/newsfirstlive-kannada/media/media_files/2025/11/03/risha-gowda-2025-11-03-17-50-47.jpg)
ಬಿಗ್​ಬಾಸ್​ ಮನೆಯಿಂದ ರಿಷಾ ಗೌಡ ಅವರು ಆಟ ಮುಗಿಸಿ ಹೊರ ಬಂದಿದ್ದಾರೆ. ನಿನ್ನೆ ರಾತ್ರಿ ಪ್ರಸಾರವಾದ ‘ಸಂಡೆ ವಿತ್ ಬಾದ್​ ಶಾ ಸುದೀಪ್’ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ ರಿಷಾ ಔಟ್ ಎಂದು ಘೋಷಿಸಿದರು.
ವೈಲ್ಡ್ ಕಾರ್ಡ್​​ ಮೂಲಕ ಎಂಟ್ರಿ..!
ರಿಷಾ ಗೌಡ ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ 12ರ ಮನೆಗೆ ಎಂಟ್ರಿ ಕೊಟ್ಟಿದ್ದರು. ಬರುತ್ತಿದ್ದಂತೆಯೇ ಅಬ್ಬರಿಸಿ ತಾವೊಬ್ಬ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದು ತೋರಿಸಿದ್ದರು. ಬಂದ ಮೊದಲ ವಾರ ಗಿಲ್ಲಿ ಹಾಗೂ ಚಂದ್ರಪ್ರಭ ಜೊತೆ ತಮಾಷೆಗಳ ಮೂಲಕ ಕಾಲ ಕಳೆದಿದ್ದ ರಿಷಾ, ಬರುಬರುತ್ತ ಸಣ್ಣಪುಟ್ಟ ವಿಚಾರಕ್ಕೂ ಜೋರಾಗಿ ಕಿರುಚಾಡಲು ಶುರು ಮಾಡಿದ್ದರು. ಇದೇ ಅವರಿಗೆ ಮುಳ್ಳಾಗಿದೆ.
ರಿಷಾ ಹಾಗೂ ಗಿಲ್ಲಿ ನಡುವೆ ಬಕೆಟ್ ವಿಷಯಕ್ಕೆ ಗಲಾಟೆ ಆಗಿದೆ. ಬಕೆಟ್ ಕೊಡದಿದ್ದಕ್ಕೆ ರಿಷಾ ಬಟ್ಟೆಯನ್ನು ಗಿಲ್ಲಿ ಬಾತ್‌ರೂಮ್ ಬಳಿ ತಂದು ಹಾಕಿದ್ದರು. ಇದಕ್ಕೆ ಸಿಟ್ಟಿಗೆದ್ದ ರಿಷಾ ಗಿಲ್ಲಿಗೆ ಹೊಡೆದು ಸುದ್ದಿಯಲ್ಲಿದ್ದರು. ಆಗಲೇ ಅವರನ್ನು ಮನೆಯಿಂದ ಆಚೆ ಕಳುಹಿಸಬೇಕು ಎಂಬ ಒತ್ತಡ ಜೋರಾಗಿತ್ತು.
ಇದನ್ನೂ ಓದಿ: ಮತ್ತೆ ಮಂಜಣ್ಣ ಗ್ಯಾಂಗ್ ಸೇರಿದ ಮೋಕ್ಷಿ.. ವಿಶೇಷತೆ ಏನು ಗೊತ್ತಾ..? Photos
ಇನ್ನು ಮನೆಯಿಂದ ಹೊರ ಹೋಗಲು ಒಟ್ಟು 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಅದರಂತೆ ಶನಿವಾರದ ಎಪಿಸೋಡ್‌ನಲ್ಲಿ ರಕ್ಷಿತಾ, ಸ್ಪಂದನಾ ಹಾಗೂ ಅಭಿಷೇಕ್ ಸೇಫ್ ಆಗಿದ್ದರು. ನಿನ್ನೆಯ ಎಪಿಸೋಡ್‌ನಲ್ಲಿ ಸುದೀಪ್, ಮೊದಲು ಮಾಳು ಹಾಗೂ ಸೂರಜ್ ಅವರನ್ನು ಸೇಫ್ ಮಾಡಿದರು.
ಬಳಿಕ ಸುದೀಪ್ ಟಾಸ್ಕ್‌ವೊಂದನ್ನು ನೀಡಿದರು. ನೀಡಿದ್ದ ಕೇಕ್‌ನ್ನು ಕೈ ಉಪಯೋಗಿಸದೇ ತಿಂದಾಗ ಕೊನೆಗೆ ಯಾರು ಸೇಫ್ ಎಂದು ತಿಳಿಯುತ್ತದೆ ಎಂದು ತಿಳಿಸಿದ್ದರು. ಅಲ್ಲಿ ಅಶ್ವಿನಿ ಸೇಫ್ ಆದರು. ನಂತರ ಜಾಹ್ನವಿ ಸೇಫ್ ಆದರು. ಕೊನೆಯಲ್ಲಿ ರಿಷಾ ಹಾಗೂ ಧ್ರುವಂತ್ ಡೇಂಜರ್ ಜೋನ್‌ನಲ್ಲಿದ್ದರು. ಧ್ರುವಂತ್ ಸೇಫ್ ಆಗಿ ರಿಷಾ ಔಟ್ ಆದರು.
ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us