ಬೆಂಗಳೂರಲ್ಲಿ ಭಾರೀ ಮಳೆ.. ರಸ್ತೆಗಳೆಲ್ಲ ಮುಳುಗಡೆ.. ಬೆಳ್ಳಂಬೆಳಗ್ಗೆ ಅನಾಹುತದ ಆತಂಕ..

author-image
Ganesh
Updated On
ಬೆಳ್ಳಂಬೆಳಗ್ಗೆ ಬೆಂಗಳೂರು ಮಂದಿಗೆ ಬಿಗ್ ಶಾಕ್; ನೀರಲ್ಲಿ ಮುಳುಗಿದ ಕಾರು.. ಕೆಟ್ಟು ನಿಂತ ಆ್ಯಂಬುಲೆನ್ಸ್​.. ಏನೆಲ್ಲ ಆಗ್ತಿದೆ?
Advertisment
  • ಬೆಳಗ್ಗೆ ಎದ್ದು ಡ್ಯೂಟಿ ಹೋಗ್ತಿರೋ ಉದ್ಯೋಗಿಗಳಿಗೆ ಮಳೆ ಕಿರಿಕಿರಿ
  • ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಟ್ರಾಫಿಕ್ ಜಾಮ್
  • ಗುಡುಗು ಸಹಿತ ಭಾರೀ ಮಳೆ, ಬೆಚ್ಚಿಬಿದ್ದ ಬೆಂಗಳೂರು ಮಂದಿ

ಬೆಂಗಳೂರು: ಕೆಲವು ದಿನಗಳಿಂದ ಆಗಾಗ ಎಂಟ್ರಿ ಕೊಟ್ಟು ಮರೆಯಾಗ್ತಿದ್ದ ಮಳೆರಾಯ ನಿನ್ನೆ ರಾತ್ರಿ ಅಬ್ಬರಿಸಿ ಬೊಬ್ಬೆರಿದ್ದಿದ್ದಾನೆ. ನಗರದ ಕೆ.ಆರ್​.ಮಾರ್ಕೆಟ್, ಜೆ.ಸಿ ರೋಡ್, ವಿಜಯನಗರ, ಕಾಮಾಕ್ಷಿಪಾಳ್ಯ ಸೇರಿದಂತೆ ಹಲವು ಏರಿಯಾಗಳಲ್ಲಿ ಧಾರಾಕಾರ ಮಳೆಯಾಗಿದೆ.

publive-image

ಮಧ್ಯ ರಾತ್ರಿ ಸುಮಾರು 2 ಗಂಟೆಗೆ ಶುರುವಾದ ಮಳೆ, ಎರಡ್ಮೂರು ಗಂಟೆಗಳ ಕಾಲ ಬಿಟ್ಟು ಬಿಡದೇ ಗುಡುಗು ಸಹಿತ ಮಳೆಯಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳೆಲ್ಲ ಜಲಾವೃತವಾಗಿದೆ. ನೀರಿನಲ್ಲಿ ವಾಹನ ಸವಾರರು ಸಂಚರಿಸಲಾಗದೇ ಪರದಾಡುತ್ತಿದ್ದಾರೆ. ಬೆಳಗ್ಗೆ ಎದ್ದು ವಿವಿಧ ಆಫೀಸ್​ಗಳಿಗೆ ಹೋಗುವ ಉದ್ಯೋಗಿಗಳು ಮಳೆಯಿಂದಾಗಿ ಕಿರಿಕಿರಿ ಅನುಭವಿಸ್ತಿದ್ದಾರೆ.

ಇದನ್ನೂ ಓದಿ:ಯಾರೂ ನಿರೀಕ್ಷೆ ಮಾಡಿರದ ನಿರ್ಧಾರ ತೆಗೆದುಕೊಂಡ ಸೂರ್ಯ, ಟೀಂ ಇಂಡಿಯಾದ ಸ್ಟಾರ್ಸ್​ಗೆ ಬಿಗ್ ಶಾಕ್..!

publive-image

ಬೆಂಗಳೂರಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಭಾರೀ ಅವಾಂತರ ಸೃಷ್ಟಿಯಾಗಿದೆ, ಅಲ್ಲದೇ ಕೆಲವು ಅಪಾರ್ಟ್​ಮೆಂಟ್​ಗಳಲ್ಲೂ ನೀರು ನುಗ್ಗಿದೆ. ಜನರಿಗೆ ಭಾರೀ ತೊಂದರೆ ಆಗ್ತಿದೆ.

ಇದನ್ನೂ ಓದಿ:ಸುನಿತಾ ವಿಲಿಯಮ್ಸ್ ಕರೆತರಲು NASA ಹೊಸ ಪ್ಲಾನ್; ‘ಸೂಪರ್ ಮ್ಯಾನ್’ ಆಗಲಿದೆ ಎಲಾನ್ ಮಸ್ಕ್​ನ SpaceX..!

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment