6 ವರ್ಷಗಳ ಪ್ರೀತಿ ಇಂದು ದಾಂಪತ್ಯದ ಬೆಸುಗೆ.. ಹೇಗಿದೆ ಸ್ಮೃತಿ ಮದುವೆ ಸಂಭ್ರಮ..?

ಸ್ಮೃತಿ ಮಂದಾನ.. ಟೀಮ್​ ಇಂಡಿಯಾ ಬ್ಯಾಟರ್​.. ಆರ್​ಸಿಬಿ ವುಮೆನ್ಸ್​ ತಂಡ ನಾಯಕಿ.. ಆರ್​ಸಿಬಿಯ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈಡೇರಿಸಿದ ದೇವತೆ.. ಆರ್​ಸಿಬಿ ಪುರುಷರ ತಂಡ ಕಪ್​ ಗೆಲ್ಲೋದಕ್ಕೂ ಮೊದ್ಲೇ.. ಸ್ಮೃತಿ ಆ ಆಸೆಯನ್ನು ಈಡೇರಿಸಿದ್ರು. ಇದೀಗ ಜೀವನ ಹೊಸ ಪಯಣ ಶುರು ಮಾಡಲು ಸಜ್ಜಾಗಿದ್ದಾರೆ..

author-image
Ganesh Kerekuli
Smriti mandana
Advertisment
  • ಹಸೆಮಣೆ ಏರಲು ಸಜ್ಜಾದ ಆರ್​ಸಿಬಿ ವುಮೆನ್ಸ್​​ ಕ್ಯಾಪ್ಟನ್​
  • ಇಂದು ಜೀವನದ ಹೊಸ ಇನ್ನಿಂಗ್​​ ಆರಂಭಿಸಲಿರುವ ಸ್ಮೃತಿ
  • ಸಂಗೀತಾ ಕಾರ್ಯಕ್ರಮದಲ್ಲಿ ನವಜೋಡಿ ಮಸ್ತ್​ ಡ್ಯಾನ್ಸ್​

ಟೀಮ್​ ಇಂಡಿಯಾದ ಕ್ವೀನ್​​… ಆರ್​ಸಿಬಿ ತಂಡ ನಾಯಕಿ ಸ್ಮೃತಿ ಮಂದನಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 6 ವರ್ಷಗಳ ಪ್ರೀತಿಗೆ ಇಂದು ಮದುವೆ ಎಂಬ ಮುದ್ರೆ ಬೀಳಲಿದೆ. ಮದುವೆ ಕಾರ್ಯಕ್ರಮಗಳ ಅದ್ಧೂರಿಯಾಗಿ ನಡೆದಿದ್ದು, ಕಳೆದ ರಾತ್ರಿ ನಡೆದ ಸಂಗೀತಾ ಕಾರ್ಯಕ್ರಮದಲ್ಲಿ ಜೋಡಿಹಕ್ಕಿಗಳು ಮಸ್ತ್​ ಡ್ಯಾನ್ಸ್​ ಮಾಡಿದ್ದಾರೆ.

ಟೀಮ್​ ಇಂಡಿಯಾ ಕ್ವೀನ್​ ಆರ್​​ಸಿಬಿ ಕ್ಯಾಪ್ಟನ್​ ಸ್ಮೃತಿ ಮಂದಾನ ಮದುವೆ ಯಾವಾಗ ಎಂಬ ಅಭಿಮಾನಿಗಳ ಬಿಲಿಯನ್​ ಡಾಲರ್​ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪ್ರಿಯಕರ ಪಲಾಶ್​ ಮುಚ್ಚಲ್​ ಜೊತೆಗೆ ಹಸೆಮಣೆ ಏರೋಕೆ ಸಾಂಗ್ಲಿ ಸುಂದರಿ ಸಜ್ಜಾಗಿದ್ದಾರೆ. ಸಿಂಗಲ್​ ಜೀವಕ್ಕೆ ಟಾಟಾ ಹೇಳಿ ಗ್ಲಾಮರ್​ ಗರ್ಲ್​ ಇಂದು ಜೀವನದ ಹೊಸ ಇನ್ನಿಂಗ್ಸ್​​ ಆರಂಭಿಸ್ತಿದ್ದಾರೆ. 

ಇದನ್ನೂ ಓದಿ:KL ರಾಹುಲ್ ದೊಡ್ಡ ಯಡವಟ್ಟು.. ಬೆಲೆ ತೆತ್ತ ಟೀಂ ಇಂಡಿಯಾ..!

Smrit mandana

6 ವರ್ಷಗಳ ಪ್ರೀತಿ ಇಂದು ದಾಪಂತ್ಯದ ಬೆಸುಗೆ

ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಅವರ ಪ್ರೇಮಕಥೆ 2019ರಲ್ಲಿ ಪ್ರಾರಂಭವಾಯಿತು, ಆದರೆ ಅವರು ಅದನ್ನು ಖಾಸಗಿಯಾಗಿ ಇಟ್ಟುಕೊಂಡಿದ್ದರು. ಅವರ ಸಂಬಂಧವು 2024 ರಲ್ಲಿ ಬಹಿರಂಗವಾಯಿತು. ಹಲವು ಸಮಯಗಳಿಂದ ಪ್ರೀತಿಯಲ್ಲಿದ್ದರು  ಸ್ಮೃತಿ ಮಂದಾನ ಮತ್ತು ಸಂಗೀತ ಸಂಯೋಜಕ ಪಲಾಶ್‌ ಮುಚ್ಚಲ್‌ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಪಲಾಶ್ ಅವರು ಸಂಗೀತ ಸಂಯೋಜಕ ಮತ್ತು ಗಾಯಕರಾಗಿದ್ದಾರೆ.

ಇದನ್ನೂ ಓದಿ: ಸ್ಮೃತಿ ಮಂದಾನ ಮದುವೆ.. ಭಾವಿ ಪತಿ ಸರ್ಪ್ರೈಸ್​​ಗೆ ಭಾವುಕರಾದ RCB ಸುಂದರಿ..!

Smrit mandana (1)

ಸಂಗೀತಾ ಕಾರ್ಯಕ್ರಮದಲ್ಲಿ ನವಜೋಡಿ ಮಸ್ತ್​ ಡ್ಯಾನ್ಸ್​

ಇನ್ನು ಕಳೆದ ರಾತ್ರಿ ನಡೆದ ಸಂಗೀತಾ ಕಾರ್ಯಕ್ರಮದಲ್ಲಿ ಸ್ಮೃತಿ ಮಂದನಾ ಜೋಡಿ, ಡ್ಯಾನ್ಸ್​ ಮಾಡುವ ಮೂಲಕ ಗಮನ ಸೆಳೆದ್ರು. ಕ್ರಿಕೆಟಿಗರಾದ ಕನ್ನಡತಿ ಶ್ರೇಯಾಂಕಾ ಪಾಟೀಲ್​ ಸೇರಿದಂತೆ ಹಲವು ಕೂಡ ಬಿಂದಾಸ್​ ಆಗಿ ಹೆಜ್ಜೆ ಹಾಕಿದ್ರು..

ಈಗಾಗಲೇ ಜೋಡಿಯ ಮದುವೆ ಕಾರ್ಯಕ್ರಮ ಆರಂಭವಾಗಿದ್ದು, ಹಳದಿ ಸಂಭ್ರಮದಲ್ಲಿ ಮಿಂದಿದ್ದರು.. ಈ ಕಾರ್ಯಕ್ರಮದಲ್ಲಿ ಭಾರತ ವನಿತೆಯರ ತಂಡ ಹಲವು ಆಟಗಾರ್ತಿಯರು ಪಾಲ್ಗೊಂಡು ಶುಭ ಹಾರೈಸಿದ್ರು. ಇಂದು ಸಾಂಗ್ಲಿಯಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

smriti mandhana
Advertisment