/newsfirstlive-kannada/media/media_files/2025/11/19/bengaluru-shrinath-case-2025-11-19-15-24-03.jpg)
ಬೆಂಗಳೂರು: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಸಂಬಂಧಿಯನ್ನ ಬರ್ಬರವಾಗಿ ಕೊಲೆಗೈದು ಮನೆಯಲ್ಲೇ ಹೂತು ಹಾಕಿದ ‘ಸಿನಿಮಾ ಸ್ಟೈಲ್​’​ನ ಕೊಲೆಯ ರಹಸ್ಯವೊಂದು ಬಯಲಾಗಿದೆ. ಈ ಮರ್ಡರ್ ಕಹಾನಿ ದೃಶ್ಯಂ ಸಿನಿಮಾವನ್ನ ನೆನಪಿಸುವಂತಿದೆ.
ಆಂಧ್ರದ ಕುಪ್ಪಂ ಮೂಲದ ನೆರಳೂರು ವಾಸಿ ಶ್ರೀನಾಥ್ (30) ಕೊಲೆಯಾದ ವ್ಯಕ್ತಿ. ಪ್ರಭಾಕರ್, ಜಗದೀಶ್ ಕೊಲೆ ಮಾಡಿದ ಆರೋಪಿಗಳು. ಈ ಶ್ರೀನಾಥ್, ಆರೋಪಿ ಪ್ರಭಾಕರ್​ಗೆ ಸ್ವಂತ ಚಿಕ್ಕಪ್ಪನ ಮಗ. ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕರ್ನಾಟಕದಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿದ್ದು, ಆಂಧ್ರದಲ್ಲಿ ಕೊಲೆಯಾಗಿದೆ.
ಏನಿದು ಪ್ರಕರಣ..?
ಶ್ರೀನಾಥ್ ಅತ್ತಿಬೆಲೆ ಸಮೀಪದ ನೆರಳೂರಿನಲ್ಲಿ ಪತ್ನಿ, ಮಗವಿನೊಂದಿಗೆ ವಾಸವಿದ್ದ. ಇಂಜಿನಿಯರ್ ಆಗಿದ್ದ ಶ್ರೀನಾಥ್​ಗೆ ಕೈತುಂಬ ಸಂಬಳ ಬರುತ್ತಿತ್ತು. ಶ್ರೀನಾಥ್ ಬಳಿ ಹಣ ಇರೋದನ್ನು ತಿಳಿದಿದ್ದ ಪ್ರಭಾಕರ್​, ಒಂದು ಪ್ಲಾನ್ ಮಾಡಿದ್ದ. ಹಣ ಡಬಲ್ ಮಾಡಿಕೊಡ್ತೀನಿ ಎಂದು 40 ಲಕ್ಷ ರೂಪಾಯಿ ಪಡೆದಿದ್ದ.
ಕಳೆದ ಮೂರು ತಿಂಗಳಿನಿಂದ ಹಣ ವಾಪಸ್ ನೀಡುವಂತೆ ಪ್ರಭಾಕರ್​ಗೆ ಶ್ರೀನಾಥ್ ಕೇಳಿದ್ದ. ಇದರಿಂದ ವಿಚಲಿತನಾದ ಪ್ರಭಾಕರ್, ಶ್ರೀನಾಥ್​ನ ಮುಗಿಸಲು ಮಾಸ್ಟರ್ ಪ್ಲಾನ್ ಮಾಡಿದ್ದ.
ಇದನ್ನೂ ಓದಿ:‘ನಿನ್ನ ಜೊತೆ ನನ್ನ ಕಥೆ..’ ಅಜಿತ್​-ಭೂಮಿ ಲವ್​ ಸ್ಟೋರಿಯಲ್ಲಿ ಹೊಸ ಅಧ್ಯಾಯ..!
/filters:format(webp)/newsfirstlive-kannada/media/media_files/2025/11/19/bengaluru-shrinath-case-6-2025-11-19-15-26-37.jpg)
ಹೇಗಿತ್ತು ಪ್ಲಾನ್..?
ಶ್ರೀನಾಥ್ ಫೋನ್ ಮಾಡಿ ಹಣ ಕೇಳಿದಾಗ ಕಥೆ ಕಟ್ಟಿದ್ದ. ಫೋನ್​ನಲ್ಲಿ ದುಡ್ಡಿನ ವಿಚಾರ ಮಾತನಾಡಬೇಡ. ಐಟಿ ಪ್ರಬ್ಲಂ ಆಗುತ್ತೆ ಎಂದಿದ್ದ. ಅದಕ್ಕೆ ನಾವಿಬ್ಬರು ವಾಟ್ಸ್​ಆ್ಯಪ್ ಸ್ಟೇಟಸ್ ಹಾಕಿ ಮಾತಾಡಿಕೊಳ್ಳೋಣ ಎಂದಿದ್ದ. ಇದನ್ನ ನಂಬಿದ್ದ ಶ್ರೀನಾಥ್ ವಾಟ್ಸಾಪ್ ಸ್ಟೇಟಸ್​ನಲ್ಲಿ ತನ್ನ ಸಂದೇಶವನ್ನು ಶೇರ್ ಮಾಡುತ್ತಿದ್ದ.
ಕಳೆದ ತಿಂಗಳು 27 ರಂದು ಹಣ ವಾಪಸ್ ಕೊಡ್ತೀನಿ ಎಂದು ಪ್ರಭಾಕರ್ ಸ್ಟೇಟಸ್ ಹಾಕಿದ್ದ. ನಾನು ನಿನಗೆ ಹಣ ಕೊಡ್ತೀನಿ. ಆದರೆ ಷರತ್ತು ಇದೆ. ನೀನು ನನ್ನ ಬಳಿ ಬರುವಾಗ ಯಾವುದೇ ಫೋನ್ ತೆಗೆದುಕೊಂಡು ಬರುವ ಹಾಗಿಲ್ಲ. ಫೋನ್ ಮನೆಯಲ್ಲಿಯೇ ಬಿಟ್ಟು ಎಂದಿದ್ದ. ಫೋನ್ ತಂದರೆ ಐಟಿ ಪ್ರಾಬ್ಲಂ ಆಗಲಿದೆ ಎಂದು ಕತೆ ಕಟ್ಟಿದ್ದ.
ಅದರಂತೆ ಶ್ರೀನಾಥ್ ಮೊಬೈಲನ್ನು ಮನೆಯಲ್ಲಿಯೇ ಇಟ್ಟು ಪತ್ನಿಗೆ ಹೇಳಿ ಹೋಗಿದ್ದ. ನಾನು ಮನೆಗೆ ಬರೋದು ಎರಡು ದಿನ ಆಗುತ್ತೆ. ಬರುವಾಗ ಯಾವುದಾದರೂ ಒಂದು ನಂಬರ್​ನಿಂದ ಕಾಲ್ ಮಾಡುತ್ತೇನೆ ಎಂದಿದ್ದ.
ಇದನ್ನೂ ಓದಿ: ಗಂಭೀರ್, ಅಗರ್ಕರ್ ಇನ್ನೆಷ್ಟು ದಿನ ‘ನಿಮ್ಮ ಆಟ’..? ರಾಜಕೀಯದಿಂದ ನರಳಿದ ತಂಡ..!
/filters:format(webp)/newsfirstlive-kannada/media/media_files/2025/11/19/bengaluru-shrinath-case-5-2025-11-19-15-27-02.jpg)
ಆಮೇಲೆ ಏನಾಯ್ತು..?
ಮನೆಗೆ ಬರುತ್ತಿದ್ದಂತೆಯೇ ಪ್ರಭಾಕರ್ ಬಳಿ ಶ್ರೀನಾಥ್ ಶ್ರೀನಾಥ್ ಹಣ ಕೇಳಿದ್ದ. ನನ್ನ ಹತ್ತಿರ ಹಣ ಕೇಳ್ತೀಯಾ ಎಂದು ಅಲ್ಲಿಯೇ ಇದ್ದ ಸುತ್ತಿಗೆಯಿಂದ ತಲೆಗೆ ಹೊಡೆದಿದ್ದಾನೆ. ಕೊಲೆ ಬಳಿಕ ಪ್ರಕರಣವನ್ನು ಮುಚ್ಚಿ ಹಾಕಲು ಮನೆಯಲ್ಲಿಯೇ ಗುಂಡಿ ತೆಗೆದು ಹೂತು ಹಾಕಿದ್ದ. ಈ ಕೊಲೆಯಲ್ಲಿ ಪ್ರಭಾಕರ್​​​ಗೆ ಸ್ನೇಹಿತ ಜಗದೀಶ್​​ ಸಾಥ್ ಕೊಟ್ಟಿದ್ದ.
ಪ್ರಭಾಕರ್​​ನಿಂದ ದುಡ್ಡು ತೆಗೆದುಕೊಂಡು ಬರ್ತೀನಿ ಎಂದು ಹೋಗಿದ್ದ ಶ್ರೀನಾಥ್ ಮತ್ತೆ ಬರಲಿಲ್ಲ. ಮೂರು ದಿನಗಳ ಕಾಲ ಶ್ರೀನಾಥ್ ಪತ್ನಿ ಗಂಡನ ಬರುವಿಕೆಗಾಗಿ ಕಾದರು. ನವೆಂಬರ್ 1 ರಂದು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲು ಮಾಡುತ್ತಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿಕ್ಲಿಕ್ ಮಾಡಿ
/filters:format(webp)/newsfirstlive-kannada/media/media_files/2025/11/19/bengaluru-shrinath-case-3-2025-11-19-15-27-30.jpg)
ಕೂಡಲೇ ಪೊಲೀಸರು ಪ್ರಭಾಕರ್​ನ ಕರೆದು ವಿಚಾರಣೆ ಮಾಡಿದ್ದಾರೆ. ಆದರೆ ಬಾಯಿ ಬಿಟ್ಟಿರಲಿಲ್ಲ. ಶ್ರೀನಾಥ್ ನನಗೆ ಸಿಗಲಿಲ್ಲ, ಬೇಕಿದ್ರೆ ಮೊಬೈಲ್ ಚೆಕ್ ಮಾಡ್ಕೋಳಿ ಎಂದಿದ್ದ. ಪ್ರಭಾಕರನ ಒಂದು ತಿಂಗಳ ಕಾಲ್ ಡಿಟೈಲ್ಸ್ ತೆಗೆದು ನೋಡಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಎರಡು ತಿಂಗಳ ಕಾಲ್ ಡಿಟೈಲ್ಸ್ ತೆಗೆದುಕೊಂಡ ಪೊಲೀಸರಿಗೆ ಜಗದೀಶನ ಲಿಂಕ್ ಪತ್ತೆಯಾಗಿದೆ. ಜಗದೀಶನ ಜೊತೆ ಎರಡು ತಿಂಗಳ ಕಾಲ ಪ್ರಭಾಕರ್ ನಿರಂತರ ಸಂಪರ್ಕದಲ್ಲಿರೋದು ಗೊತ್ತಾಗಿದೆ. ಆಗ ಪೊಲೀಸರು ತಮ್ಮದೇ ದಾಟಿಯಲ್ಲಿ ಕೇಳಿದಾಗ ಸತ್ಯವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ: ‘ನಿನ್ನ ಜೊತೆ ನನ್ನ ಕಥೆ..’ ಅಜಿತ್​-ಭೂಮಿ ಲವ್​ ಸ್ಟೋರಿಯಲ್ಲಿ ಹೊಸ ಅಧ್ಯಾಯ..!
ವಿಚಾರಣೆ ವೇಳೆ ಕುಪ್ಪಂನ ಮನೆಯಲ್ಲಿ ಹೂತು ಹಾಕಿರೋದಾಗಿ ಹಂತಕರು ಬಾಯಿಬಿಟ್ಟಿದ್ದಾರೆ. ನಂತರ ಕುಪ್ಪಂ ತಹಶೀಲ್ದಾರ್ ನೇತೃತ್ವದಲ್ಲಿ ಮೃತದೇಹವನ್ನು ಪೊಲೀಸರು ಹೊರ ತೆಗೆದಿದ್ದಾರೆ. ಆರೋಪಿಗಳನ್ನ ಬಂಧಿಸಿ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸ್ತಿದ್ದಾರೆ.
ಆರೋಪಿಗಳಿಗೆ ಇದೆ ಕ್ರೈಂ ನಂಟು..!
ಪೊಲೀಸ್ ವಿಚಾರಣೆ ವೇಳೆ ಆರೋಪಿಗಳಿಗೆ ಭಯಾನಕ ಕ್ರೈಂ ಹಿಸ್ಟರಿ ಇರೋದು ತಿಳಿದುಬಂದಿದೆ. ಈ ಹಿಂದೆ ಸ್ನೇಹಿತನ ಪತ್ನಿಯನ್ನೇ ಪ್ರಭಾಕರ್ ಕೊಲೆ ಮಾಡಿದ್ದ. ಹಣಕ್ಕಾಗಿ ಕೊಲೆ ಮಾಡಿ ಜೈಲಿಗೆ ಹೋಗಿದ್ದ. ಈ ಪ್ರಕರಣದ ಎ2 ಜಗದೀಶ್ ಕೂಡ ತನ್ನ ಪ್ರೇಯಸಿಯನ್ನ ಕೊಲೆ ಮಾಡಿದ್ದ. ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ.
/filters:format(webp)/newsfirstlive-kannada/media/media_files/2025/11/19/bengaluru-shrinath-case-1-2025-11-19-15-27-46.jpg)
ಇಬ್ಬರ ಪರಿಚಯ ಆಗಿದ್ದು ಹೇಗೆ..?
ಹೀಗೆ ಇಬ್ಬರು ಕೊಲೆ ಮಾಡಿ ಜೈಲಿಗೆ ಹೋದಾಗ, ಪರಿಚಯವಾಗಿದೆ. ಈ ಪರಿಚಯ ಸ್ನೇಹಕ್ಕೆ ತಿರುಗಿದೆ. ಸಜೆಯಾಗಿ ಶಿಕ್ಷೆ ಅನುಭವಿಸಿ ಹೊರ ಬಂದ ಬಳಿಕ ಒಟ್ಟಿಗೆ ಸುತ್ತಾಡಲು ಶುರುಮಾಡಿದ್ದಾರೆ. ಹಣ ಮಾಡುವ ಪ್ಲಾನ್​ಗೆ ಇಳಿದಿದ್ದ ಇವರು, ಶ್ರೀನಾಥ್ ಬಳಿ ಹಣವನ್ನು ಡಬಲ್ ಮಾಡಿಕೊಡ್ತೀನಿ ಎಂದು ನಂಬಿಸಿ 40 ಲಕ್ಷ ಪಡೆದಿದ್ದರು. ಪ್ರಭಾಕರ್​​ನ ನಂಬಿದ್ದ ಶ್ರೀನಾಥ್ ಹಣ ನೀಡಿದ್ದ. ಕಳೆದ ಮೂರು ತಿಂಗಳಿನಿಂದ ಹಣ ವಾಪಸ್ ನೀಡುವಂತೆ ಶ್ರೀನಾಥ್ ಕೇಳುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಉಚಿತವಾಗಿ ನೀಡುತ್ತಿದ್ದ ಪುಸ್ತಕವನ್ನೇ ಮಾರಾಟಕ್ಕೆ ರೇಟ್ ಫಿಕ್ಸ್ ಮಾಡಿದ ಡಿಸಿಎಂ ಡಿಕೆಶಿ! ಪುಸ್ತಕಕ್ಕೆ ಎಷ್ಟು ರೇಟ್ ಗೊತ್ತಾ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us