newsfirstkannada.com

ಸಿಲಿಕಾನ್​ ಸಿಟಿಯಲ್ಲಿ ಗುಡುಗು ಸಮೇತ ಭಾರೀ ಮಳೆ; ಹಲವೆಡೆ ಟ್ರಾಫಿಕ್ ಜಾಮ್

Share :

Published May 12, 2024 at 5:39pm

    ಸಂಜೆ ಆಗುತ್ತಿದ್ದಂತೆ ಮತ್ತೆ ಸಿಲಿಕಾನ್​ ಸಿಟಿಗೆ ಎಂಟ್ರಿ ಕೊಟ್ಟ ವರುಣ

    ದಿಢೀರ್​ ಮಳೆಯಿಂದ ಕಂಗಾಲಾದ ಸಿಲಿಕಾನ್​ ಸಿಟಿ ಬೈಕ್​ ಸವಾರರು

    ಮೆಜೆಸ್ಟಿಕ್, ಮೈಸೂರು ಸರ್ಕಲ್, ಸೇರಿದಂತೆ ಹಲವೆಡೆ ಭಾರೀ ಮಳೆ

ಬೆಂಗಳೂರು: ಇಷ್ಟು ದಿನ ಬಿರು ಬಿಸಿಲಿನ ಶಾಖಕ್ಕೆ ಕಂಗೆಟ್ಟಿದ್ದ ಸಿಲಿಕಾನ್​ ಸಿಟಿ ಮಂದಿಗೆ ಮಳೆರಾಯ ತಂಪು ನೀಡಿದ್ದಾನೆ. ಕಳೆದ ಎರಡು ವಾರದಿಂದ ಬೆಂಗಳೂರಿನ ವಾತಾವರಣ ತಂಪಾಗಿದ್ದು, ಬಾರೋ ಬಾರೋ ಮಳೆರಾಯ ಅಂತಿದ್ದವರಿಗೆ ವರುಣ ಕೃಪೆ ತೋರಿದ್ದಾನೆ. ಇವತ್ತೂ ಕೂಡ ಬೆಂಗಳೂರಿನ ಹಲವೆಡೆ ಗುಡುಗು, ಮಿಂಚು ಸಹಿತ ಮಳೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ತಂದೆ ಜೊತೆ ಕಾರು ವಾಶ್ ಮಾಡುತ್ತಿದ್ದಾಗ ಅನಾಹುತ.. ಬೆಂಗಳೂರಲ್ಲಿ 5 ವರ್ಷದ ಬಾಲಕ ದಾರುಣ ಸಾವು

ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 11 ರಿಂದ 17ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಬೆಂಗಳೂರಿನಲ್ಲಿ ಸಂಜೆ ಆಗುತ್ತಿದ್ದಂತೆ ಮೋಡ ಮುಸುಕಿದ ವಾತಾವರಣ ಮೂಡಿತ್ತು. ಗಾಳಿ, ಗುಡುಗು ಸಹಿತ ಸಿಲಿಕಾನ್​ ಸಿಟಿಯಲ್ಲಿ ಮಳೆಯಾಗುತ್ತಿದೆ.

ಮೆಜೆಸ್ಟಿಕ್, ಜೆಸಿ ರೋಡ್, ಮೈಸೂರು ಸರ್ಕಲ್, ಟೌನ್​ ಹಾಲ್​​, ವಿಜಯನಗರ, ರಾಜಾಜಿನಗರ, ಬಸವನಗುಡಿ, ಹೆಚ್​.ಎಸ್​ ಆರ್​ ಲೇಔಟ್​, ಬಿಟಿಎಂ ಲೇಔಟ್​, ಗೊಟ್ಟಿಗೆರೆ ಸೇರಿದಂತೆ ಹಲವಾರು ಕಡೆಗಳಲ್ಲಿ ವರುಣ ಆರ್ಭಟ ಜೋರಾಗಿದೆ. ದಿಢೀರ್ ಮಳೆಯ ಪರಿಣಾಮ ಬೈಕ್​ ಸವಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ವೀಕೆಂಡ್ ಅಂತಾ ಮನೆಯಿಂದ ಆಚೆ ಹೋಗಿದ್ದ ಜನರು ಮಳೆಯಿಂದ ಕಂಗಾಲಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಕಾನ್​ ಸಿಟಿಯಲ್ಲಿ ಗುಡುಗು ಸಮೇತ ಭಾರೀ ಮಳೆ; ಹಲವೆಡೆ ಟ್ರಾಫಿಕ್ ಜಾಮ್

https://newsfirstlive.com/wp-content/uploads/2024/05/bng-rain1.jpg

Load More