newsfirstkannada.com

ಕೊರೊನಾಗೂ ಹೃದಯಾಘಾತಕ್ಕೂ ನೇರ ಸಂಬಂಧ ಇದ್ಯಾ..? ಈ ಬಗ್ಗೆ ಡಾ.ಸಿ.ಎನ್​ ಮಂಜುನಾಥ್ ಏನಂದ್ರು?

Share :

31-10-2023

    ಕೋವಿಡ್​ಗೂ ದಿಢೀರ್​​​ ಸಾವುಗಳಿಗೂ ಇದೆಯಂತೆ ಸ್ಪಷ್ಟ ಸಂಬಂಧ!

    ಇತ್ತೀಚೆಗೆ ಹಾರ್ಟ್​ ಅಟ್ಯಾಕ್​ ಹೆಚ್ಚಾಗಲು ಕೋವಿಡ್ 19​​​​ ಕಾರಣವೇ?

    ಅಡ್ಡ ಪರಿಣಾಮಗಳಿಂದ ಆತಂಕ ಶುರು ಆರೋಗ್ಯ ಸಚಿವರ ವಾರ್ನಿಂಗ್​

ಬೆಂಗಳೂರು: ಕೋವಿಡ್ 19 ಸೋಂಕಿಗೆ ತುತ್ತಾಗಿ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಹೃದಯಾಘಾತ ಹೆಚ್ಚಾಗುತ್ತಿದೆ. ಹೀಗಾಗಿ ಹೆಚ್ಚು ಪರಿಶ್ರಮದ ಕೆಲಸ ಸದ್ಯಕ್ಕಂತೂ ಮಾಡಬೇಡಿ. ಕಠಿಣ ಪರಿಶ್ರಮದ ವ್ಯಾಯಾಮಗಳನ್ನು ಕೂಡ ಮಾಡಬೇಡಿ. ಮುಂದಿನ 1 ರಿಂದ 2 ವರ್ಷದವರೆಗೆ ಕಠಿಣ ಕೆಲಸದಿಂದ ದೂರವಿರಿ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸಲಹೆ ನೀಡಿದ್ದರು.

ಇದನ್ನು ಓದಿ: ಕೊನೆಗೂ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ವರ್ತೂರು ಸಂತೋಷ್​​; ಹಳ್ಳಿಕಾರ್ ಹೈದನ ಖದರ್ ಈಗ ಹೇಗಿದೆ?

ನವರಾತ್ರಿ ಹಬ್ಬದ ಆಚರಣೆ ವೇಳೆ ಗರ್ಬಾ ನೃತ್ಯದಲ್ಲಿ ತೊಡಗಿದ್ದಾಗ 10 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಕೋವಿಡ್-19 ಕಡಿಮೆಯಾಗಿ ಸಾಕಷ್ಟು ದಿನಗಳು ಕಳೆದಿಲ್ಲ. ಹೀಗಿರುವಾಗ ನಾವೆಲ್ಲರು ನಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕೋವಿಡ್ 19 ಸೋಂಕಿಗೆ ತುತ್ತಾಗಿ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಹೃದಯಾಘಾತ ಹೆಚ್ಚಾಗುತ್ತಿದೆ. ಹೀಗಾಗಿ ಹೆಚ್ಚು ಪರಿಶ್ರಮದ ಕೆಲಸ ಸದ್ಯಕ್ಕಂತೂ ಮಾಡಬೇಡಿ. ಕಠಿಣ ಪರಿಶ್ರಮದ ವ್ಯಾಯಾಮಗಳನ್ನು ಕೂಡ ಮಾಡಬೇಡಿ. ಮುಂದಿನ 1 ರಿಂದ 2 ವರ್ಷದವರೆಗೆ ಕಠಿಣ ಕೆಲಸದಿಂದ ದೂರವಿರಿ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸಲಹೆ ನೀಡಿದ್ದರು. ಹೀಗೆ ಕೇಂದ್ರ ಆರೋಗ್ಯ ಸಚಿವರ ಎಚ್ಚರಿಕೆಯ ಬೆನ್ನಲ್ಲೇ ಜನ ಸಾಮಾನ್ಯರಲ್ಲಿ ಆತಂಕ ಹೆಚ್ಚಾಗುತ್ತಿದೆ.

ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಕೆಲವು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಈ ಕುರಿತು ಮಾತಾಡಿದ ಅವರು, ಯುವಕರಲ್ಲಿ ಹಾಗೂ ಮಧ್ಯವಯಸ್ಕರಲ್ಲಿ ಹೃದಯಾಘಾತ ಜಾಸ್ತಿಯಾಗುತ್ತಿದೆ. ಕೋವಿಡ್​ ವ್ಯಾಕ್ಸಿನ್​​ ತೆಗೆದುಕೊಂಡ ಪ್ರತಿ 10 ಲಕ್ಷ ಜನರಲ್ಲಿ 4 ರಿಂದ 5 ಜನರಿಗೆ ಹೃದಯಾಘಾತ ಸಂಭವಿಸುತ್ತಿದೆ. ಜೊತೆಗೆ ವಾಯುಮಾಲಿನ್ಯ ಕೂಡ ಹೃದಯಾಘಾತಕ್ಕೆ ಕಾರಣವಾಗಿದೆ. ಕಳೆದ ಒಂದೇ ವರ್ಷದಲ್ಲಿ ವಾಯುಮಾಲಿನ್ಯ ಸಮಸ್ಯೆಯಿಂದ 22 ಲಕ್ಷ ಜನ ಸಾವನ್ನಪ್ಪಿದ್ದಾರೆ. ಒತ್ತಡ ಕೂಡ ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ಮತ್ತೊಂದೆಡೆ ಪ್ರೀ ಡಯಾಬಿಟಿಸ್ ಇದ್ದವರಿಗೂ ಹೃದಯಾಘಾತ ಆಗುತ್ತಿದೆ. ಧೂಮಪಾನ, ಅತಿಯಾದ ಮದ್ಯಪಾನ, ಸೋಮಾರಿತನ, ಒತ್ತಡ ಇವುಗಳು ಹೃದಯಾಘಾತಕ್ಕೆ ಪ್ರಮುಖ ಕಾರಣಗಳು ಎಂದು ತಿಳಿಸಿದ್ದಾರೆ. ಡಯಾಬಿಟಿಸ್, ಹೈ ಬ್ಲಡ್ ಪ್ರೆಶರ್, ಕ್ಯಾನ್ಸರ್, ಸ್ಟ್ರೋಕ್​ನಿಂದ ಭಾರತದಲ್ಲಿ ಶೇಕಡ 60 ರಷ್ಟು ಸಾವುಗಳು ಸಂಭವಿಸುತ್ತಿವೆ. ಇನ್ನೂ 40ರಷ್ಟು ಹೃದಯ ಸಂಬಂಧಿ ಕಾಯಿಲೆಯಿಂದ ಸಾವುಗಳು ಸಂಭವಿಸುತ್ತಿವೆ. 35 ವರ್ಷ ದಾಟಿದ ಪುರುಷರು ಹಾಗೂ 45 ವರ್ಷ ದಾಟಿದ ಮಹಿಳೆಯರು ಚಿಕಿತ್ಸೆ ಪಡೆದುಕೊಂಡರೆ ಉತ್ತಮ ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊರೊನಾಗೂ ಹೃದಯಾಘಾತಕ್ಕೂ ನೇರ ಸಂಬಂಧ ಇದ್ಯಾ..? ಈ ಬಗ್ಗೆ ಡಾ.ಸಿ.ಎನ್​ ಮಂಜುನಾಥ್ ಏನಂದ್ರು?

https://newsfirstlive.com/wp-content/uploads/2023/10/manjunath-1.jpg

Load More