newsfirstkannada.com

ಕೋಲಾರ ಸೇರಿ ರಾಜ್ಯದ ಹಲವು ಕಡೆ ಭರ್ಜರಿ ಮಳೆಗೆ ಬೆಚ್ಚಿಬಿದ್ದ ಜನ; ಎಲ್ಲೆಲ್ಲಿ ಏನಾಯ್ತು?

Share :

Published May 6, 2024 at 6:16pm

Update May 6, 2024 at 6:17pm

    ಕೋಲಾರ ಸೇರಿ ರಾಜ್ಯದ ಹಲವೆಡೆ ಎಡಬಿಡದೆ ಸುರಿಯುತ್ತಿರೋ ಮಳೆ

    ಇಂದು ಸುರಿಯುತ್ತಿರೋ ಭರ್ಜರಿ ಮಳೆಗೆ ಬೆಚ್ಚಿಬಿದ್ದ ಕೋಲಾರದ ಜನ!

    ಬಂಗಾರಪೇಟೆ, ಕೆಜಿಎಫ್​​, ಮಾಲೂರು, ಮುಳಬಾಗಿಲುನಲ್ಲೂ ಹನಿ ಜೋರು

ಕೋಲಾರ: ಇನ್ನೂ ಮೂರು ವಾರಗಳ ಕಾಲ ಇಡೀ ರಾಜ್ಯಾದ್ಯಂತ ಜೋರು ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರು ಸುತ್ತಮುತ್ತಲೂ ಭರ್ಜರಿ ಮಳೆಯಾಗುತ್ತಿದೆ. ಇದರ ಮಧ್ಯೆ ಬಿಸಿಲಿನಿ ಬೇಗೆಯಿಂದ ಕಂಗೆಟ್ಟು ಹೋಗಿದ್ದ ಕೋಲಾರದಲ್ಲಿ ಭರ್ಜರಿ ಮಳೆ ಬಿದ್ದಿದೆ.

ಇನ್ನು, ಕೋಲಾರ, ಮಾಲೂರು, ಬಂಗಾರಪೇಟೆ, ಕೆಜಿಎಫ್​​, ರಾಮಸಮುದ್ರಂ, ಕ್ಯಾಸಂಬಳ್ಳಿ, ಬೇತಮಂಗಲ, ಮುಳಬಾಗಿಲು ಸೇರಿದಂತೆ ಹಲವೆಡೆ ಮಳೆ ಬಿದ್ದಿದೆ. ಕೋಲಾರದ ಎಪಿಎಂಸಿ ಮಾರ್ಕೆಟ್​ನಲ್ಲೂ ಬಿರುಗಾಳಿ ಸಮೇತ ಮಳೆಯಾಗಿದೆ. ಮಳೆಯಿಂದ 50 ಲಕ್ಷಕ್ಕೂ ಹೆಚ್ಚು ಟೊಮ್ಯಾಟೋ ಬೆಳೆ ನಷ್ಟವಾಗಿದೆ.

ಕಳೆದ ಒಂದು ವಾರದ ಹಿಂದೆ ಕೆಜಿಎಫ್​ನಲ್ಲಿ ಭರ್ಜರಿ ಮಳೆಯಾಗಿತ್ತು. ಅಷ್ಟೇ ಅಲ್ಲ, ಮುಳಬಾಗಿಲು ಸುತ್ತಮುತ್ತ ತಾಯಲೂರು ಕಡೆಯೂ ಜೋರು ಮಳೆ ಬಿದ್ದಿತ್ತು. ಬಂಗಾರಪೇಟೆ, ಶ್ರೀನಿವಾಸಪುರ, ನರಸಪುರದಲ್ಲಂತೂ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಇದನ್ನೂ ಓದಿ: ಬೆಂಗಳೂರಲ್ಲಿ ಇಂದು ಧಾರಾಕಾರ ಮಳೆ.. ರಾಜ್ಯದಲ್ಲಿ ನಾಳೆ, ನಾಡಿದ್ದು ಗುಡುಗು ಸಹಿತ ವರುಣಾರ್ಭಟ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಲಾರ ಸೇರಿ ರಾಜ್ಯದ ಹಲವು ಕಡೆ ಭರ್ಜರಿ ಮಳೆಗೆ ಬೆಚ್ಚಿಬಿದ್ದ ಜನ; ಎಲ್ಲೆಲ್ಲಿ ಏನಾಯ್ತು?

https://newsfirstlive.com/wp-content/uploads/2024/05/Heavy-Rains-Kolar.jpg

Load More