/newsfirstlive-kannada/media/media_files/2025/11/22/ugram-manjanna-2-2025-11-22-15-41-18.jpg)
ಬಿಗ್​ ಬಾಸ್​ ಸೀಸನ್​ 11ರ ಗೆಳಯ-ಗೆಳತಿಯರನ್ನ ಮರೆಯೋಕೆ ಸಾಧ್ಯನೇ ಇಲ್ಲ. ‘ಆಕಾಶದಲ್ಲಿ ನೀ ದೀಪವಾದೆ’ ಸಾಂಗ್​ ಕೇಳಿದ ತಕ್ಷಣ ಥಟ್ ಅಂತ ಇವ್ರ ಮುಖ ಕಣ್ಮುಂದೆ ಬರುತ್ತೆ. ಅಷ್ಟರ ಮಟ್ಟಿಗೆ ಇವ್ರ ಸ್ನೇಹ ಜನಪ್ರಿಯತೆ ಪಡೆದಿತ್ತು. ಅವರೇ ಮೋಕ್ಷಿತಾ, ಗೌತಮಿ, ಮಂಜಣ್ಣ. ​
ಇದನ್ನೂ ಓದಿ: ಅಶ್ವಿನಿ ಗೌಡ, ರಘು, ಗಿಲ್ಲಿ, ಅಭಿಷೇಕ್! ಕಿಚ್ಚನ ಕ್ಲಾಸ್ ಯಾರಿಗೆ..?
/filters:format(webp)/newsfirstlive-kannada/media/media_files/2025/11/22/ugram-manjanna-3-2025-11-22-15-43-37.jpg)
ಇವ್ರ ಗೆಳತನ, ಗಲಾಟೆ ಆ ಸೀಸನ್​ನಲ್ಲಿ ಹೈಲೈಟ್​. ಶೋ ಮುಕ್ತಾಯದ ನಂತರ ಮೂವರು ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಈ ಅಂತರ ದೂರವಾದಂತಿದೆ. ಮಂಜಣ್ಣನ ಮದುವೆ ಸಂಭ್ರಮ ಮೂವರು ಸ್ನೇಹಿತರನ್ನ ಒಂದೇ ಫ್ರೇಮ್​ನಲ್ಲಿ ತಂದಿದೆ.
/filters:format(webp)/newsfirstlive-kannada/media/media_files/2025/11/22/ugram-manjanna-1-2025-11-22-15-43-51.jpg)
ಉಗ್ರಂ ಮಂಜು ನಿಶ್ಚಿತಾರ್ಥ ಕಳೆದವಾರ ಜರುಗಿತ್ತು. ಈ ಸಂಭ್ರಮದಲ್ಲಿ ಮೋಕ್ಷಿತಾ ಆಗ್ಲಿ. ಗೌತಮಿ ಆಗ್ಲಿ ಕಾಣಿಸಿಕೊಂಡಿರಲಿಲ್ಲ. ನಂತರ ಕೆಫೆ ಒಂದರಲ್ಲಿ ಮಂಜು ಭಾವಿ ಪತ್ನಿಯನ್ನ ಭೇಟಿ ಮಾಡಿದ್ರು ಗೌತಮಿ ದಂಪತಿ. ಈಗ ಮೋಕ್ಷಿತಾ ಕೂಡ ಗ್ರೂಪ್​ನ ಜಾಯಿನ್​ ಆಗಿದ್ದಾರೆ. ಗೌತಮಿ ಆರಾಧ್ಯ ದೈವ ಮಂಗಳೂರಿನ ವನದುರ್ಗಮ್ಮ ದೇವಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ.
/filters:format(webp)/newsfirstlive-kannada/media/media_files/2025/11/22/ugram-manjanna-2025-11-22-15-44-05.jpg)
ಮಂಜಣ್ಣನ ಭಾವಿ ಪತ್ನಿ ಸಂಧ್ಯಾ ಈ ವಿಶೇಷ ಕ್ಷಣಗಳನ್ನ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಹಂಚ್ಕೊಂಡಿದ್ದು, ಮೂವರು ಸ್ನೇಹಿತರನ್ನ ಒಟ್ಟಿಗೆ ನೋಡಿದ ಫ್ಯಾನ್ಸ್​ ಖುಷ್ ಆಗಿದ್ದಾರೆ. ಹೀಗೆ ಸದಾ ಜೊತೆ ಜೊತೆಯಾಗಿಯಿರಿ ಎಂದು ಹಾರೈಸುತ್ತಿದ್ದಾರೆ.
ಇದನ್ನೂ ಓದಿ: ‘ಇವತ್ತು ಮುಖದ ಮೇಲೆ ಹೊಡೆದಂಗೆ ಹೇಳ್ತೀನಿ..’ ಊಟ ಬಿಟ್ಟಿದ್ಕೆ ಸುದೀಪ್ ಹಿಗ್ಗಾಮುಗ್ಗಾ ಕ್ಲಾಸ್​..! VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us