newsfirstkannada.com

ಧಾರಾಕಾರ ಮಳೆ, ರಸ್ತೆಗಳು ಜಲಾವೃತ.. ಭೀಕರ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ಮನೆಗಳು

Share :

Published May 3, 2024 at 8:24am

  ರಸ್ತೆಗಳು ಜಲಾವೃತವಾದ ಪರಿಣಾಮ ವಾಹನ ಸಂಚಾರಕ್ಕೆ ತೊಡಕು

  ನಿರಂತರ ಮಳೆಗೆ ಅನೇಕ ಕಡೆ ಭೂಕುಸಿತ, ರೈಲು ಸೇವೆಗೆ ಅಡ್ಡಿ

  ಮಳೆಯಿಂದಾಗಿ ಪ್ರವಾಹ.. ಭೋರ್ಗರೆದು ಹರಿಯುತ್ತಿರುವ ನದಿಗಳು

ಧಾರಾಕಾರ ಮಳೆಯಿಂದಾಗಿ ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಭೀಕರ ಪ್ರವಾಹ ಉಂಟಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳೆಲ್ಲವೂ ನದಿಗಳಂತಾಗಿವೆ.

ಜನನಿಬಿಡ ಪ್ರದೇಶಗಳಲ್ಲಿ ಮಳೆಯ ನೀರು ಭೋರ್ಗರೆದು ಹರಿಯುತ್ತಿದ್ದು ಪ್ರವಾಹದ ರಭಸಕ್ಕೆ ಸಿಕ್ಕಿ ಹಲವು ಮನೆಗಳು ಕೊಚ್ಚಿ ಹೋಗಿವೆ. ಅಲ್ಲದೇ ರಸ್ತೆಗಳು ಜಲಾವೃತವಾದ ಪರಿಣಾಮ ವಾಹನ ಸಂಚಾರಕ್ಕೆ ತೊಡಕಾಗಿದೆ. ಮತ್ತೊಂದೆಡೆ ನಿರಂತರ ಮಳೆಗೆ ಅನೇಕ ಕಡೆ ಭೂಕುಸಿತ ಉಂಟಾಗಿದೆ.

ಇನ್ನು ಜಟಿಂಗ-ಲಂಪುರ್ ಮತ್ತು ನ್ಯೂ ಹರಂಗಜಾವೊ ನಡುವೆ ಭೂಕುಸಿತ ಸಂಭವಿಸಿದ್ದು, ರೈಲ್ವೆ ಸೇವೆಗೆ ಅಡ್ಡಿಯಾಗಿದೆ.

ದಿಮಾ ಹಸಾವೊ ಜಿಲ್ಲಾ ಪೊಲೀಸರು ಸಲಹಾ ಸೂಚನೆಯ ಜೊತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಮಳೆಯಿಂದಾಗಿ ಎನ್​ಹೆಚ್​27ರ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ. ಸಂಜೆ 4 ಗಂಟೆಯವರೆಗೆ ವಾಹನ ಸಂಚಾರಕ್ಕೆ ಬ್ರೇಕ್​ ಹಾಕಿದ್ದಾರೆ.

ಇದನ್ನೂ ಓದಿ: ಅಯ್ಯೋ.. ವಿದ್ಯುತ್​ ಇಲ್ಲ, ಟಾರ್ಚ್​ ಲೈಟ್​ನಲ್ಲಿ ಹೆರಿಗೆ, ತಾಯಿ ಮಗು ಸಾವು.. ಇದು ಸರ್ಕಾರಿ ಹೆರಿಗೆ ಆಸ್ಪತ್ರೆಯ ಕರ್ಮಕಾಂಡ

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು ಪ್ರಾಧಿಕಾರದ ಅಧ್ಯಕ್ಷರು ಹಫ್ಲಾಂಗ್​ ಪುರಸಭೆಯ ಮುಖ್ಯ ಕಾರ್ಯನಿರ್ವಾಹಿಕರಿಗೆ ಪತ್ರ ಬರೆದಿದ್ದು, ಮಳೆಯಿಂದಾಗಿ ಕೆರೆಗಳೆಲ್ಲಾ ತುಂಬಿವೆ. ರಸ್ತೆ ಮೇಲೆ ನೀರು ಹರಿಯುತ್ತಿವೆ. ಸುತ್ತಮುತ್ತಲಿನ ಮನೆಗಳಿಗೆ ಹಾನಿಯಾಗಿವೆ. ಈ ನಿಟ್ಟಿನಲ್ಲಿ ಚರಂಡಿಯನ್ನು ತೆರವುಗೊಳಿಸಿ ಕೆರೆ ನೀರನ್ನು ನಾಲೆಗಳಿಗೆ ಬಿಡಲು ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧಾರಾಕಾರ ಮಳೆ, ರಸ್ತೆಗಳು ಜಲಾವೃತ.. ಭೀಕರ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ಮನೆಗಳು

https://newsfirstlive.com/wp-content/uploads/2024/05/Assam-River.jpg

Load More