Advertisment

ಅಶ್ವಿನಿ ಗೌಡ ‘ಏಕವಚನ ಹೈಡ್ರಾಮಾ’ಕ್ಕೆ ಕಿಚ್ಚ ಕ್ಲಾಸ್​..! ವಿಡಿಯೋ ಇಲ್ಲಿದೆ..

ಕಿಚ್ಚ ಸುದೀಪ್ ಅವರು ಮತ್ತೆ ಅಶ್ವಿನಿ ಗೌಡ ಅವರಿಗೆ ಕಿವಿ ಮಾತು ಹೇಳಿದ್ದಾರೆ. ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಈ ವಾರ ಮನೆಯಲ್ಲಿ ನಡೆದ ಹೈಡ್ರಾಮಾಗಳ ಬಗ್ಗೆ ಸುದೀಪ್ ಚರ್ಚೆ ಮಾಡಿದ್ದಾರೆ.

author-image
Ganesh Kerekuli
Ashwini Gowda (6)
Advertisment

ಬಿಗ್​ಬಾಸ್​ ಮನೆಯಲ್ಲಿ ಅಶ್ವಿನಿ ಗೌಡಗೆ ಕಿಚ್ಚನಿಂದ ಬಿಸಿಬಿಸಿ ಕಜ್ಜಾಯ ಸಿಕ್ಕಿದೆ. ಅಶ್ವಿನಿ ಗೌಡ ಅವರ ‘ಏಕವಚನ ಹೈಡ್ರಾಮಾ’ಕ್ಕೆ ಸುದೀಪ್ ಸಖತ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದು, ಇವತ್ತಿನ ಎಪಿಸೋಡ್​​ನ ಮೇಲೆ ವೀಕ್ಷಕರ ಎಕ್ಸೈಟ್​ಮೆಂಟ್ ಮತ್ತಷ್ಟು ಹೆಚ್ಚುವಂತೆ ಮಾಡಿದೆ. 

Advertisment

ಕಿಚ್ಚ ಹೇಳಿದ್ದೇನು..? 

‘ಏಕವಚನ, ಏಕವಚನ, ಏಕವಚನ..’ ಎಂದು ಸುದೀಪ್ ಕೇಳಿದ್ದಾರೆ. ಅದಕ್ಕೆ ಅಶ್ವಿನಿ ಗೌಡ, ‘ಒಬ್ಬ ವ್ಯಕ್ತಿಯಾಗಿ ಎಷ್ಟು ತೇಜೋವಧೆ ಮಾಡಬೇಕೋ ಅಷ್ಟು ಮಾಡುತ್ತಿದ್ದರು’ ಎಂದು ರಾಗ ಏಳೆಯುತ್ತಾರೆ. ಆಗ ಕೋಪಿಸಿಕೊಳ್ಳುವ ಕಿಚ್ಚ ಸುದೀಪ್, ‘ನಿಮಗೆ ಹೋಗಿ, ಬನ್ನಿ ಅನಿಸಿಕೊಳ್ಳಬೇಕು ಅಂದರೆ ನೀವು ಪ್ರತಿಯೊಬ್ಬ.. ಪ್ರತಿ ಚಿಕ್ಕ ಮಗುವಿಗೂ ಹೋಗಿ, ಬನ್ನಿ ಅನ್ನೋದನ್ನು ಕಲಿಯಿರಿ’. 

ಇದನ್ನೂ ಓದಿ: ಕಿಚ್ಚ ಸುದೀಪ್, ಅಶ್ವಿನಿ ಗೌಡ ವಿರುದ್ಧ ದೂರು ದಾಖಲು..!

‘ಮಾತು ಎತ್ತಿದ್ರೆ ಯಾವ ಹುಡುಗಿಗೂ ಏಕವಚನದಲ್ಲಿ ಮಾತನ್ನಾಡಬೇಡಿ.. ಯಾರು ಏನು ಮಾತಾಡುತ್ತಿದ್ದಾರೆ ಇಲ್ಲಿ? ಯಾಱರು ಹೆಣ್ಮಕ್ಕಳು ಅಶ್ವಿನಿ ಗೌಡ ಕೈಗೆ ನಿಮ್ಮ ಮಾನ, ಮರ್ಯಾದೆ ಕೊಟ್ಟು ಕೂತಿದ್ದೀರಿ ಇಲ್ಲಿ? ಕೈ ಮೇಲೆ ಎತ್ತಿ.. ಓ ಇಷ್ಟೊಂದು ಕೈಗಳು.. ಅಂಡ್ ಅಶ್ವಿನಿ ಅವರೇ ಈ ಮನೆಯಲ್ಲಿ ವುಮೆನ್ ಕಾರ್ಡ್ ಬೇಡ’ ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಈ ವಾರ ಅಶ್ವಿನಿ ಗೌಡ ಸ್ಪರ್ಧಿಗಳು ತಮಗೆ ಮರ್ಯಾದೆ ಕೊಡ್ತಿಲ್ಲ ಎಂದು ದೊಡ್ಡ ಹೈಡ್ರಾಮಾ ಸೃಷ್ಟಿಸಿದ್ದರು. ಆರಂಭದಲ್ಲಿ ಗಿಲ್ಲಿ ನಟನ ಜೊತೆ ಜಗಳಕ್ಕೆ ಇಳಿದು ಕಣ್ಣೀರು ಇಟ್ಟಿದ್ದರು. ನಂತರ ರಘು ಜೊತೆ ಕಿತ್ತಾಡಿಕೊಂಡು ಕಣ್ಣೀರಿಟ್ಟು, ಬಿಗ್​ಬಾಸ್​ ಬಳಿ ಡೋರ್ ಓಪನ್ ಮಾಡುವಂತೆ ತಿಳಿಸಿದ್ದಾರೆ. ಅದ್ಯಾವುದಕ್ಕೂ ಬಿಗ್​ಬಾಸ್ ಕರಗದಿದ್ದಾಗ, ಉಪವಾಸ ಸತ್ಯಾಗ್ರಹ ಮಾಡಿದ್ದರು.  

Advertisment

ಇದನ್ನೂ ಓದಿ:ಅಶ್ವಿನಿ ಗೌಡ, ರಘು, ಗಿಲ್ಲಿ, ಅಭಿಷೇಕ್! ಕಿಚ್ಚನ ಕ್ಲಾಸ್ ಯಾರಿಗೆ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

kiccha sudeep Bigg Boss Kannada 12 Bigg boss Ashwini Gowda
Advertisment
Advertisment
Advertisment