newsfirstkannada.com

ಇಂದಿನಿಂದ 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ.. ಯೆಲ್ಲೋ ಅಲರ್ಟ್ ಘೋಷಣೆ

Share :

Published June 5, 2024 at 9:07am

Update June 5, 2024 at 9:08am

  ಈಗಾಗಲೇ ಕೆಲವು ಕಡೆ ಮಳೆಯಿಂದ ತೊಂದರೆ ಅನುಭವಿಸಿರುವ ಜನ

  ಇಂದು ಕೂಡ ಹಲವು ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟ ಮಾಡಲಿದ್ದಾನೆ

  ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆ ಇದೆ ಗೊತ್ತಾ?

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ 5 ದಿನಗಳ ಕಾಲ ರಾಜ್ಯದ 17 ಜಿಲ್ಲೆಗಳಿಗೆ ವರುಣಾರ್ಭಟ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಸಿಲಿಕಾನ್​ ಸಿಟಿಯಲ್ಲಿ ಮೋಡ ಕವಿದ ವಾತಾವರಣವಿದ್ದು ಸೂರ್ಯ ಹಾಗೇ ಬಂದು ಹೀಗೆ ಹೋಗಿದ್ದಾನೆ. ಹೀಗಾಗಿ ನಗರದ ಜನರಿಗೆ ತಂಪಾದ ಗಾಳಿ ಜೊತೆಗೆ ಚಳಿಯ ಅನುಭವವಾಗುತ್ತಿದೆ. ಮಾಹಿತಿ ಪ್ರಕಾರ ನಗರದಲ್ಲಿ ಇಂದು ಕೂಡ ವರುಣ ಸದ್ದು ಮಾಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ಈಗಾಗಲೇ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮಳೆಯಿಂದ ಸಮಸ್ಯೆ ಅನುಭವಿಸಿದ್ಯಾರು? ಆದರೆ ಇಂದು ಕೂಡ ಹಲವು ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟ ನಡೆಸಲಿರುವ ಮುನ್ಸೂಚನೆ ಇದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಎಚ್ಚರಿಕೆಯ ಸಂದೇಶ ಕೊಟ್ಟಿದೆ.

ಇದನ್ನೂ ಓದಿ: ನಂಬಿಕೆ ಉಳಿಸಿಕೊಂಡ ವಿಜಯೇಂದ್ರ.. ಕಾಂಗ್ರೆಸ್​ ಕಟ್ಟಿ ಹಾಕುವಲ್ಲಿ ಯಶಸ್ವಿ ಆಗಿದ್ದು ಹೇಗೆ..?

ರಾಜ್ಯದ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ. ಗುಡುಗು ಮಿಂಚು, ಗಾಳಿ ಸಹಿತ ಮಳೆ ಆಗಬಹುದು. ಹೀಗಾಗಿ ಯೆಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿನಿಂದ 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ.. ಯೆಲ್ಲೋ ಅಲರ್ಟ್ ಘೋಷಣೆ

https://newsfirstlive.com/wp-content/uploads/2023/12/BNG_RAIN-5-1.jpg

Load More