/newsfirstlive-kannada/media/post_attachments/wp-content/uploads/2024/10/CYCLONE.jpg)
ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದ್ದು, ಸೈಕ್ಲೋನ್ ಭೀತಿ ಆವರಿಸಿದೆ. ಅಲ್ಲದೇ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಭಾರೀ ಮಳೆ ಸುರಿಯುವ ಎಚ್ಚರಿಕೆಯನ್ನ ನೀಡಲಾಗಿದೆ.
ಬಂಗಾಳಕೊಲ್ಲಿ ವಿಷಮ ಸ್ಥಿತಿಗೆ ತಲುಪಿರುವ ಹಿನ್ನೆಲೆಯಲ್ಲಿ ಚಂಡಮಾರುತ ಏಳುವ ಸಾಧ್ಯತೆ ದಟ್ಟವಾಗಿದೆ. ಇದು ಹವಾಮಾನದ ಮೇಲೆ ಭಾರೀ ಪರಿಣಾಮ ಬೀರಲಿದೆ. ಮುಂದಿನ ಮೂರು ದಿನಗಳಲ್ಲಿ ಮಳೆಯನ್ನ ನಿರೀಕ್ಷೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ:‘ಕುರ್ಚಿ ಕಿತ್ತಾಟ’ದ ಬಗ್ಗೆ ಕುಮಾರಸ್ವಾಮಿ ಮಾರ್ಮಿಕ ಹೇಳಿಕೆ.. HDK ಲೆಕ್ಕಾಚಾರ ಬೇರೆಯೇ ಇದೆ..!
ಈ ತಿಂಗಳದ ಎರಡನೇ ಚಂಡಮಾರುತ ಇದಾಗೆ. GFS, Ecmwf, Gefs ಮತ್ತು ಐಕಾನ್ ಸೇರಿದಂತೆ ಹವಾಮಾನ ಮಾದರಿಗಳು ಆಂಧ್ರಪ್ರದೇಶದಲ್ಲಿ ಭೂಕುಸಿತದ ಮುನ್ಸೂಚನೆ ನೀಡುತ್ತಿವೆ. ಹವಾಮಾನ ತಜ್ಞರ ಪ್ರಕಾರ, ಈ ಸೈಕ್ಲೋನ್ ಭಾರೀ ಹಾನಿ ಮಾಡುವ ಸಾಧ್ಯತೆ ಇದೆ.
ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣಂ, ಅನಕಪಲ್ಲಿ, ಕಾಕಿನಾಡ, ಕೊನಸೀಮಾ, ಎಲುರು, ಗುಂಟೂರು, ಪಲ್ನಾಡು, ಬಾಪಟ್ಲಾ, ಪ್ರಕಾಶಂ ಮತ್ತು ನೆಲ್ಲೂರು ಸೇರಿದಂತೆ ಆಂಧ್ರಪ್ರದೇಶದಾದ್ಯಂತ ಜಿಲ್ಲೆಗಳು ನವೆಂಬರ್ 26 ರಿಂದ ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದೆ. ಅಲ್ಲದೇ ಕರ್ನಾಟಕ, ಒಡಿಶಾ, ಲಕ್ಷದ್ವೀಪ, ಕೇರಳ, ತಮಿಳುನಾಡು ಭಾಗದಲ್ಲಿ ಮಳೆಯಾಗಲಿದೆ. ನವೆಂಬರ್ 26 ವರೆಗೆ ಮಳೆ ನಿರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಬದುಕು ನೀಡುವ ಸಂಕಟ, ನೋವಿಗೆ ದೈವದ ನುಡಿಗಳು ಮದ್ದಾಗುತ್ತವೆ: ಕೆ.ವಿ.ಪ್ರಭಾಕರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us