/newsfirstlive-kannada/media/media_files/2025/11/19/kamidi-kiladi-nayana-1-2025-11-19-16-03-33.jpg)
ಕಲಬುರಗಿ: ‘ಕಾಮಿಡಿ ಕಿಲಾಡಿ’ ಖ್ಯಾತಿಯ ಕಿರುತೆರೆ ನಟಿ ನಯನಾ ವಿರುದ್ಧ FIR ದಾಖಲಾಗಿದೆ. ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಕಾಯ್ದೆ ಅಡಿ (ಅಟ್ರಾಸಿಟಿ) ದೂರು ದಾಖಲಾಗಿದೆ.
ಅಕ್ಟೋಬರ್ 29 ರಂದು ಮನಿಮಿತ್ರಾ ಕಂಪನಿಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪವನ್ನು ನಯನಾ ಎದುರಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಪದಗಳನ್ನು ಬಳಸಿದ ಆರೋಪವಿದೆ. ದಲಿತ ಸೇನೆ ಕಲಬುರಗಿ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ನೀಡಿದ ದೂರಿನಡಿ FIR ದಾಖಲಾಗಿದೆ.
ಇದನ್ನೂ ಓದಿ: ಸುತ್ತಿಗೆಯಿಂದ ಹೊಡೆದು ಮನೆಯೊಳಗೇ ಹೂತು ಹಾಕಿದ ಹಂತಕ.. ಸಿನಿಮಾ ಸ್ಟೈಲ್​​ನಲ್ಲಿ ಮರ್ಡರ್
ಹಾಸ್ಯನಟಿ ನಯನ ಕಾರ್ಯಕ್ರಮದಲ್ಲಿ ಶೋಷಿತ ಸಮುದಾಯಕ್ಕೆ ಉದ್ದೇಶ ಪೂರ್ವಕವಾಗಿ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಕಠಿಣಕ್ರಮ ಜರುಗಿಸಬೇಕು ಎಂದು ಮಂಜುನಾಥ್ ಭಂಡಾರಿ ಆಗ್ರಹಿಸಿದ್ದಾರೆ. ನಯನ ತಮ್ಮ ಕೊಳಕು ಬುದ್ದಿಯನ್ನು ಪ್ರದರ್ಶಿಸಿ ಜಾತಿಯತೆಯೇ ಮನಸ್ಥಿತಿಯನ್ನೂ ಬಹಿರಂಗ ಪಡಿಸಿದ್ದಾರೆ. ಇದು ಶೋಷಿತ ಸಮುದಾಯದ ಹೊಲೆಯ ಜಾತಿಗೆ ಉದ್ದೇಶಪೂರ್ವಕವಾಗಿ ಅವಹೇಳನ ಮಾಡಿ ವಿಕೃತಿ ಮೆರೆದಿದ್ದಾರೆ. ಇದರಿಂದ ಶೋಷಿತ ಸಮುದಾಯಕ್ಕೆ ಬಹಳ ನೋವುನ್ನುಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಉಚಿತವಾಗಿ ನೀಡುತ್ತಿದ್ದ ಪುಸ್ತಕವನ್ನೇ ಮಾರಾಟಕ್ಕೆ ರೇಟ್ ಫಿಕ್ಸ್ ಮಾಡಿದ ಡಿಸಿಎಂ ಡಿಕೆಶಿ! ಪುಸ್ತಕಕ್ಕೆ ಎಷ್ಟು ರೇಟ್ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us