರಾಯ.
ವಿಶೇಷ ವರದಿ: ಲೋಕೇಶ್, ಫಿಲ್ಮ್ ಬ್ಯೂರೋ, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us