/newsfirstlive-kannada/media/media_files/2025/09/14/water_glass_new-2025-09-14-19-17-48.jpg)
ನೀರು.. ಭೂಮಿ ಮೇಲಿನ ಎಲ್ಲ ಜೀವಿಗಳಿಗೂ ಅಗತ್ಯವಾಗಿ ಬೇಕೇ ಬೇಕು. ನೀರು ಕುಡಿಯದಿದ್ದರೇ ಜೀವ ಇರುವ ಯಾವುದೇ ಪ್ರಾಣಿ ಮರಣಿಸುವುದು ಖಚಿತ. ಏಕೆಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ನೀರು ಒದಗಿಸುತ್ತದೆ. ಜೊತೆಗೆ ದೇಹದಲ್ಲಿರುವ ಅನೇಕ ರೀತಿಯಾದ ಕಲ್ಮಶಗಳನ್ನು ಹೊರಗೆ ಹಾಕುತ್ತದೆ. ಅದೇ ರೀತಿ ಕಡಿಮೆ ನೀರು ಕುಡಿದರೂ ಮಾನವನ ದೇಹಕ್ಕೆ ಹಾನಿ ಆಗೋದು ಪಕ್ಕಾ.. ಹಾಗೇ ಹೆಚ್ಚು ನೀರು ಕುಡಿದರೂ ನಮ್ಮ ದೇಹ ಸಮಸ್ಯೆಗೆ ಸಿಲುಕುವುದು ಅಷ್ಟೇ ಗ್ಯಾರಂಟಿ ಆಗಿದೆ.
ಶಾಲೆಯಿಂದ ಈವರೆಗೂ ದಿನಕ್ಕೆ ಏಳರಿಂದ ಎಂಟು ಗ್ಲಾಸ್ ನೀರು ಕುಡಿಯಬೇಕು ಎನ್ನುವುದನ್ನ ಕೇಳುತ್ತಲೇ ಬಂದಿದ್ದೇವೆ. ನೀರು ಕುಡಿಯುವುದರಿಂದ ನಮಗೆ ಸಾಕಷ್ಟು ಪ್ರಯೋಜನಾಗಳಿವೆ. ಜೀರ್ಣಕ್ರಿಯೆಗೆ ನೀರು ಬೇಕೆ ಬೇಕು. ದೇಹವನ್ನು ತೇವಾಂಶವಾಗಿಡಲು ನೀರು ಬೇಕು. ಮಲಬದ್ಧತೆ ನಿವಾರಣೆಗೆ ನೀರು ಕುಡಿಯಬೇಕು. ಆದರೆ ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟೇ ಸೇವನೆ ಮಾಡಬೇಕು. ನೀವು ಹೆಚ್ಚಿನ ನೀರು ಕುಡಿಯಬೇಕು ಎಂದರೆ ವೈದ್ಯರ ಸಲಹೆ ಪಡೆಯಬೇಕು.
ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣದ ಅಂಶ ಇರುವ ನೀರು ಕುಡಿಯುವುದರಿಂದ ಸಮಸ್ಯೆ ಉಂಟಾಗುತ್ತದೆ. ಇಂತಹ ನೀರನ್ನು ಅತಿಯಾಗಿ ಕುಡಿಯುವುದರಿಂದ ನಮ್ಮ ದೇಹದ ಮೇಲೆ ಅಡ್ಡಪರಿಣಾಮಗಳು ಉಂಟಾಗುತ್ತವೆ. ಸಾಮಾನ್ಯ ನೀರಿನಂತೆ ಇದ್ದರೂ ಕಬ್ಬಿಣ ಅಂಶ ನೀರು ದೇಹಕ್ಕ ಮಾರಕವಾಗಿರಲಿದೆ. ಅತಿಯಾದ ನೀರು ನಮ್ಮ ದೇಹದಲ್ಲಿ ಕಿಡ್ನಿ ಸಮಸ್ಯೆ ಉಂಟು ಮಾಡುತ್ತದೆ. ಹೆಚ್ಚಿನ ನೀರು ಅರ್ಜಿನೈನ್ ವಾಸೊಪ್ರೆಸಿಸ್ ನ ಪ್ಲಾಸ್ಮ (Plasma arginine vasopressin (AVP) ಮಟ್ಟವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕಿಡ್ನಿಯನ್ನ ಹಾನಿ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಅಪ್ಪಿ ತಪ್ಪಿಯೂ ಈ ತರಕಾರಿಗಳನ್ನ ಹಸಿ..ಹಸಿಯಾಗಿ ತಿನ್ನಲೇಬೇಡಿ.. ಯಾಕೆ ಗೊತ್ತಾ?
ನೀವು ಅಧಿಕ ನೀರು ಕುಡಿಯುತ್ತಿದ್ದರೇ ಹೃದಯ ವೈಫಲ್ಯವೂ ಆಗಬಹುದು. ಹೇಗೆಂದರೆ ದೇಹದೊಳಗೆ ನೀರು ರಕ್ತದ ಪ್ರಮಾಣವನ್ನು ಹೆಚ್ಚಿಸಬಹುದು. ಇದೇ ರಕ್ತವು ರಕ್ತನಾಳಗಳು ಹಾಗೂ ಹೃದಯದ ಮೇಲೆ ಬೇಡದೇ ಇರುವ ಒತ್ತಡ ಹಾಕುತ್ತವೆ. ಈ ಒತ್ತಡದಿಂದ ಹಲವಾರು ತೊಂದರೆಗಳು ನಾವು ಎದುರಿಸಬೇಕಾಗುತ್ತದೆ.
ಹೆಚ್ಚು ಜಲಸಂಚಯನದಿಂದ ದೇಹದಲ್ಲಿ ಸೋಡಿಯಂ ಮಟ್ಟವು ಇಳಿಕೆಯಾದಾಗ ಆಸ್ಮೋಸಿಸ್ ಪ್ರಕ್ರಿಯೆಯ ಮೂಲಕ ಜೀವಕೋಶಗಳಿಗೆ ನೀರು ಸೇರುತ್ತದೆ. ಇದೇ ಕೋಶಗಳ ಊದಿಕೊಳ್ಳುವಿಕೆಗೆ ಕಾರಣ ಆಗುತ್ತದೆ. ಇದು ಸ್ನಾಯು ಅಂಗಾಂಶಗಳಿಗೆ, ಮೆದುಳಿಗೆ ಹಾನಿ ಮಾಡುತ್ತದೆ. ರಕ್ತದಲ್ಲಿ ಸೋಡಿಯಂ ಕಡಿಮೆ ಇರುವುದರಿಂದ ಮೆದುಳಿನ ಕೋಶಗಳು ಊದಿಕೊಳ್ಳಬಹುದು. ಇದರಿಂದ ಮಾತು, ದಿಗ್ಬ್ರಮೆ ಮತ್ತು ವಾಕಿಂಗ್ನಲ್ಲಿ ಅಸ್ಥಿರತೆ ಕಳೆದುಕೊಳ್ಳಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ