/newsfirstlive-kannada/media/media_files/2025/11/22/ashwini-gowda-8-2025-11-22-14-41-17.jpg)
ಬಿಗ್​ಬಾಸ್ ಶೋನ ಇವತ್ತಿನ ‘ವಾರದ ಕತೆ ಸುದೀಪ್ ಜೊತೆ’ಯ ಸಂಚಿಕೆಯಲ್ಲಿ ಅಶ್ವಿನಿ ಗೌಡ ಅವರಿಗೆ ಸುದೀಪ್ ಸಖತ್ ಕ್ಲಾಸ್ ತೆಗೆದುಕೊಂಡಂತೆ ಕಾಣ್ತಿದೆ. ಎಲ್ಲಾ ಸ್ಪರ್ಧಿಗಳು ತಮ್ಮನ್ನ ‘ಅಶ್ವಿನಿ ಅವರೇ..’ ಎಂದು ಮಾತನ್ನಾಡಿಸಬೇಕೆಂಬ ಹುಕ್ಕುಂಗೆ ಸುದೀಪ್ ಪಿಕ್ಚರ್ ಬಿಡಿಸಿದ್ದಾರೆ.
ಮೊದಲು ನೀವು ಎಲ್ಲರಿಗೂ ಗೌರವ ಕೊಟ್ಟು, ಗೌರವ ತೆಗೆದುಕೊಳ್ಳಿ ಎಂದು ಬುದ್ಧಿ ಹೇಳಿದ್ದಾರೆ. ಅದರ ಜೊತೆಗೆ ಮನೆಯಲ್ಲಿ ಊಟ ಬಿಟ್ಟಿರೋದಕ್ಕೂ ಸರಿಯಾಗಿ ಉಗಿದಿದ್ದಾರೆ. ಇದೀಗ ಕಲರ್ಸ್ ಕನ್ನಡ ಮತ್ತೊಂದು ಪ್ರೊಮೋ ಶೇರ್ ಮಾಡಿದ್ದು, ಅದರಲ್ಲಿ ಊಟ ಬಿಟ್ಟಿರೋದಕ್ಕೆ ಸುದೀಪ್ ತುಂಬಾನೇ ಗರಂ ಆಗಿದ್ದಾರೆ.
ಏನಂದ್ರು ಸುದೀಪ್​..?
ಅಶ್ವಿನಿ ಅವರೇ ಒಂದು ಟಾಸ್ಕ್​ ಬರುತ್ತೆ. ನೀವು ಉಸ್ತುವಾರಿಯಾಗಿ ಸರಿಯಾಗಿ ನಿಭಾಯಿಸಿದ್ರಾ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರಘು, ಉಸ್ತುವಾರಿ ಅಂದರೆನೇ ಗೊತ್ತಿರಲಿಲ್ಲ ಎಂದು ಟಾಂಟ್ ನೀಡಿದ್ದಾರೆ. ಅದಾದ ಬಳಿಕ ಸುದೀಪ್ ಅಶ್ವಿನಿ ಅವರತ್ತ ಬಂದಿದ್ದಾರೆ.
ನಿಮಗೆ ಕಾಣಿಸಲಿಲ್ವಾ? ಅಲ್ಲಿ ರೂಲ್ಸ್ ಬುಕ್ ಇರಲಿಲ್ವಾ? ನಿಮ್ಮ ಈ ಒಂದು ಅಂಡರ್​​ಸ್ಟ್ಯಾಂಡ್​ ಲೇವಲ್​​ಗೆ ನಾನು ಚಪ್ಪಾಳೆ ತಟ್ಟಲಾ? ಸೆಲ್ಯೂಟ್ ಹೊಡೆಯಿಲಾ? ಇನ್ನೊಂದು ಕಡೆ ಊಟ ಬಿಟ್ಟು ಸ್ವಾರಿ ಕೇಳಿಸಿಕೊಳ್ಳೋದು. ಊಟ ಬಿಟ್ಟು ಕೂತುಕೊಳ್ಳೋದು ಒಂದು ಎಮೋಷನಲ್ ಬ್ಲ್ಯಾಕ್​ಮೇಲ್ ಆಗಿಬಿಡುತ್ತೆ. ನಂಗೆ ಅಲ್ಲಿ ಯಾರು ಊಟ ಬಿಟ್ಟರು ಅಂತಾನೇ ಅರ್ಥ ಆಗಿಲ್ಲ. ಇವತ್ತು ನಾನು ಎಲ್ಲವನ್ನೂ ಮಕದ ಮೇಲೆ ಹೊಡೆದಂಗೆ ಹೇಳ್ತೀನಿ ಎಂದು ಗರಂ ಆಗಿದ್ದಾರೆ. ಹೀಗಾಗಿ ಇವತ್ತಿನ ಎಪಿಸೋಡ್​ ತುಂಬಾನೆ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ​​ಅಶ್ವಿನಿ ಗೌಡ ‘ಏಕವಚನ ಹೈಡ್ರಾಮಾ’ಕ್ಕೆ ಕಿಚ್ಚ ಕ್ಲಾಸ್​..! ವಿಡಿಯೋ ಇಲ್ಲಿದೆ..
ಎಲ್ಲಾ ಓಕೆ… ಊಟ ಬಿಟ್ಟಿದ್ದು ಯಾಕೆ?
— Colors Kannada (@ColorsKannada) November 22, 2025
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/UZxiRC4iUm
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us