/newsfirstlive-kannada/media/media_files/2025/10/08/health_walk-2025-10-08-17-20-35.jpg)
ಆರೋಗ್ಯ ಎಂದರೆ ಯಾವಾಗಲೂ ಒಳ್ಳೆಯ ಆಹಾರ, ಹಣ್ಣು, ತಿನಿಸು ಹಾಗೂ ತರಕಾರಿಗಳನ್ನು ಸೇವನೆ ಮಾಡಬೇಕು. ಆದರೆ ಇಂತಹವುಗಳನ್ನೆಲ್ಲ ತಿಂದ ಮೇಲೆ ಜೀರ್ಣಿಸಿಕೊಳ್ಳಬೇಕು ಅಲ್ವಾ. ಹಾಗಾದರೆ ಊಟ, ತಿಂಡಿ ಆದ್ಮೇಲೆ ಸ್ವಲ್ಪ ಸಮಯ ನಡೆಯಬೇಕು. ನಡೆಯೋದು ಎಂದರೆ ನಾವೆಲ್ಲಾ ಯಾವಾಗಲೂ ಮುಂದಕ್ಕೆ ನಡೆಯುತ್ತೇವೆ. ಮುಂದಕ್ಕೆ ನಡೆಯೋದು ಇದ್ದೇ ಇದೆ. ಹಿಂದಕ್ಕೆ ನಡೆದು ಈ ಆರೋಗ್ಯದ ಫಲ ಪಡೆಯಿರಿ.
ಊಟ ಆದ್ಮೇಲೆ ಅರ್ಧಗಂಟೆ ವಾಕಿಂಗ್ ಮಾಡಿದರೆ ನಾವು ತಿಂದಂತಹ ಆಹಾರ ಜೀರ್ಣವಾಗುತ್ತೆ. ಹೊಟ್ಟೆಗೆ ಯಾವುದೇ ಸಮಸ್ಯೆ ಇಲ್ಲ. ಮಲಬದ್ಧತೆ ಸಮಸ್ಯೆ ದೂರವಾಗುತ್ತವೆ. ಆರೋಗ್ಯದ ಕಾಳಜಿ ಎಲ್ಲರಲ್ಲೂ ಇರಬೇಕು ಎಂದು ಈ ಬಗ್ಗೆ ವೈದ್ಯರು ಸಲಹೆಗಳನ್ನು ನೀಡುತ್ತಿರುತ್ತಾರೆ. ದಿನಕ್ಕೆ ಸಾವಿರ ಹೆಜ್ಜೆಗಳನ್ನು ನಡೆಯಬೇಕು ಇಲ್ಲದಿದ್ದರೇ ವಾಕಿಂಗ್ ಮಾಡುವ ರೂಢಿ ಇಟ್ಟುಕೊಂಡಿರಬೇಕು.
ಮನುಷ್ಯ ಹಿಂದಕ್ಕೆ ನಡೆದರೆ ಏನು ಉಪಯೋಗಗಳು ಇವೆ?
ಹಿಂದಕ್ಕೆ ನಡೆಯುವುದರಿಂದ ಬೆನ್ನು ಮೂಳೆ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ಸೊಂಟದ ಸ್ನಾಯುಗಳು, ಬೆನ್ನು ಅನ್ನು ಬಲಪಡಿಸುತ್ತದೆ. ಬೆನ್ನು ನೋವಿನಿಂದ ಬಳಲುತ್ತಿರುವವರು ಆದಷ್ಟು ಹಿಂದಕ್ಕೆ ನಡೆದರೆ ಉಪಯೋಗಗಳು ಇವೆ.
ಕಂಪ್ಯೂಟರ್​, ಮೊಬೈಲ್ ಯುಗವಾಗಿದ್ದರಿಂದ ಸಾಕಷ್ಟು ಜನರು ಕುಳಿತಲ್ಲೇ ಗಂಟೆ.. ಗಂಟೆಗಳಷ್ಟು ಕೆಲಸ ಮಾಡುತ್ತಾರೆ. ಇದರಿಂದ ಬೆನ್ನು ನೋವು ಬರುವುದು ಸಾಮಾನ್ಯವಾಗಿದೆ. ಇದಕ್ಕೆ ಮದ್ದು ಎಂದರೆ ನಿತ್ಯ ನಾವು 15 ನಿಮಿಷವಾದರೂ ಹಿಂದಕ್ಕೆ ನಡೆದರೆ ಉತ್ತಮ.
ಕುಳಿತಲ್ಲೇ ಸಾಕಷ್ಟು ಕೆಲಸ ಮಾಡಿ ಹಣ ಸಂಪಾದಿಸುವುದರಿಂದ ಈ ಹಣಕ್ಕೆ ತಕ್ಕನಾಗೆ ಆನ್​ಲೈನ್​ನಲ್ಲಿ ಆರ್ಡರ್​ ಮಾಡಿಕೊಂಡು ಊಟ, ತಿಂಡಿ ತಿನ್ನುತ್ತೇವೆ. ಇದು ಜೀರ್ಣಿಸಿಕೊಳ್ಳಲು ಕೆಲವೊಮ್ಮೆ ವ್ಯಾಯಾಮ ಮಾಡಲು ಸಮಯ ಸಿಗಲ್ಲ. ಆದರೆ ಪ್ರತಿದಿನ ವಾಕಿಂಗ್ ಅಂತೂ ಮಾಡಲೇ ಬೇಕು.
ಪ್ರತಿದಿನ ಬೈಕ್, ಕಾರು ಅನ್ನೇ ಬಳಸುವುದರಿಂದ ಆರೋಗ್ಯದ ಮೇಲೆ ಇನ್ನಷ್ಟು ಪರಿಣಾಮಗಳು ಬೀರುತ್ತವೆ. ಮೈದಾನದ ಕಡೆಗೆ, ಮಕ್ಕಳ ಪ್ಲೇಗ್ರೌಂಡ್​ ಕಡೆಗೆ ಕರೆದುಕೊಂಡು ಹೋಗುವಾಗ ನಡೆದು ಹೋಗಿ. ಉಸಿರಾಟ ಸುಧಾರಿಸುತ್ತದೆ. ಕಾಲುಗಳು ಚಲನವಲನಗಳು ಆಗುತ್ತವೆ.
ಹಿಂದಕ್ಕೆ ನಡೆಯುವುದನ್ನು ನಿಮ್ಮ ದಿನಚರಿಯಲ್ಲಿ ಅಭ್ಯಾಸ ಮಾಡಿಕೊಂಡರೇ ಒಳ್ಳೆಯದು. ಇದರಿಂದ ಆರೋಗ್ಯ ಸುಧಾರಣೆ ಕಾಣುತ್ತದೆ. ದೇಹಕ್ಕೆ ಅದ್ಭುತ ಪ್ರಯೋಜನಗಳು ಲಭ್ಯವಾಗುತ್ತವೆ. ಹಾಗಾದರೆ ದಿನಕ್ಕೆ ಎಷ್ಟು ಸಮಯ ನಡೆಯಬೇಕು ಎನ್ನುವುದು ನಿಮ್ಮ ಪ್ರಶ್ನೆ ಆಗಿದ್ರೆ ನಿತ್ಯ 10 ನಿಮಿಷದಿಂದ ಆರಂಭಿಸಿ, ನಿಮಗೆ ಬೇಕಾದರೆ ಸಮಯ ಹೆಚ್ಚಿಸುತ್ತ ಹೋಗಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ