newsfirstkannada.com

ಬೆಂಗಳೂರಲ್ಲಿ ಗುಡುಗು ಸಮೇತ ಧಾರಾಕಾರ ಮಳೆ.. ಎಲ್ಲೆಲ್ಲೂ ಟ್ರಾಫಿಕ್​.. ಇನ್ನೆಷ್ಟು ದಿನ?

Share :

Published June 5, 2024 at 7:17pm

Update June 5, 2024 at 7:20pm

  ಮೊನ್ನೆ ಸುರಿದ ಭಾರೀ ಮಳೆಗೆ ಹೈರಾಣಾದ ಸಿಲಿಕಾನ್​ ಸಿಟಿ ಜನರು

  ಈಗಾಗಲೇ ಕೆಲವು ಕಡೆ ಮಳೆಯಿಂದ ತೊಂದರೆ ಅನುಭವಿಸಿರುವ ಜನ

  ಇಂದು ಕೂಡ ಹಲವು ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟ ಮಾಡಲಿದ್ದಾನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಈ ಬೆನ್ನಲ್ಲೇ ಸಂಜೆಯಾಗುತ್ತಿದ್ದಂತೆ ಸಿಲಿಕಾನ್​ ಸಿಟಿಯಲ್ಲಿ ವರುಣನ ಆರ್ಭಟ ಜೋರಾಗಿದೆ.

ಇದನ್ನೂ ಓದಿ: ಇಂದಿನಿಂದ 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ.. ಯೆಲ್ಲೋ ಅಲರ್ಟ್ ಘೋಷಣೆ

ಸದ್ಯ ಮಾಗಡಿ ರಸ್ತೆ, ಹೇರೋಹಳ್ಳಿ, ಮೆಜೆಸ್ಟಿಕ್, ಟೌನ್ ಹಾಲ್, ಕೆ‌.ಆರ್ ಮಾರ್ಕೆಟ್, ಲಾಲ್ ಬಾಗ್, ವಿಜಯನಗರ, ರಾಜಾಜಿನಗರ, ಜಯನಗರ, ಕಾರ್ಪೋರೇಷನ್, ಎಲಚೇನಹಳ್ಳಿ, ಕೋನನಕುಂಟೆ, ಬನಶಂಕರಿ, ಕುಮಾರಸ್ವಾಮಿ ಲೇಔಟ್​​ ಸೇರಿ ಹಲವು ಕಡೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಈ ಮಳೆ ಇನ್ನೆರಡು ಗಂಟೆಗಳ ಕಾಲ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.

ಇನ್ನು, ದಿಢೀರ್​ ಮಳೆಯಿಂದ ನಗರದ ಬೀದಿ ಬದಿ ವ್ಯಾಪಾರಸ್ಥರು ಹಾಗೂ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಏಕಾಏಕಿಯಾಗಿ ಧಾರಾಕಾರ ಮಳೆಯಾಗಿದ್ದರಿಂದ ಬೈಕ್​ ಸವಾರರು ಮಳೆಯಿಂದ ತಪ್ಪಿಸಿಕೊಳ್ಳಲು ಫ್ಲೈಓವರ್​ ಕೆಳಗೆ ನಿಂತುಕೊಂಡು ಹರಸಾಹಸ ಪಡುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಗುಡುಗು ಸಮೇತ ಧಾರಾಕಾರ ಮಳೆ.. ಎಲ್ಲೆಲ್ಲೂ ಟ್ರಾಫಿಕ್​.. ಇನ್ನೆಷ್ಟು ದಿನ?

https://newsfirstlive.com/wp-content/uploads/2024/06/BNG-RAIN-10.jpg

Load More