/newsfirstlive-kannada/media/post_attachments/wp-content/uploads/2025/07/MALLIKARJUN_KHARGE_RAHUL_GANDHI.jpg)
ರಾಜ್ಯ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ ಸದ್ದು ತೀವ್ರಗೊಳ್ಳುತ್ತಿದೆ. ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿನ ಬಣ ಬಡಿದಾಟ ಹೈಕಮಾಂಡ್‌ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಬಂದಿದ್ದು, ನಾಯಕರು ಖರ್ಗೆ ಭೇಟಿಯಾಗಿ ತಮ್ಮದೇ ದಾಳ ಉರುಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಎಐಸಿಸಿ ಅಧ್ಯಕ್ಷ ಖರ್ಗೆಯವರನ್ನು ಭೇಟಿಯಾಗಿ ನಾಯಕತ್ವ ಗೊಂದಲಕ್ಕೆ ಆದಷ್ಟು ಬೇಗ ತೆರೆ ಎಳೆಯುವಂತೆ ಮನವಿ ಮಾಡಿದ್ದಾರೆ ಎಂಬ ವರ್ತಮಾನ ಲಭ್ಯವಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಫೈಟ್: ಶಾಂತಿ ಕಾಪಾಡಿಕೊಳ್ಳಲು ರಾಹುಲ್ ಗಾಂಧಿ ಸೂಚನೆ, ಮಾತುಕತೆಯ ಭರವಸೆ
/filters:format(webp)/newsfirstlive-kannada/media/media_files/2025/11/23/siddaramaiah-mallikarjuna-kharge-2025-11-23-09-05-23.jpg)
ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ ಸಿಎಂ, ಖರ್ಗೆ ಜೊತೆ ಕ್ಲೋಸ್​ ಡೋರ್​ ಮೀಟಿಂಗ್​ ನಡೆಸಿದ್ರು.. ಒಂದೂವರೆ ತಾಸು ಸುದೀರ್ಘವಾಗಿ ಮಾತುಕತೆ ನಡೆಸಿದ ಸಿದ್ದು, ಕೆಲ ಶಾಸಕರ ದೆಹಲಿ ಭೇಟಿಯನ್ನು ಪ್ರಸ್ತಾಪಿಸಿ ಖರ್ಗೆ ಬಳಿ ಅಸಮಾಮಾಧಾನ ವ್ಯಕ್ತಪಡಿಸಿದ್ದಾರಂತೆ. ಈ ವೇಳೆ ಖರ್ಗೆ ಸಿಎಂಗೆ ಕೆಲವೊಂದು ಕಿವಿಮಾತು ಹೇಳಿದ್ದಾರೆ.
ಖರ್ಗೆ ಜೊತೆ ಮಾತು ಕತೆ..!
ಮಲ್ಲಿಕಾರ್ಜುನ ಖರ್ಗೆ: ಅನಗತ್ಯ ಗೊಂದಲಕ್ಕೆ ಅವಕಾಶ ಬೇಡ, ಡಿಕೆಶಿ ನೀವು ಇಬ್ಬರೂ ಸಮನಯ್ವತೆಯಿಂದ ಹೋಗಿ
ಸಿದ್ದರಾಮಯ್ಯ : ತಮ್ಮಿಂದ ಯಾವುದೇ ಗೊಂದಲ ಆಗಿಲ್ಲ, ಸಿಎಂ ಬದಲಾವಣೆ ಆಗಬೇಕೆಂದು ಕೆಲ ಶಾಸಕರು ಮಾತಾಡ್ತಿದ್ದಾರೆ. ಅದಕ್ಕಾಗಿಯೇ ದೆಹಲಿಗೆ ಹೋಗಿದ್ದೇವೆ ಎಂದು ಹೇಳಿದ್ದಾರೆ. ಇದರಿಂದ ಗೊಂದಲ ಸೃಷ್ಟಿಯಾಗಿದ್ದು, ಸರ್ಕಾರಕ್ಕೆ ಡ್ಯಾಮೇಜ್ ಆಗ್ತಿದೆ. ನಾಯಕತ್ವ ಗೊಂದಲಕ್ಕೆ ಆದಷ್ಟು ಬೇಗ ತೆರೆ ಎಳೆಯಿರಿ...
ಖರ್ಗೆ ಭೇಟಿ ವೇಳೆ ಸಿಎಂ ಸಿದ್ದರಾಮಯ್ಯ ಸಂಪುಟ ಪುನಾರಚನೆ ವಿಚಾರವನ್ನು ಪ್ರಸ್ತಾಪಿಸಿ, ಪುನಾರಚಣೆಗೆ ಅವಕಾಶ ನೀಡುವಂತೆ ಮತ್ತೆ ಕೇಳಿಕೊಂಡಿದ್ದಾರಂತೆ. ನವೆಂಬರ್​ 28 ರಂದು ರಾಹುಲ್ ಗಾಂಧಿ ದೆಹಲಿಗೆ ಬರಲಿದ್ದಾರೆ. ರಾಹುಲ್ ಗಾಂಧಿ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಜೆಡಿಎಸ್‌ಗೆ 25 ವರ್ಷ ಪೂರೈಸಿದ ಸಂಭ್ರಮ : ಸಿದ್ದರಾಮಯ್ಯರನ್ನು ಹಣಕಾಸು ಮಂತ್ರಿ ಮಾಡಿದ್ದು ನಾನು ಎಂದ ದೇವೇಗೌಡ
/filters:format(webp)/newsfirstlive-kannada/media/media_files/2025/10/27/cm-siddu-and-dks-watching-chair-2025-10-27-17-29-23.jpg)
ಖರ್ಗೆ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ಯಾವಾಗಲೇ ಕರೆಯಲಿ ದೆಹಲಿಗೆ ಹೋಗ್ತೇನೆ. ಹೈಕಮಾಂಡ್​​ ಏನೇ ತೀರ್ಮಾನಕೈಗೊಂಡ್ರು ಅದಕ್ಕೆ ಬದ್ಧ ಎಂದಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬಿಕ್ಕಟ್ಟು ತಾರಕಕ್ಕೇರಿರುವಾಗಲೇ ಡಿಸಿಎಂ ಡಿಕೆಶಿ ಸಹೋದರ ಮಾಡಿರುವ ಮಾರ್ಮಿಕ ಪೋಸ್ಟ್​​ ಸಂಚಲನ ಸೃಷ್ಟಿಸಿದೆ. ‘ಯಶಸ್ಸು ಒಂದು ಪ್ರಯಾಣ, ಗಮ್ಯ ಸ್ಥಾನವಲ್ಲ ಎಂದು ಬರೆದಿರುವ ಡಿ.ಕೆ.ಸುರೇಶ್​​ಮ ವಾಲಿಬಾಲ್​ ಸರ್ವ್​ ಮಾಡ್ತಿರುವ ಫೋಟೋವನ್ನು ಹಾಕಿದ್ದಾರೆ. ಈ ಪೋಸ್ಟ್​ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.
ಅದೇನೆ ಇರಲಿ.. ರಾಜ್ಯ ಕಾಂಗ್ರೆಸ್​ನಲ್ಲಿ ಪವರ್​​ ಫೈಟ್​​, ರಣರೋಚಕ ಹಂತದತ್ತ ಸಾಗುತ್ತಿದೆ. ಸದ್ಯಕ್ಕೆ ಹೈಕಮಾಂಡ್​​ ಸೈಲೆಂಟ್​ ನಡೆ ನವೆಂಬರ್​​ ಕ್ರಾಂತಿಯ ಸಸ್ಪೆನ್ಸ್​ ಥ್ರಿಲ್ಲರ್​ ರೀತಿ ಕಾಣಿಸ್ತಿದೆ.
ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್..​! ಡಿಸಿಎಂ ಕೊಟ್ಟ ಸಂದೇಶ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us