/newsfirstlive-kannada/media/post_attachments/wp-content/uploads/2024/09/HDK_ADGP_2.jpg)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಕುರ್ಚಿ ಫೈಟ್ ಜೋರಾಗಿದೆ. ಈ ಮಧ್ಯೆ ಕೇಂದ್ರ ಸಚಿವ ಹೆಚ್.​ಡಿ.ಕುಮಾರಸ್ವಾಮಿ, ಮುಂದಿನ ಆರು ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ನಿರೀಕ್ಷೆಗೂ ಮೀರಿದ ಬೆಳವಣಿಗೆ ಆಗಲಿದೆ ಎಂದಿದ್ದಾರೆ.
ಕರ್ನಾಟಕ ಕಾಂಗ್ರೆಸ್​ನಲ್ಲಿ ಆಗ್ತಿರುವ ಬೆಳವಣಿಗೆ ಬಗ್ಗೆ ನಿನ್ನೆ ಪ್ರತಿಕ್ರಿಯಿಸಿ ಮಾತನ್ನಾಡಿರುವ ಅವರು, ಮುಂದಿನ ಆರು ತಿಂಗಳಲ್ಲಿ ನಿರೀಕ್ಷೆ ಮೀರಿದ ಬೆಳವಣಿಗೆ ಆಗಲಿದೆ. ಹೀಗೆ ಆಗುತ್ತದೆ ಅನ್ನೋದನ್ನ ನಾನು ಹೇಳಲ್ಲ ಎಂದಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಫೈಟ್: ಶಾಂತಿ ಕಾಪಾಡಿಕೊಳ್ಳಲು ರಾಹುಲ್ ಗಾಂಧಿ ಸೂಚನೆ, ಮಾತುಕತೆಯ ಭರವಸೆ
/filters:format(webp)/newsfirstlive-kannada/media/media_files/2025/11/21/dk-shivakumar-4-2025-11-21-15-05-24.jpg)
ಕುಮಾರಸ್ವಾಮಿ ಅವರ ಈ ಮಾರ್ಮಿಕ ಹೇಳಿಕೆಯ ಹಿಂದೆ ಭಾರೀ ರಾಜಕೀಯ ಲೆಕ್ಕಾಚಾರವಿದೆ ಎಂದು ಅರ್ಥೈಸಲಾಗಿದೆ. ಹಾಗಾದರೆ ಮುಂದಿನ 6 ತಿಂಗಳಲ್ಲಿ ರಾಜ್ಯದ ಕಾಂಗ್ರೆಸ್​ ಸರ್ಕಾರಕ್ಕೆ ಸಂಕಷ್ಟ ಕಾದಿದೆಯಾ? ಸ್ಪಷ್ಟ ಬಹುಮತವಿದ್ದರೂ ಸರ್ಕಾರ ಪತನ ಆಗುತ್ತಾ? 2019 ರಲ್ಲಿ ತಮ್ಮ ಮೈತ್ರಿ ಸರ್ಕಾರ ಆದ ರೀತಿಯಲ್ಲೇ ಈಗಲೂ ಆಗಲಿದೆಯಾ ಎಂಬ ಚರ್ಚೆಗಳು ಶುರುವಾಗಿವೆ.
ಸಿದ್ದರಾಮಯ್ಯರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿ ಡಿಕೆಶಿಗೆ ಪಟ್ಟ ಕಟ್ಟಿದರೆ ಸಿದ್ದರಾಮಯ್ಯ ಬೆಂಬಲಿಗರು ಶಿವಕುಮಾರ್​ಗೆ ಬೆಂಬಲ ನೀಡಿಲ್ಲ. ಸಿದ್ದರಾಮಯ್ಯ ಬೆಂಬಲಿಗರೇ ಡಿಕೆಶಿ ಸರ್ಕಾರಕ್ಕೆ ಕಂಟಕ ಆಗಲಿದ್ದಾರೆ. ಇನ್ನೊಂದು ಕಡೆ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡದಿದ್ದರೆ ಡಿಕೆಶಿ ರಾಜಕೀಯ ತಂತ್ರಗಾರಿಕೆ ಮಾಡೋದು ಪಕ್ಕಾ ಆಗಿದೆ. ಆಗ ಡಿಕೆಶಿ ಬೆಂಬಲಿಗರು ಸಿದ್ದರಾಮಯ್ಯ ವಿರುದ್ಧ ರೆಬಲ್ ಆಗ್ತಾರೆ.
ಇದನ್ನೂ ಓದಿ:ತಿರುಪತಿಯಲ್ಲಿ 5 ವರ್ಷದ ಅವಧಿಯಲ್ಲಿ 20 ಕೋಟಿ ಲಡ್ಡು ಕಲಬೆರಕೆ : ಎಸ್‌ಐಟಿ ತನಿಖೆಯಿಂದ ಶಾಕಿಂಗ್ ಸತ್ಯ ಬಹಿರಂಗ
/filters:format(webp)/newsfirstlive-kannada/media/media_files/2025/11/23/siddaramaiah-mallikarjuna-kharge-2025-11-23-09-05-23.jpg)
ಸಿದ್ದರಾಮಯ್ಯಯಗೆ ಬೆಂಬಲ ನೀಡದೆ ಹೊರ ಹೋಗುತ್ತಾರೆ. ಅಥವಾ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡ್ತಾರೆ. ಇದರಿಂದ ಸರ್ಕಾರ ಪತನ ಆಗುತ್ತೆ ಎಂಬ ಲೆಕ್ಕಾಚಾರದಲ್ಲಿ ಹೆಚ್​​ಡಿಕೆ ಹೇಳಿದ್ದಾರೆ ಎನ್ನಲಾಗುತ್ತಿದೆ. 2019 ರಲ್ಲಿ ಕಾಂಗ್ರೆಸ್​ ಶಾಸಕರು ಬಿಜೆಪಿ ಸೇರಿದ ರೀತಿಯಲ್ಲಿ ಆಗಲಿದೆ ಅನ್ನೋದು ಕುಮಾರಸ್ವಾಮಿ ಅವರ ನಿಗೂಢ ಹೇಳಿಕೆ ಎನ್ನಲಾಗಿದೆ.
ನಿಗೂಢ ಹೇಳಿಕೆ ಮೂಲಕ ಕುಮಾರಸ್ವಾಮಿ ತಮ್ಮ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರಾ? ಮಧ್ಯಂತರ ಚುನಾವಣೆ ಬಂದರೂ ಪಕ್ಷ ರೆಡಿ ಇರಬೇಕು ಎಂದು ಸಂದೇಶವನ್ನು ಕುಮಾರಸ್ವಾಮಿ ರವಾನಿಸಿದರಾ ಎಂಬ ಪ್ರಶ್ನೆಯೂ ಕಾಡಿದೆ.
ಇದನ್ನೂ ಓದಿ:‘ಆದಷ್ಟು ಬೇಗ..’ ಖರ್ಗೆಗೆ ಸಿದ್ದರಾಮಯ್ಯ ಮಾಡಿದ ಮನವಿ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us