/newsfirstlive-kannada/media/media_files/2025/11/21/gambhir-2-2025-11-21-16-17-54.jpg)
ಈಡನ್​ ಗಾರ್ಡನ್​​ ಟೆಸ್ಟ್​ ಪಂದ್ಯದ ಸೋಲು ವಿಶ್ವ ಕ್ರಿಕೆಟ್​ ಮುಂದೆ ಟೀಮ್​ ಇಂಡಿಯಾ ತಗ್ಗಿಸುವಂತೆ ಮಾಡಿದೆ. ಗುವಾಹಟಿ ಟೆಸ್ಟ್​ ಗೆದ್ದು ವೈಟ್​ವಾಷ್​ ಮುಖಭಂಗದಿಂದ ಪಾರಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಡು ಆರ್​ ಡೈ ಪಂದ್ಯಕ್ಕೂ ಮುನ್ನ ಹೆಡ್​ ಕೋಚ್​ ಗೌತಮ್​ ಗಂಭೀರ್ ಪವರ್​ಫುಲ್​ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇಂಡೋ-ಆಫ್ರಿಕಾ ಸೆಕೆಂಡ್​ ಟೆಸ್ಟ್​ಗೆ ಕೌಂಟ್​​ಡೌನ್​ ಆರಂಭವಾಗಿದೆ. ಮೊದಲ ಟೆಸ್ಟ್​ನಲ್ಲಿ ಹೀನಾಯ ಸೋಲುಂಡ ಟೀಮ್​ ಇಂಡಿಯಾ ಇದೀಗ ಸರಣಿ ಸೋಲಿಂದ ಪಾರಾಗಬೇಕಾದ ಸಂಕಷ್ಟಕ್ಕೆ ಸಿಲುಕಿದೆ. ವೈಟ್​ವಾಷ್​ ಮುಖಭಂಗದಿಂದ ಪಾರಾಗಲು ಗುವಾಹಟಿಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೆಡ್​ ಕೋಚ್​ ಗಂಭೀರ್​ ಅಂತೂ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದು, ಸಂಕಷ್ಟ ನಿವಾರಣೆಗೆ ದೇವರ ಮೊರೆ ಹೋಗಿದ್ದಾರೆ.
ಪವರ್​​ಫುಲ್​ ಸ್ಥಳಕ್ಕೆ​ ಗಂಭೀರ್​ ಭೇಟಿ
ಈಡನ್​​ ಗಾರ್ಡನ್​ ಟೆಸ್ಟ್​ ಪಂದ್ಯ ಮುಗಿದ ಬಳಿಕವೂ ಕೊಲ್ಕತ್ತಾದಲ್ಲೇ ಬೀಡು ಬಿಟ್ಟಿದ್ದ ಟೀಮ್​ ಇಂಡಿಯಾ ಅಲ್ಲೇ ಅಭ್ಯಾಸ ನಡೆಸಿದ್ರು. ಇದೀಗ ಗುವಾಹಟಿಗೆ ಬಂದಿಳಿದ ಬೆನ್ನಲ್ಲೇ ಹೆಡ್​​ ಕೋಚ್​ ಗೌತಮ್​ ಗಂಭೀರ್​ ಪವರ್​ಫುಲ್​ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗುವಾಹಟಿಯಲ್ಲಿರೋ ಪವಿತ್ರ ಸ್ಥಳವಾದ ಮಾ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ.
ಕೋಚ್​ ಗೌತಮ್​ ಗಂಭೀರ್​ ಕಾಮಾಕ್ಯ ದೇವಿಯ ಪರಮ ಭಕ್ತ. ಆಗಾಗ ಈ ದೇವಸ್ಥಾನಕ್ಕೆ ಭೇಟಿ ನೀಡ್ತಾರೆ. ಕೋಚ್​ ಹುದ್ದಗೇರಿದ ಬೆನ್ನಲ್ಲೇ ಮೊದಲು ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು. ಪವಿತ್ರ ಸ್ಥಳಕ್ಕೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿದ್ರೆ ಒಳಿತಾಗುತ್ತೆ ಅನ್ನೋದು ಗಂಭೀರ್​ ನಂಬಿಕೆ. ಆ ನಂಬಿಕೆ ನಿಜವಾಗಿದೆ ಕೂಡ. ಈ ಹಿಂದೆ ಕೆಕೆಆರ್​ ಮೆಂಟರ್​ ಆಗಿದ್ದ ಗೌತಮ್​​ ಗಂಭೀರ್​ 2024ರ ಐಪಿಎಲ್​ಗೂ ಮುನ್ನ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ್ರು. ಸೀಸನ್​ನ ಅಂತ್ಯದಲ್ಲಿ ಕೆಕೆಆರ್​ ಚಾಂಪಿಯನ್​ ಆಗಿ ಹೊರ ಹೊಮ್ಮಿತ್ತು.
ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್​ನಲ್ಲಿ ನಾಯಕತ್ವಕ್ಕಾಗಿ ಕಿತ್ತಾಟ..! ರವೀಂದ್ರ ಜಡೇಜಾಗೆ ಪಟ್ಟ..?
/filters:format(webp)/newsfirstlive-kannada/media/media_files/2025/11/19/gambhir-and-agarkar-2025-11-19-13-32-58.jpg)
ನಮ್ಮ ದೇಶದಲ್ಲಿ ಹಲವು ದೇವ ಸನ್ನಿಧಿಗಳು ಅನನ್ಯತೆಯ ಕಾರಣದಿಂದಲೇ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿ ಬೆಳೆದಿವೆ. ಅಂತಾ ಧಾರ್ಮಿಕ ಕೇಂದ್ರಗಳಲ್ಲಿ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನ ಕೂಡಾ ಒಂದು. ಅಸ್ಸಾಂಗೆ ಭೇಟಿ ನೀಡಿದ ಪ್ರವಾಸಿಗರು ಈ ದೇವಸ್ಥಾನಕ್ಕೆ ಹೋಗದೇ ಬರೋದು ತೀರಾ ಕಡಿಮೆ. ಕಾಮಾಕ್ಯ ದೇವಸ್ಥಾನ ದೇಶದ 51 ಶಕ್ತಿಪೀಠಗಳಲ್ಲಿ ಒಂದಾಗಿದೆ. ಈ ಪವಿತ್ರ ಸ್ಥಳಕ್ಕೆ ಬೇಟಿ ನೀಡಿ, ಪೂಜೆ ಸಲ್ಲಿಸಿ ಭಕ್ತಿಯಿಂದ ಪ್ರಾರ್ಥಿಸಿದ್ರೆ, ದುಷ್ಟಶಕ್ತಿಗಳಿಂದ ಮುಕ್ತಿ ಸಿಗುತ್ತೆ ಅನ್ನೋದು ಭಕ್ತರ ನಂಬಿಕೆಯಾಗಿದೆ. ವಿಶೇಷವಾಗಿ ಮಾಟ ಮಂತ್ರದ ಬಾಧೆಯಿಂದ ಮುಕ್ತಿ ಪಡೆಯುವ ಸಲುವಾಗಿಯೇ ಸಾಕಷ್ಟು ಮಂದಿ ಇಲ್ಲಿಗೆ ಭೇಟಿ ನೀಡ್ತಾರೆ.
ಟೀಮ್​ ಇಂಡಿಯಾ ಹೆಡ್​ ಕೋಚ್​ ಗೌತಮ್​ ಗಂಭೀರ್​ ದೇವಿ ಭಕ್ತ. ಶಕ್ತಿ ದೇವತೆಗಳ ಆರಾಧಕ. ಸೌತ್​ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ಗೂ ಮುನ್ನ ಗಂಭೀರ್​ ಕೊಲ್ಕತ್ತಾದ ಕಾಳಿ ಘಾಟ್​ಗೆ ಬೇಟಿ ನೀಡದ್ರು. ಮಹಾಕಾಳಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ರು. ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡದೊಂದಿಗೆ ಸುದೀರ್ಘ ಕಾಲ ಇದ್ದ ಕಾರಣಕ್ಕೋ ಏನೋ.. ದೇವಸ್ಥಾನದ ಜೊತೆಗೆ ವಿಶೇಷವಾದ ನಂಟು ಹೊಂದಿದ್ದಾರೆ. ಇದೇ ಮೊದಲಲ್ಲ. ಈ ಹಿಂದೆ ಕೂಡ ಹಲವು ಬಾರಿ ಕಾಳಿ ಘಾಟ್​ಗೆ ತೆರಳಿ ಗೌತಮ್​ ಗಂಭೀರ್​ ವಿಶೇಷ ಪೂಜೆ ಸಲ್ಲಿಸಿದ್ದಿದೆ.
ಟೀಮ್​ ಇಂಡಿಯಾ ಹೆಡ್​ ಕೋಚ್​ ಪಟ್ಟವೇರಿದ ಬಳಿಕ ಗೌತಮ್​ ಗಂಭೀರ್​ ಟೆಂಪಲ್​ ರನ್​ ನಡೆಸಿದ್ದಾರೆ. ತಿರುಪತಿಯ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದಿದ್ದ ಗಂಭೀರ್​, ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿದ್ರು. ಏಷ್ಯಾಕಪ್​ಗೂ ಮುನ್ನ ಅಗಸ್ಟ್​ನಲ್ಲಿ ಉಜ್ಜಯಿನಿಯ ಮಹಾಕಾಳೇಶ್ವನ ಸನ್ನಿಧಿಗೆ ತೆರಳಿ ಭಸ್ಮಾರತಿಯಲ್ಲಿ ಭಾಗಿಯಾಗಿದ್ರು.
ಈಡನ್​ ಗಾರ್ಡನ್ ಟೆಸ್ಟ್​ ಸೋಲಿನಿಂದ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿರೋ ಗೌತಮ್​ ಗಂಭೀರ್​ ಇದೀಗ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ. ಗಂಭೀರ್​​ ಪ್ರಾರ್ಥನೆ ಫಲಿಸಲಿ. ಮಾತೆಯ ಆಶೀರ್ವಾದದಿಂದ ಗುವಾಹಟಿಯಲ್ಲಿ ಟೀಮ್​ ಇಂಡಿಯಾ ಗೆದ್ದು ಸರಣಿ ಸಮಭಲ ಸಾಧಿಸಲಿ ಅನ್ನೋದೇ ಎಲ್ಲರ ಆಶಯ.
ಇನ್ನಷ್ಟು ಕ್ರಿಕೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us