/newsfirstlive-kannada/media/media_files/2025/11/17/cm-siddaramaiah-meets-kharge-2025-11-17-19-40-37.jpg)
ನವೆಂಬರ್ ಕ್ರಾಂತಿ-ಗೀತಿ ಇಲ್ಲ. ಎಲ್ಲ ಭ್ರಾಂತಿಯಷ್ಟೇ ಅಂತಿದ್ದ ಕಾಂಗ್ರೆಸ್​ ನಾಯಕರಿಗೆ ಶಾಕಿಂಗ್ ಸಮಯ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ಸಂಭ್ರಮ ಸಡಗರ ಹೊತ್ತಲ್ಲೇ ನವೆಂಬರ್ ಕ್ರಾಂತಿ ಗೀತೆ ಮೊಳಗೋಕೆ ಶುರುವಾಗಿದೆ. ನಾಯಕತ್ವ ಬದಲಾವಣೆಯ ಗಾಳಿ ಜೋರಾಗಿ ಬೀಸ್ತಿದೆ.
ಡಿ.ಕೆ ಶಿವಕುಮಾರ್ ಬಣ ಒತ್ತಡ
ಕಾಂಗ್ರೆಸ್​ ಹೈಕಮಾಂಡ್ ಮೇಲೆ ಡಿಸಿಎಂ ಡಿ.ಕೆ. ಶಿವಕುಮಾರ್ ಬಣ ಒತ್ತಡ ಹಾಕ್ತಿದೆ. ನಿನ್ನೆ ಮಧ್ಯಾಹ್ನ ಡಿಕೆ ಬಣದ ಶಾಸಕರು, ನಾಯಕರು ದೆಹಲಿಗೆ ಹಾರಿದ್ದಾರೆ. ದೆಹಲಿಯಲ್ಲಿರೋ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿದವರಿಗೆ ಅಂತಹ ಸ್ವಾಗತವೇನೂ ಸಿಕ್ಕಿಲ್ಲ. ಮಲ್ಲಿಕಾರ್ಜುನ ಖರ್ಗೆಯನ್ನ ಡಿಕೆಶಿ ಬಣದ ಶಾಸಕರು ಭೇಟಿ ಮಾಡಿದ್ದಾರೆ. ಗುಬ್ಬಿ ಶಾಸಕ ಎಸ್​​.ಆರ್​.ಶ್ರೀನಿವಾಸ್​​, ನೆಲಮಂಗಲ ಶಾಸಕ ಶ್ರೀನಿವಾಸ್, ಶೃಂಗೇರಿ ಶಾಸಕ ರಾಜೇಗೌಡ, ಆನೇಕಲ್ ಶಾಸಕ ಶಿವಣ್ಣ, ಕುಣಿಗಲ್ ಶಾಸಕ ರಂಗನಾಥ್ ಸೇರಿ ಹಲವರು ವೇಣುಗೋಪಾಲರನ್ನು ಭೇಟಿಯಾಗಿ ಖರ್ಗೆ ಮನೆಗೆ ತೆರಳಿದ್ರು. ಆದ್ರೆ ಅವರನ್ನ ಮನೆ ಬಾಗಿಲಲ್ಲೇ ಮಾತನಾಡಿಸಿ ಬೆಂಗಳೂರಿನಲ್ಲಿ ಮಾತನಾಡೋಣ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಾಪಸ್ ಕಳಿಸಿದ್ದಾರೆ.
ಇದನ್ನೂ ಓದಿ: ಮಸೂದೆಗೆ ಒಪ್ಪಿಗೆ ನೀಡಲು ರಾಜ್ಯಪಾಲರು, ರಾಷ್ಟ್ರಪತಿಗೆ ಕಾಲಮಿತಿ ನಿಗದಿಪಡಿಸಲು ಆಗಲ್ಲ: ಸುಪ್ರೀಂಕೋರ್ಟ್ ನಿಂದ ಮಹತ್ವದ ತೀರ್ಪು
/filters:format(webp)/newsfirstlive-kannada/media/media_files/2025/11/05/dk-shivakumar-2-2025-11-05-09-03-27.jpg)
ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಶಾಸಕರು, MLC ದಂಡು
ಇನ್ನು ಡಿಕೆಶಿ ಬೆಂಬಲಿಗರ ಪೈಕಿ ಕೆಲ ಸಚಿವರು, ಶಾಸಕರು, ಪರಿಷತ್ ಸದಸ್ಯರು ದೆಹಲಿ ಯಾತ್ರೆ ಮಾಡ್ತಿದ್ರೆ ಇತ್ತ ಬೆಂಗಳೂರಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸದಾಶಿವನಗರದಲ್ಲಿರುವ ಡಿಸಿಎಂ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಶಾಸಕರು, MLC ದಂಡು ದಾಂಗುಡಿ ಇಟ್ಟಿದೆ. ಸಚಿವ ಡಾ.ಎಂ.ಸಿ. ಸುಧಾಕರ್, ಶಾಸಕ ದರ್ಶನ್ ಪುಟ್ಟಣ್ಣಯ್ಯ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ. ತಮ್ಮ ಬಣದ ಶಾಸಕರು ಡೆಲ್ಲಿ ಯಾತ್ರೆ ಕೈಗೊಂಡ ಬಗ್ಗೆ ಕೇಳಿದ್ರೆ ಡಿಸಿಎಂ ಹೇಳಿದ್ದು ಮಾತ್ರ ನನಗೇನೂ ಗೊತ್ತಿಲ್ಲ, ನನಗೇನೂ ಗೊತ್ತಿಲ್ಲ ಎಂದಿದ್ದಾರೆ.
/filters:format(webp)/newsfirstlive-kannada/media/media_files/2025/11/01/cm_siddaramaiah-3-2025-11-01-11-03-39.jpg)
ಸಿಎಂ ಆಪ್ತರಿಂದ ಡಿನ್ನರ್
ಇನ್ನು ಡಿಕೆಶಿ ಬಣದ ಶಾಸಕರು ಹಾಗೂ ನಾಯಕರು ಮೇಲಿಂದ ಮೇಲೆ ಹೈಕಮಾಂಡ್ ಭೇಟಿಯಾಗಿ ಮಾತುಕತೆ ಮಾಡ್ತಿದ್ರೆ ಇದಕ್ಕೆ ಸಿದ್ದರಾಮಯ್ಯ ಆಪ್ತರು ಪ್ರತಿತಂತ್ರ ಹೆಣೆದಿದ್ದಾರೆ. ಬೆಂಗಳೂರಿನಲ್ಲಿ ಡಿನ್ನರ್ ನೆಪದಲ್ಲಿ ಸಿಎಂ ಬಣ ಸಭೆ ಮಾಡಿದೆ. ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಸತೀಶ್ ನಿವಾಸದಲ್ಲಿ ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಹೆಚ್. ಸಿ.ಮಹದೇವಪ್ಪ, ಕೆ.ಎನ್. ರಾಜಣ್ಣ, ಕೆ.ಹೆಚ್.ಮುನಿಯಪ್ಪ ಸೇರಿ ಹಲವರು ಭಾಗಿಯಾಗಿದ್ರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಒಟ್ಟಾರೆ ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಅಬ್ಬರ ಜೋರಾಗಿದೆ. ಸದ್ಯ ದೆಹಲಿಯಲ್ಲಿರುವ ಖರ್ಗೆ ಇಂದು ಬೆಂಗಳೂರಿಗೆ ಆಗಮಿಸಲಿದ್ದು ನಾಳೆ ಕೂಡ ಬೆಂಗಳೂರಿನಲ್ಲಿ ಇರಲಿದ್ದಾರೆ. ಈ ವೇಳೆ ಸತೀಶ್ ಜಾರಕಿಹೊಳಿ ಹಾಗೂ ತಂಡ ಖರ್ಗೆ ಭೇಟಿಯಾಗಲಿದೆ.
ವಿಶೇಷ ವರದಿ: ಹರೀಶ್​ ಪೊಲಿಟಿಕಲ್ ಬ್ಯೂರೋ ನ್ಯೂಸ್​ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us