ಅಮ್ಮ ಹೆದರಬೇಡ ನಾನಿರುವೆ ನಿನಗಾಗಿ..
ಭಾರೀ ಬಿರುಗಾಳಿಯಲ್ಲೂ ಪುಟಾಣಿ ಪರದಾಟ
ಚಂಡಮಾರುತದ ಅಬ್ಬರದಲ್ಲಿ ಬಾಲಕನ ಸಾಹಸ
ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಮೋಕಾ ಚಂಡಮಾರುತ ಅತ್ಯಂತ ತೀವ್ರ ಸ್ವರೂಪಕ್ಕೆ ತಿರುಗಿದೆ. ಹೀಗಾಗಿ ತ್ರಿಪುರಾ, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರ, ಅಸ್ಸಾಂನಲ್ಲಿ ತ್ರಿಪುರಾ, ಮಿಜೋರಾಂ ಕಡೆಗಳಲ್ಲಿ ಚಂಡಮಾರುತದ ಅಬ್ಬರ ಮುಂದುವರೆದಿದೆ.
ನಾಗಾಲ್ಯಾಂಡ್ ಸುತ್ತಮುತ್ತಲಿನ ನಿವಾಸಿಗಳು ಪರದಾಡುವ ಸ್ಥಿತಿ ಎದುರಾಗಿದೆ. ಈ ಚಂಡಮಾರುತದಿಂದ ತನ್ನ ಸೂರನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುವುದನ್ನು ಪುಟ್ಟ ಬಾಲಕ ಹರಸಾಹಸ ಪಟ್ಟಿರೋ ದೃಶ್ಯ ಮನಕಲಕುವಂತಿದೆ.
ನಾಗಾಲ್ಯಾಂಡ್ ಭಾರೀ ಬಿರುಗಾಳಿಯ ನಡುವೆ ಪುಟ್ಟ ಬಾಲಕನೊಬ್ಬ ತನ್ನ ತಾಯಿಗೆ ಸಹಾಯ ಮಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕನ ತಾಯಿಯು ಅಂಗಡಿಯಲ್ಲಿ ಇರಿಸಲಾದ ವಸ್ತುಗಳಿಗೆ ಒಟ್ಟಿಗೆ ಕಟ್ಟಲು ಹಗ್ಗವನ್ನು ತೆಗೆದುಕೊಳ್ಳುತ್ತಿರುತ್ತಾರೆ. ಇದೇ ವೇಳೆ ಭಾರೀ ಬಿರುಗಾಳಿಗೆ ಟಾರ್ಪಲ್ ಬಾಲಕನ ನಿಯಂತ್ರಣಕ್ಕೆ ಸಿಗುವುದಿಲ್ಲ ಆದರೂ ಕೂಡ ಹರಸಾಹಸ ಪಟ್ಟು ಅದನ್ನು ಬಿಗಿಯಾಗಿ ಹಿಡಿದುಕೊಂಡಿರುತ್ತಾನೆ.
ಇದೇ ವೇಳೆ ಜೋರಾದ ಗಾಳಿಯೊಂದಿಗೆ ತನ್ನ ಪಕ್ಕದಲ್ಲೇ ಇದ್ದ ಕುರ್ಚಿಯೂ ಮುಂದೆ ಹಾರಿ ಹೋಗುತ್ತದೆ. ಅದನ್ನು ನೋಡಿದ ಬಾಲಕ ವೇಗವಾಗಿ ಓಡಿ ಹೋಗಿ ಕುರ್ಚಿಯನ್ನು ತನ್ನ ಎರಡು ಕೈಗಳಿಂದ ಹಿಡಿದುಕೊಂಡು ತನ್ನ ತಾಯಿಗೆ ತಂದು ಕೊಡುತ್ತಾನೆ. ಈ ಪುಟ್ಟ ಬಾಲಕನ ಕೆಲಸ ಹಾಗೂ ಜವಾಬ್ದಾರಿಯನ್ನು ಕಂಡು ಅದೆಷ್ಟೋ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋವನ್ನು ನಾಗಾಲ್ಯಾಂಡ್ ಉನ್ನತ ಶಿಕ್ಷಣ ಸಚಿವ ತೆಮ್ಜೆನ್ ಇಮ್ನಾ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ 2.1 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು, ಶಾಲೆಗಳಲ್ಲಿ ಕಲಿಸದ ನೀತಿ ಪಾಠಗಳು, ಜೀವನವು ಕಲಿಸುತ್ತದೆ. ಆ ಮಗು ಎಷ್ಟು ಬುದ್ಧಿವಂತ ದೇವರು ಅವನಿಗೆ ಆಶೀರ್ವದಿಸಲಿ ಎಂದು ಬಗೆ ಬಗೆಯಾಗಿ ಕಾಮೆಂಟ್ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
जिम्मेदारी समझने के लिए उम्र कि जरूरत नहीं, हालात ही सीखा देता हैं! pic.twitter.com/VdGu5saDS8
— Temjen Imna Along (@AlongImna) May 18, 2023