ಅಬ್ಬಬ್ಬಾ.. 542 ಕೆಜಿ ತೂಕ ಇದ್ದ ದಡೂತಿ ದೇಹ ಇಷ್ಟು ಕಡಿಮೆ ಆಯ್ತಾ? ಈತನ ಭಾರ ಇಳಿಸಿದ ದೊರೆ ಯಾರು?

author-image
Veena Gangani
Updated On
ಅಬ್ಬಬ್ಬಾ.. 542 ಕೆಜಿ ತೂಕ ಇದ್ದ ದಡೂತಿ ದೇಹ ಇಷ್ಟು ಕಡಿಮೆ ಆಯ್ತಾ? ಈತನ ಭಾರ ಇಳಿಸಿದ ದೊರೆ ಯಾರು?
Advertisment
  • ತೂಕವನ್ನು ಕಡಿಮೆ ಮಾಡುವಂತೆ ಖಾಲಿದ್ ಬಿನ್ ಹೋಗಿದ್ದು ಎಲ್ಲಿಗೆ?
  • ವಿಶ್ವದಲ್ಲೇ ಅತಿ ಹೆಚ್ಚು ತೂಕ ಹೊಂದಿದ್ದ ವ್ಯಕ್ತಿ ಅಚ್ಚರಿ ರೀತಿಯಲ್ಲಿ ಇಳಿಕೆ
  • 542KG ತೂಕ ಕಳೆದುಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿಬಿಟ್ಟ!

ವಿಶ್ವದಲ್ಲಿಯೇ ಅತಿ ಹೆಚ್ಚು ತೂಕ ಹೊಂದಿರೋ ಜೀವಂತ ವ್ಯಕ್ತಿ ಎಂದರೆ ಅದು ಖಾಲಿದ್ ಬಿನ್ ಮೊಹ್ಸೆನ್ ಶಾರಿ. ವಿಪರೀತ ತೂಕದಿಂದಾಗಿ ಏಳಲೂ ಕೂರಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಖಾಲಿದ್ ಅವರು ಇದ್ದರು. ಇದೀಗ ಸುಮಾರು 542 ಕೆಜಿ ತೂಕವನ್ನು ಕಳೆದುಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:ಒಂದಲ್ಲ, ಎರಡಲ್ಲ ಬರೋಬ್ಬರಿ ಒಂದು ಸಾವಿರ ಅಕೌಂಟ್‌ ಬ್ಲಾಕ್‌ ಮಾಡಿದ ನಟಿ ಜ್ಯೋತಿ ರೈ; ಕಾರಣವೇನು?

publive-image

2013ರಲ್ಲಿ 610 ಕೆಜಿ ತೂಕ ಹೊಂದಿದ್ದ ಖಾಲಿದ್ ಬಿನ್ ಮೊಹ್ಸೆನ್ ಶಾರಿ ಮೂರು ವರ್ಷಗಳ ಕಾಲ ಹಾಸಿಗೆ ಬಿಟ್ಟು ಮೇಲೆ ಏಳಲಾಗದ ಸ್ಥಿತಿಯಲ್ಲಿದ್ದರು. ಹೀಗಾಗಿ ಸಣ್ಣ ಪುಟ್ಟ ವಿಚಾರಕ್ಕೂ ಕುಟುಂಬದವರನ್ನೇ ಅವಲಂಬಿಸಬೇಕಿತ್ತು. ಹೀಗಾಗಿ ದಿನದಿಂದ ದಿನಕ್ಕೆ ಅವರ ಆರೋಗ್ಯ ಸ್ಥಿತಿ ಹದಗೆಡತೊಡಗಿತ್ತು. ಹೀಗಾಗಿ ಸಹಾಯಕ್ಕೆ ಅಂಗಲಾಚಿ ಖಾಲಿದ್ ಬಿನ್ ಮೊಹ್ಸೆನ್ ಶಾರಿ, ಸೌದಿ ಅರೇಬಿಯಾದ ಹಿಂದಿನ ದೊರೆ ಅಬ್ದುಲ್ಲಾ ಅವರ ಮೊರೆ ಹೋಗಿದ್ದರು. ಆಗ ಖಾಲಿದ್‌ನ ಸ್ಥಿತಿ ಕಂಡು ಮರುಗಿದ ದೊರೆ, ಆತನ ಜೀವ ಉಳಿಸಲು ಸಾಕಷ್ಟು ನೆರವು ನೀಡಿದ್ದರು.

publive-image

ಸದ್ಯ ಸೌದಿ ಅರೇಬಿಯಾದ ಹಿಂದಿನ ದೊರೆ ಅಬ್ದುಲ್ಲಾ ಅವರ ನೆರವಿನಿಂದಾಗಿ ಖಾಲಿದ್ ಎಲ್ಲರಂತೆ ಓಡಾಡುವ ಸ್ಥಿತಿಗೆ ಮರಳುತ್ತಿದ್ದಾರೆ. ಕೇವಲ 6 ತಿಂಗಳಲ್ಲಿ ಖಾಲಿದ್ ಬಿನ್ ಅರ್ಧದಷ್ಟು ದೇಹದ ತೂಕವನ್ನು ಕಳೆದುಕೊಂಡಿದ್ದಾರೆ. ವಿಶೇಷ ಎಂದರೆ ಖಾಲಿದ್‌ಗೆ ಯಾವುದೇ ಹಣವನ್ನು ತೆಗೆದುಕೊಳ್ಳದೇ ಅತ್ಯುನ್ನತ ಮಟ್ಟದ ವೈದ್ಯಕೀಯ ಆರೈಕೆ ಒದಗಿಸಲು ದೊರೆ ಅಬ್ದುಲ್ಲಾ ವ್ಯವಸ್ಥೆ ಕಲ್ಪಿಸಿದ್ದಾರೆ. ಖಾಲಿದ್‌ನನ್ನು ಫೋರ್ಕ್‌ಲಿಫ್ಟ್ ಬಳಸಿ ಜಝಾನ್‌ನಲ್ಲಿರುವ ಆತನ ಮನೆಯಿಂದ ರಿಯಾದ್‌ನಲ್ಲಿನ ಕಿಂಗ್ ಫಹಾದ್ ಮೆಡಿಕಲ್ ಸಿಟಿಗೆ ಸ್ಥಳಾಂತರಿಸಲಾಗಿತ್ತು.

ಇದನ್ನೂ ಓದಿ:ಕಲಾವಿದರ ಮೇಲೆ ನಾಗದೈವ ಕೆಂಡ.. ಸ್ಯಾಂಡಲ್‌ವುಡ್‌ನಲ್ಲಿ ಆಗಿರೋ ದೊಡ್ಡ ತಪ್ಪೇನು? ಪೂಜೆಯಲ್ಲಿ ಆಗಿದ್ದೇನು?

publive-image

ಅವರಿಗಾಗಿಯೇ ಹೊಸದಾದ ಹಾಗೂ ವಿಶೇಷವಾದ ಹಾಸಿಗೆಯನ್ನೂ ಸಿದ್ಧಪಡಿಸಲಾಗಿತ್ತು. ಜೊತೆಗೆ 30 ವೈದ್ಯಕೀಯ ವೃತ್ತಿಪರರು ಕಠಿಣ ಚಿಕಿತ್ಸೆ ಹಾಗೂ ಆಹಾರ ಕ್ರಮವನ್ನು ಸಿದ್ಧಪಡಿಸಿದ್ದರು. ಖಾಲಿದ್‌ನ ಸರ್ಜರಿಯಲ್ಲಿ ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿ, ನಿರ್ದಿಷ್ಟವಾದ ಆಹಾರ ಕ್ರಮ ಹಾಗೂ ವ್ಯಾಯಾಮ ಯೋಜನೆಗಳು ಒಳಗೊಂಡಿದ್ದವು. ಇದರಿಂದ ಖಾಲಿದ್ ಬಿನ್ ಮೊಹ್ಸೆನ್ ಶಾರಿ ಸದ್ಯ 68 ತೂಕವನ್ನು ಹೊಂದಿದ್ದಾರೆ. ಈ ಮೂಲಕ ಅಸಾಧ್ಯವಾದುದ್ದು ಯಾವುದೂ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment