/newsfirstlive-kannada/media/media_files/2025/08/29/bcci-team-india-2025-08-29-16-18-53.jpg)
ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ಶ್ರೇಯಸ್​ ಅಯ್ಯರ್​ ಟೈಮೇ ಸರಿಯಿಲ್ಲ ಅನ್ಸುತ್ತೆ. ಮೊದಲೇ ಫಿಟ್​ನೆಸ್​ ಸಮಸ್ಯೆ ಎದುರಿಸ್ತಾ ಇದ್ದ ಶ್ರೇಯಸ್​ಗೆ ಇದೀಗ ಗಾಯದ ಮೇಲೆ ಬರೆ ಬಿದ್ದಂತಾಗಿದೆ. ಆಸಿಸ್​ ಪ್ರವಾಸದಲ್ಲಿ ಇಂಜುರಿಗೆ ತುತ್ತಾಗಿ ಚಿಕಿತ್ಸೆ ಪಡೆದು ಭಾರತಕ್ಕೆ ವಾಪಾಸ್ಸಾದ ಶ್ರೇಯಸ್​ಗೆ ಶಾಕ್​ ಎದುರಾಗಿದೆ. ಲೇಟೆಸ್ಟ್​ ರಿಪೋರ್ಟ್​ನ ಪ್ರಕಾರ ಶ್ರೇಯಸ್​, ಫುಲ್​ ಫಿಟ್​ ಆಗಿಲ್ವಂತೆ. ಮುಂದಿನ ವರ್ಷ ಐಪಿಎಲ್​ ಆಡೋದು ಡೌಟಂತೆ.
UGC ಟೆಸ್ಟ್​ಗೆ ಒಳಗಾದ ಶ್ರೇಯಸ್​ ಅಯ್ಯರ್​
ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಒನ್​ ಡೇ ಪಂದ್ಯದಲ್ಲಿ ಕ್ಯಾಚ್​ ಹಿಡಿಯೋ ವೇಳೆ ಶ್ರೇಯಸ್​ ಅಯ್ಯರ್​ ಮಾರಣಾಂತಿಯ ಇಂಜುರಿಗೆ ತುತ್ತಾಗಿದ್ರು. ಸಿಡ್ನಿಯ ಸೆಂಟ್​ ವಿನ್ಸೆಂಟ್​ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗಿ ಚಿಕಿತ್ಸೆ ಪಡೆದ ಶ್ರೇಯಸ್​ ಅಯ್ಯರ್​ ಕೆಲ ದಿನಗಳ ಹಿಂದಷ್ಟೇ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ತವರಿಗೆ ಮರಳಿರೋ ಶ್ರೇಯಸ್​ ಇದೀಗ ಇಂಜುರಿ ಮ್ಯಾನೇಜ್​ಮೆಂಟ್​​ನ ಯುಜಿಸಿ ಟೆಸ್ಟ್​ಗೆ ಒಳಗಾಗಿದ್ದಾರೆ. ಟೆಸ್ಟ್​ನ ರಿಪೋರ್ಟ್​​ ಪ್ರಕಾರ ಶ್ರೇಯಸ್​ ಫುಲ್​ ಫಿಟ್​ ಆಗಿಲ್ಲ ಎಂದು ತಿಳಿದು ಬಂದಿದೆ. ಕನಿಷ್ಟ ಫಿಟ್​ನೆಸ್​ ರೂಟಿನ್​ ಕೂಡ ಆರಂಭಿಸುವಂತಿಲ್ಲ ಎಂದು ಡಾಕ್ಟರ್ಸ್​ ಸೂಚಿಸಿದ್ದಾರೆ.
ಇದನ್ನೂ ಓದಿ:140.3 ಓವರ್, 32 ವಿಕೆಟ್ಸ್.. ಒಂದೂವರೆ ದಿನಕ್ಕೆ ಟೆಸ್ಟ್ ಮ್ಯಾಚ್ ಫಿನಿಶ್..!
/filters:format(webp)/newsfirstlive-kannada/media/media_files/2025/11/20/iyer-and-gill-2025-11-20-08-46-01.jpg)
ಡಾಕ್ಟರ್​ ವಿಶ್ರಾಂತಿಗೆ ಸೂಚಿಸಿದ ಬೆನ್ನಲ್ಲೇ ಮುಂಬರೋ 2 ಮಹತ್ವದ ಸರಣಿಗಳಿಂದ ಶ್ರೇಯಸ್​​ ಅಯ್ಯರ್​ ಅಧಿಕೃತವಾಗಿ ಹೊರಬಿದ್ದಂತಾಗಿದೆ. ನವೆಂಬರ್​ 30ರಿಂದ ಆರಂಭವಾಗಲಿರೋ ಸೌತ್​ ಆಫ್ರಿಕಾ ಎದುರಿನ 3 ಪಂದ್ಯಗಳ ಏಕದಿನ ಸರಣಿ ಹಾಗೂ ಜನವರಿ 11ರಿಂದ ಆರಂಭವಾಗೋ ನ್ಯೂಜಿಲೆಂಡ್ ಎದುರಿನ ಸರಣಿಯಿಂದ ಶ್ರೇಯಸ್​ ಹೊರಬೀಳೋದು ಕನ್​ಫರ್ಮ್​ ಆಗಿದೆ. ಇದು ಟೀಮ್​ ಇಂಡಿಯಾದ ವಿಶ್ವಕಪ್​ ಪ್ಲ್ಯಾನಿಂಗ್​ಗೆ ಮಾತ್ರವಲ್ಲ.. ಶ್ರೇಯಸ್ ಅಯ್ಯರ್​ ಸಿದ್ಧತೆಗೂ ದೊಡ್ಡ ಹಿನ್ನಡೆ ತಂದೊಡ್ಡಿದೆ.
ವಿಶ್ರಾಂತಿಗೆ ಒಳಗಾಗಲಿರೋ ಶ್ರೇಯಸ್​ ಅಯ್ಯರ್​, ಮುಂದಿನ ತಿಂಗಳು ಅಂತ್ಯದಲ್ಲಿ ಮತ್ತೆ ಟೆಸ್ಟ್​ಗೆ ಒಳಗಾಗಲಿದ್ದಾರೆ. ಆ ಟೆಸ್ಟ್​​ನಲ್ಲಿ ಚೇತರಿಕೆ ಕಂಡು ಬಂದರೆ ಆ ಬಳಿಕ ರಿಹ್ಯಾಬ್​ಗೆ ಡಾಕ್ಟರ್ಸ್​ ಅನುಮತಿ ನೀಡಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಶ್ರೇಯಸ್​ ಇನ್ನೊಂದು ತಿಂಗಳು ವಿಶ್ರಾಂತಿ ಪಡೆದರೆ ಇಂಜುರಿಯಿಂದ ಕಂಪ್ಲೀಟ್​ ರಿಕವರಿಯಾಗಲಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಜನವರಿ ಆರಂಭದಿಂದ ಶ್ರೇಯಸ್​ ರಿಹ್ಯಾಬ್​ಗೆ ಒಳಗಾಗೋ ಸಾಧ್ಯತೆ ದಟ್ಟವಾಗಿದೆ.
IPL 2026ಕ್ಕೆ ಡೌಟ್​
ಜನವರಿಯಲ್ಲಿ ರಿಹ್ಯಾಬ್​ಗೆ ಒಳಗಾದ್ರೂ 19ನೇ ಸೀಸನ್​ನ ಐಪಿಎಲ್​ ವೇಳೆಗೆ ಶ್ರೇಯಸ್​ ಫುಲ್​ ಫಿಟ್​ ಆಗೋದು ಅನುಮಾನವಾಗಿದೆ. ಕನಿಷ್ಟ 2ರಿಂದ ರಿಂದ 3 ತಿಂಗಳ ಕಾಲ ಶ್ರೇಯಸ್​ ಬೆಂಗಳೂರಿನ ಬಿಸಿಸಿಐ ಸೆಂಟರ್​ ಆಫ್​ ಎಕ್ಸಲೆನ್ಸ್​ನಲ್ಲಿ ರಿಹ್ಯಾಬ್​ಗೆ ಒಳಗಾಗಲಿದ್ದಾರೆ. ಮಾರ್ಚ್​ನಲ್ಲಿ ಐಪಿಎಲ್​ ಟೂರ್ನಿ ಆರಂಭವಾಗಲಿದೆ. ಪೂರ್ತಿ ಟೂರ್ನಿ ಅಲ್ಲದಿದ್ರೂ ಶ್ರೇಯಸ್​ ಆರಂಭಿಕ ಹಂತದ ಕೆಲ ಪಂದ್ಯಗಳಿಗೆ ಶ್ರೇಯಸ್​ ಅಯ್ಯರ್​ ಅಲಭ್ಯರಾಗಲಿದ್ದಾರೆ ಅನ್ನೋದು ಸದ್ಯದ ಅಪ್​ಡೇಟ್​ ಆಗಿದೆ.
ಇದನ್ನೂ ಓದಿ: ಈ ತಿಂಗಳಲ್ಲಿ ಎರಡನೇ ಸೈಕ್ಲೋನ್! ಕರ್ನಾಟಕಕ್ಕೆ ಭಾರೀ ಮಳೆಯ ಎಚ್ಚರಿಕೆ
/filters:format(webp)/newsfirstlive-kannada/media/media_files/2025/10/27/iyer-2025-10-27-17-52-52.jpg)
ಶ್ರೇಯಸ್​ ಅಯ್ಯರ್​ ಇಂಜುರಿ ಪಂಜಾಬ್​ ಕಿಂಗ್ಸ್ ಫ್ರಾಂಚೈಸಿಯ ಟೆನ್ಶನ್​​ ಅನ್ನೂ ಹೆಚ್ಚಿಸಿದೆ. ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಶ್ರೇಯಸ್​ ಅಲಭ್ಯರಾದ್ರೆ ತಂಡವನ್ನ ಮುನ್ನಡೆಸೋದ್ಯಾರು ಅನ್ನೋ ಟೆನ್ಶನ್​ ಮ್ಯಾನೇಜ್​ಮೆಂಟ್​ಗೆ ಕಾಡ್ತಿದೆ. ಸದ್ಯ ತಂಡದಲ್ಲಿರೋ ಯಾವ ಆಟಗಾರನಿಗೆ ಕೂಡ ಸಮರ್ಥವಾಗಿ ತಂಡವನ್ನ ಮುನ್ನಡೆಸಿದ ಅನುಭವವಿಲ್ಲ. ಮಾರ್ಕಸ್​ ಸ್ಟೋಯ್ನಿಸ್​, ಪ್ರಭ್​ ಸಿಮ್ರನ್​ ಸಿಂಗ್​ ಹಾಗೂ ಶಶಾಂಕ್​ ಸಿಂಗ್​ ಸದ್ಯ ತಂಡದಲ್ಲಿರೋ ಆಯ್ಕೆಯಾಗಿದ್ದಾರೆ. ಹೀಗಾಗಿ ಡಿಸೆಂಬರ್​ನಲ್ಲಿ ನಡೆಯೋ ಮಿನಿ ಹರಾಜಿನಲ್ಲಿ ಬ್ಯಾಕ್ ​ಅಪ್​ ಕ್ಯಾಪ್ಟನ್ ಬೇಟೆಯಾಡಲು ಫ್ರಾಂಚೈಸಿ ಚಿಂತಿಸಿದೆ.
ನೋಡೋದಕ್ಕೆ ಫುಲ್​ ಫಿಟ್​ ಆಗಿ ಕಾಣಿಸಿದ್ರೂ ಶ್ರೇಯರ್​ಗೆ ಫಿಟ್​ನೆಸ್​ ಸಮಸ್ಯೆಯನ್ನ ಪದೇ ಪದೇ ಎದುರಿಸ್ತಾ ಇದ್ದಾರೆ. ದುರಾದೃಷ್ಟ ಶ್ರೇಯಸ್​ ಬೆನ್ನಿಗೆ ಬಿದ್ದಂತಿದೆ. ಬ್ಯಾಕ್​ ಇಂಜುರಿ ಕಾರಣಕ್ಕೆ ಟೆಸ್ಟ್ ಫಾರ್ಮೆಟ್​ನಿಂದ ದೀರ್ಘ ಕಾಲ ಬ್ರೇಕ್​ ಪಡೆದಿದ್ದ ಶ್ರೇಯಸ್​, ಇದೀಗ ಪಕ್ಕೆಲುಬಿನ ಇಂಜುರಿಯಿಂದಾಗಿ ಮೈದಾನದಿಂದಲೇ ಹೊರ ಉಳಿಯುವಂತಾಗಿದೆ. ಆದಷ್ಟು ಬೇಗ ಚೇತರಿಸಿಕೊಂಡು ಶ್ರೇಯಸ್​ ಮೈದಾನಕ್ಕೆ ಮರಳಲಿ ಅನ್ನೋದೆ ಅಭಿಮಾನಿಗಳ ಆಶಯವಾಗಿದೆ.
ಇದನ್ನೂ ಓದಿ: 6 ವರ್ಷಗಳ ಪ್ರೀತಿ ಇಂದು ದಾಪಂತ್ಯದ ಬೆಸುಗೆ.. ಹೇಗಿದೆ ಸ್ಮೃತಿ ಮದುವೆ ಸಂಭ್ರಮ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us