Advertisment

ಸಖತ್​​ ಹಾಟ್​ ಆಯ್ತು ನಮ್ಮ ಬೆಂಗಳೂರು;​ ಬಿಸಿ ಗಾಳಿಯಿಂದ ಹೈರಾಣಾದ ರಾಜ್ಯದ ಜನ; ತಪ್ಪದೇ ಸ್ಟೋರಿ ಓದಿ!

author-image
Veena Gangani
Updated On
ಅಬ್ಬಬ್ಬಾ.. 3 ವಾರದಲ್ಲಿ ಬೆಂಗಳೂರಿನ 7,324 ಮಂದಿಗೆ ಅತಿಸಾರ ಸಮಸ್ಯೆ; ಮುನ್ನೆಚ್ಚರಿಕಗಳೇನು?
Advertisment
  • ಕಳೆದ ಐದು ವರ್ಷಗಳಲ್ಲಿ ಮಾರ್ಚ್‌ನಲ್ಲಿ ದಾಖಲಾದ ಗರಿಷ್ಠ ತಾಪಮಾನ
  • ಏಪ್ರಿಲ್​ನಲ್ಲಿ ಗರಿಷ್ಠ 35° ಸೆಲ್ಸಿಯಸ್‌ವರೆಗೂ ಮುಟ್ಟಬಹುದೆಂಬ ಅಂದಾಜು
  • ಈ ವರ್ಷದ ಮಳೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಏನಿದೆ ಗೊತ್ತಾ?

ಬೆಂಗಳೂರು: ಅಯ್ಯೋ ಎಷ್ಟು ಬಿಸಿಲು.. ಸಾಕಪ್ಪಾ ಸಾಕು ಸೂರ್ಯನ ಶಾಖ ಅನ್ನೋ ಪರಿಸ್ಥಿತಿ ಬಂದಿದೆ. ದಿನ ಕಳೆದಂತೆ ಉದ್ಯಾನನಗರಿ ಸಖತ್‌ ಹಾಟ್ ಸಿಟಿಯಾಗಿ ಬದಲಾಗುತ್ತಿದೆ. ಈ ವರ್ಷ ಬೆಂಗಳೂರು ಬಹುದಿನಗಳ ನಿರಂತರ ಶಾಖದ ಅಲೆಗೆ ಸಾಕ್ಷಿಯಾಗುತ್ತಿದೆ. ಹವಾಮಾನ ಇಲಾಖೆ ಬೆಂಗಳೂರಿನ ಭಾರೀ ಬಿಸಿಲಿನ ವಾತಾವರಣದ ಬಗ್ಗೆ ಎಚ್ಚರಿಕೆ ನೀಡಿದೆ. ನಿನ್ನೆ ಕಳೆದ ಐದು ವರ್ಷಗಳಲ್ಲೇ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

Advertisment

publive-image

ಹೌದು, ಮಾರ್ಚ್ 29ರ ಶುಕ್ರವಾರ 36.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಸಿಲಿಕಾನ್​ ಸಿಟಿಯಲ್ಲಿ ಮುಂದುವರಿಯಲಿದೆ. ಪ್ರತಿದಿನ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಅಲರ್ಟ್ ನೀಡಿದೆ. ಕಳೆದ 15 ವರ್ಷಗಳಲ್ಲಿ ದಾಖಲಾದ 4ನೇ ಗರಿಷ್ಠ ತಾಪಮಾನ ಇದಾಗಿದ್ದು, ಮಾರ್ಚ್‌ 29, 1996ರಲ್ಲಿ 37.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಇದೀಗ 36.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮರು ಕಳಿಸಿದೆ. ವಾಡಿಕೆಯಂತೆ ಮಾರ್ಚ್‌ ಕೊನೆ ವಾರದಲ್ಲಿ 33.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಬೇಕಿತ್ತು. ಆದರೆ ನಿನ್ನೆ 36.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಬಿರು ಬಿಸಿಲಿನಿಂದ ಜನರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

publive-image

ಇದನ್ನೂ ಓದಿ:ಬೆಂಗಳೂರಲ್ಲಿ ಒಂದು ವಾರ ಭೀಕರ ಬಿಸಿಲು; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆಯೇನು?

ಇನ್ನು, ಮಾರ್ಚ್‌ ಕೊನೆ ವಾರದಲ್ಲಿ ತುಂತುರು ಮಳೆಯ ನಿರೀಕ್ಷೆಯಿತ್ತು. ಆದರೆ, ಮಾರುತಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವುದರಿಂದ ಮಳೆ ಬಂದಿಲ್ಲ. ಏಪ್ರಿಲ್‌ನಲ್ಲಿ ಅಂದಾಜು 34.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಅದರಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್‌ವರೆಗೂ ಮುಟ್ಟಬಹುದು ಎಂದು ಅಂದಾಜಿಸಲಾಗಿದೆ. ಏಪ್ರಿಲ್‌ ಎರಡನೇ ವಾರದಲ್ಲಿ ತಾಪಮಾನ ಇಳಿಕೆಯಾಗುವ ನಿರೀಕ್ಷೆ ಇದೆ. ಇದಾದ ಬಳಿಕ ಏಪ್ರಿಲ್‌ 2ನೇ ವಾರದಲ್ಲಿ ನಗರದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಏಪ್ರಿಲ್‌ನಲ್ಲಿ ಸಿಲಿಕಾನ್​ ಸಿಟಿಯಲ್ಲಿ ಮಳೆರಾಯನ ಆರ್ಭಟ ಶುರುವಾಗಲಿದೆ. ಈ ವರ್ಷ ವಾಡಿಕೆಗಿಂತ ಅಧಿಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisment

publive-image

ಬಿಸಿಲಿನ‌ ಜಳಕ್ಕೆ ಹೈರಾಣಾದ ಬಳ್ಳಾರಿ ಜನತೆ

ಬೆಂಗಳೂರಿಗೆ ಮಾತ್ರವಲ್ಲದೇ ಗಣಿನಾಡಿನ ಮಂದಿ ಕೂಡ ರಣ ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ. 40° ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬಿಸಿಲಿನ ಬೇಗೆಗೆ ತಾಳಲಾರದೆ ಜನರು ತಂಪು ಪಾನೀಯ, ಕಲ್ಲಂಗಡಿ, ಎಳೆನೀರು ಮೊರೆ‌ ಹೋಗುತ್ತಿದ್ದಾರೆ. ಹೀಗಾಗಿ ರಣ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ಮಡಕೆ ನೀರು ಬಳಕೆಗೆ ಮುಂದಾಗಿದ್ದಾರೆ. ಆದರೆ ಬಿಸಿಲಿನಿಂದ ಮಕ್ಕಳಿಗೆ ಬೆವರು ಸಾಲಿಯಂತ ಚರ್ಮ ರೋಗದ ಕಾಟ ಶುರುವಾಗಿದೆ. ಏಪ್ರಿಲ್‌ ತಿಂಗಳಲ್ಲಿ ಮತ್ತಷ್ಟು ತಾಪಮಾನ ಹೆಚ್ಚಾಗುವ ಸಾಧ್ಯತೆ ಇದಿದ್ದರಿಂದ ಜನರು ಹೊರಗಡೆ ಬರುವ ಮುನ್ನ ಛತ್ರಿಗಳ ಮೊರೆ ಹೋಗುತ್ತಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ಅಧಿಕ ತಾಪಮಾನ ಇದಿದ್ದರಿಂದ ರಸ್ತೆ ಬದಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಬಿಸಿಲಿನಿಂದ ರಕ್ಷಣೆಗೆ ಟ್ರಾಫಿಕ್​ ಸಿಗ್ನಲ್​ಗಳಲ್ಲಿ ಹಸಿರು ಹೊದಿಕೆ ಹಾಕಬೇಕು ಎಂದು ಜಿಲ್ಲಾಡಳಿತಕ್ಕೆ ಜನರು ಒತ್ತಾಯ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment