Advertisment

ಮಟಮಟ ಮಧ್ಯಾಹ್ನವೇ ತಂಪೆರೆದ ಮಳೆರಾಯ.. ರಾಜ್ಯದ ಈ ಜಿಲ್ಲೆಯಲ್ಲಿ ಭರ್ಜರಿ ಮಳೆ..!

author-image
Ganesh
Updated On
ಮಟಮಟ ಮಧ್ಯಾಹ್ನವೇ ತಂಪೆರೆದ ಮಳೆರಾಯ.. ರಾಜ್ಯದ ಈ ಜಿಲ್ಲೆಯಲ್ಲಿ ಭರ್ಜರಿ ಮಳೆ..!
Advertisment
  • ಹೀಟ್ ವೇವ್​ನಿಂದ ತತ್ತರಿಸಿದ್ದ ಗಡಿನಾಡಿಗೆ ತಂಪೆರದ ವರುಣ
  • ಕಾದು ಕೆಂಡದಂತಾಗಿದ್ದ ಧರೆಗೆ ಮಳೆರಾಯನ ಸಿಂಚನ
  • ಕಳೆದೊಂದು ಗಂಟೆಯಿಂದ ನಿರಂತರವಾಗಿ ಸುರಿದ ಮಳೆ

ಚಿಕ್ಕಮಗಳೂರು/ ಬೀದರ್: ಮಧ್ಯಾಹ್ನ ಆಗುತ್ತಿದ್ದಂತೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯನ ದರ್ಶನ ಆಗಿದೆ. ಕಾಫಿನಾಡ ಬಯಲುಸೀಮೆ ಭಾಗದಲ್ಲಿ ಧಾರಾಕಾರ ಮಳೆ ಆಗಿದ್ದು, ಕಳೆದೊಂದು ಗಂಟೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.

Advertisment

ಕಡೂರು ತಾಲೂಕಿದ್ಯಂತ ಭಾರೀ ಮಳೆ ಆಗಿದೆ. ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆ ಅಬ್ಬರದ ಮಳೆ ಇದೆ. ಬಿಸಿಲಿನಿಂದ ಕಂಗೆಟ್ಟಿದ್ದ ಬಯಲು ಸೀಮೆ ರೈತರ ಮೊಗದಲ್ಲೂ ಮಂದಹಾಸ ಮೂಡಿದೆ. ತರೀಕೆರೆ, ಅಜ್ಜಂಪುರ ತಾಲೂಕಿನ ಹಲವು ಭಾಗಗಳಲ್ಲೂ ಮಳೆಯಾಗಿದೆ. ತೆಂಗು, ಅಡಿಕೆ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ.

ಇದನ್ನೂ ಓದಿ:ಜೈಲಿನಿಂದ ಬಂದ ಬೆನ್ನಲ್ಲೇ 10 ಗ್ಯಾರಂಟಿ ಘೋಷಣೆ ಮಾಡಿದ ಕೇಜ್ರಿವಾಲ್.. ಇವೆಲ್ಲ ಉಚಿತ.. ಉಚಿತ..!

publive-image

ಹಾಗೆಯೇ ಹೀಟ್​ವೇವ್​ನಿಂದ ತತ್ತರಿಸಿ ಹೋಗಿದ್ದ ಗಡಿನಾಡಿಗೆ ಮಳೆರಾಯ ತಂಪೆರೆದಿದ್ದಾನೆ. ಕಾದು ಕೆಂಡದಂತಾಗಿದ್ದ ಧರೆಗೆ ಮಳೆರಾಯನ ಸಿಂಚನವಾಗಿದೆ. ಗಡಿಜಿಲ್ಲೆ ಬೀದರ್‌ನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಜಿಲ್ಲೆಯ ಹಲವೆಡೆ ಮಿಂಚು, ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಬೀದರ್​ನ ಕಮಲನಗರ, ಹುಮನಾಬಾದ್, ಬಸವಕಲ್ಯಾಣದಲ್ಲಿ ಮಳೆಯಾಗಿದೆ.

Advertisment

ಇದನ್ನೂ ಓದಿ:Heat wave: ರಣ ಬಿಸಿಲಿಗೆ ಯಾರಾದರೂ ಪ್ರಜ್ಞೆತಪ್ಪಿ ಬಿದ್ದರೆ ಯಾವತ್ತೂ ಈ ತಪ್ಪು ಮಾಡಲೇಬೇಡಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment